ETV Bharat / state

ಕನ್ನಡ ರಾಜ್ಯೋತ್ಸವ: SSLC ಟಾಪರ್ಸ್ ಗೆ ಚಿನ್ನದ ನಾಣ್ಯ ವಿತರಣೆ.. - ಈಟಿವಿ ಭಾರತ ಕನ್ನಡ

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸದ ವಿದ್ಯಾರ್ಥಿಗಳಿಗೆ ಹುಲಿಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿನ್ನದ ನಾಣ್ಯ ನೀಡಿ ಗೌರವಿಸಲಾಯಿತು

kn_bng_01_gold
SSLC ಟಾಪರ್ಸ್ ಗೆ ಚಿನ್ನದ ನಾಣ್ಯ ವಿತರಣೆ
author img

By

Published : Nov 1, 2022, 8:58 PM IST

ದೊಡ್ಡಬಳ್ಳಾಪುರ: ರಾಜ್ಯೋತ್ಸವದ ನಿಮಿತ್ತ SSLC ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇಂದು ತಾಲೂಕಿನ ಹುಲಿಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿನ್ನದ ನಾಣ್ಯ ಕೊಟ್ಟು ಗೌರವಿಸಲಾಯಿತು.

67ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ SSLC ಪರೀಕ್ಷೆಯಲ್ಲಿ ಟಾಪರ್ ಆದ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯ ನೀಡಿ ಪ್ರೋತ್ಸಾಹಿಸಲಾಯಿತು. 2020-21ನೇ ಸಾಲಿನಲ್ಲಿ ರ‍್ಯಾಂಕ್ ವಿದ್ಯಾರ್ಥಿಗಳಾದ ತೇಜಸ್, ನಿವೇದಿತಾ, ಯಶಸ್ವಿನಿ ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯವನ್ನು ವಿತರಣೆ ಮಾಡಲಾಯಿತು.

ಬಳಿಕ ಎಂಪಿಸಿಎಸ್ ಅಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ, ಹಿಂದೆ ನಾವು ವಿದ್ಯಾಭ್ಯಾಸ ಮಾಡುತ್ತಿದ್ದ 80, 90ರ ದಶಕದಲ್ಲಿ ಪೆನ್ನು, ಪುಸ್ತಕಕ್ಕೂ ಪರದಾಡುವಂತ ಪರಿಸ್ಥಿತಿ ಇತ್ತು. ಈಗ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವೆ. ನಮ್ಮ ಕುಟುಂಬದ ಹಿರಿಯರ ಆಶಯದಂತೆ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷ SSLCಯಲ್ಲಿ ಅತಿಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯವನ್ನು ಸುಮಾರು 20 ವರ್ಷಗಳಿಂದ ನೀಡುತ್ತಾ ಬಂದಿದ್ದೇವೆ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಧನೆ ಮಾಡುವ ಛಲ ಬರಲಿದೆ ಎಂದರು.

SSLC ಟಾಪರ್ಸ್ ಗೆ ಚಿನ್ನದ ನಾಣ್ಯ ವಿತರಣೆ

ಪ್ರೌಢಶಾಲೆಯ ಮುಖ್ಯಶಿಕ್ಷಕ ಮುನಿಕೃಷ್ಣಪ್ಪ ಮಾತನಾಡಿ, ನಮ್ಮ ನಾಡು ಅನೇಕ ಮಹನೀಯರನ್ನು ದೇಶ, ವಿಶ್ವಕ್ಕೆ ನೀಡಿದೆ. ನಮ್ಮ ಪುಣ್ಯಭೂಮಿಯಲ್ಲಿ ಭಕ್ತ ಶ್ರೇಷ್ಠರು, ಪುಣ್ಯಪುರುಷರು, ದಾಸ ಶ್ರೇಷ್ಠರು ಕನ್ನಡದ ಬೆಳವಣಿಗೆಗೆ ತಮ್ಮದೆ ಆದ ಕೊಡಿಗೆ ನೀಡಿದ್ದಾರೆ ಎಂದರು.

ಇದನ್ನೂ ಓದಿ: ಮಣಿಪಾಲ - ಮಂಗಳೂರು ವಿಮಾನ ನಿಲ್ದಾಣದ ನಡುವೆ 'ಕರಾವಳಿ ಕನ್ನಡ ತೇರು' ವೋಲ್ವೋ ಬಸ್ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.