ದೊಡ್ಡಬಳ್ಳಾಪುರ: ಲಾಕ್ಡೌನ್ ನಡುವೆ ಮನೆಯಿಂದ ಹೊರಬಂದು ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದ ತಂದೆ-ತಾಯಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಪೋಷಕರು ಅಪ್ರಾಪ್ತ ಮಗನಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದನ್ನು ಗಮನಿಸಿದ ಎಸ್ಪಿ ರವಿ ಡಿ ಚನ್ನಣ್ಣನವರ್ ನಡು ರಸ್ತೆಯಲ್ಲಿ ಕಾರು ತಡೆದ ತಂದೆ-ತಾಯಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿರುವ ಬದಲು ಹೊರಗೆ ಬಂದದ್ದು ತಪ್ಪು, ಅದರಲ್ಲೂ ಅಪ್ರಾಪ್ತ ಮಗನಿಗೆ ಕಾರ್ ಡ್ರೈವಿಂಗ್ ಹೇಳಿ ಕೊಡುತ್ತಿರುವುದು ಕಾನೂನುಬಾಹಿರವೆಂದು ಅವರಿಗೆ ಬುದ್ದಿ ಹೇಳಿ ಪ್ರಕರಣ ದಾಖಲಿಸಿ ಕಾರನ್ನ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದರು.