ಬೆಂಗಳೂರು: ತಮಿಳುನಾಡಿನಲ್ಲಿ ಕೋವಿಡ್ ಸಂಖ್ಯೆ ಕೈಮೀರಿ ಹೋಗುತ್ತಿದೆ. ಇದರಿಂದ ಸಾಕಷ್ಟು ತಮಿಳಿಗರು ಕರ್ನಾಟಕಕ್ಕೆ ಕಳ್ಳದಾರಿಯಲ್ಲಿ ಹೆಚ್ಚಾಗಿ ಬರುತ್ತಿದ್ದು, ಮತ್ತೆ ಕೊರೊನಾ ಆತಂಕ ಹೆಚ್ಚಾಗಿದೆ.
ಇದಕ್ಕೆ ಕಡಿವಾಣ ಹಾಕೋದಕ್ಕೆ ನಮ್ಮ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಆದರೆ ಎಸ್ಪಿ ವಾರ್ನಿಂಗ್ ನೀಡಿದ್ರೂ ಪ್ರಯೋಜನವಾಗಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ನೂರಾರು ವಾಹನಗಳು ಕರ್ನಾಟಕಕ್ಕೆ ಲಗ್ಗೆ ಇಡುತ್ತಿವೆ. ಮಾಧ್ಯಮಗಳು ವರದಿ ಮಾಡಿದ ನಂತರ ಎಲ್ಲಾ ಅಧಿಕಾರಿಗಳು ಸಹ ಎಚ್ಚೆತ್ತುಕೊಂಡು ಕಳ್ಳ ದಾರಿಗಳನೆಲ್ಲ ಮುಚ್ಚಿಸಿದ್ರು. ಇದೀಗ ಕಳ್ಳ ದಾರಿ ಎಲ್ಲಡೆ ಓಪನ್ ಆಗಿರೋದ್ರಿಂದ ಮತ್ತೆ ಗಡಿಭಾಗ ಅತ್ತಿಬೆಲೆಯ ಚೆಕ್ಪೋಸ್ಟ್ ಮುಖಾಂತರ ಬೇರೆ ಬೇರೆ ಕಾರಣಗಳನ್ನು ಹೇಳಿಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ.
ಪಾಸ್ ಮತ್ತು ಮೆಡಿಕಲ್ ಚೆಕಪ್ ಇದ್ದವರಿಗೆ ಮಾತ್ರ ಇಲ್ಲಿ ಪ್ರವೇಶವಿದೆ. ಆದರೂ ಕೆಲವರು ಪಾಸ್ ಇಲ್ಲದೇ ನೆಪ ಹೇಳಿ ಬರೋದಕ್ಕೆ ಶುರು ಮಾಡಿದ್ದಾರೆ. ಕರ್ನಾಟಕ ಸರ್ಕಾರ ತಮಿಳುನಾಡಿನ ಜನರನ್ನು ಬಿಡೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ರು, ಜನರು ಮಾತ್ರ ಬರೋದನ್ನ ನಿಲ್ಲಿಸಿಲ್ಲ. ಒಟ್ಟಿನಲ್ಲಿ ಈ ಕೋವಿಡ್ನ ಅವಾಂತರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಡಿಮೆ ಆಗುವ ಲಕ್ಷಣಗಳು ಮಾತ್ರ ಕಾಣುತ್ತಿಲ್ಲ.