ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಪಂಚಾಯಿತಿಗೆ ಗಾಂಧಿ ಜಯಂತಿಯಂದೇ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಗಾಂಧಿ ಜಯಂತಿ ಆಚರಣೆ ಮಾಡಿ ಕಚೇರಿಗೆ ಬಾಗಿಲು ಹಾಕಿ ಹೋಗಲಾಗಿತ್ತು. ಸಿಬ್ಬಂದಿ ಮನೆಗೆ ಹೋದ ನಂತರ ಈ ಕೃತ್ಯ ಎಸಗಲಾಗಿದೆ.
ಈ ಬಗ್ಗೆ ದೇವನಹಳ್ಳಿ ತಾಲೂಕು ಪಂಚಾಯಿತಿ ಇಒ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿಡಿಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ. ಪ್ರತಿ ವರ್ಷ ದಸರಾ ಹಬ್ಬಕ್ಕೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಬೋನಸ್ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಬೋನಸ್ ನೀಡಲು ಪಿಡಿಒ ನಿರಾಕರಿಸಿದ್ದಾರೆ.
ಈ ಕಾರಣಕ್ಕೆ ಸಿಬ್ಬಂದಿಗಳೇ ಆಕ್ರೋಶಗೊಂಡು ಈ ರೀತಿಯ ಕೃತ್ಯ ಮಾಡಲಾಗಿದೆ ಎಂಬ ಆರೋಪಿಗಳು ಕೇಳಿ ಬರುತ್ತಿವೆ. ಗ್ರಾಮಪಂಚಾಯತ್ನಲ್ಲಿರುವ ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಮಾಡಲಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ರಸ್ತೆ ಸಮಸ್ಯೆ ಕಂಡು ಧರೆಗಿಳಿದ ದೇವತೆ..!