ETV Bharat / state

ಗೃಹ ಮಂಡಳಿ‌ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್​​ ಬಚ್ಚೇಗೌಡ! - ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರ

ರಾಜ್ಯ ಉಪ ಚುನಾವಣೆ ಘೋಷಣೆಯಾದ ನಂತರ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಸಿಎಂಗೆ ತಲೆನೋವಾಗಿತ್ತು. ‌ಬಂಡಾಯ ಎದ್ದವರಿಗೆ ಸಿಎಂ ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನ‌ ನೀಡಿ ಇಂದು ಆದೇಶ ಹೊರಡಿಸಿದ್ರು. ಆದ್ರೆ ಶರತ್ ಬಚ್ಚೇಗೌಡ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನ ತಿರಸ್ಕಾರ ಮಾಡಿದ್ದಾರೆ.

ಗೃಹ ಮಂಡಳಿ‌ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ
author img

By

Published : Oct 9, 2019, 9:51 PM IST

ಹೋಸಕೋಟೆ: ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಿದ ಬೆನ್ನೆಲ್ಲೇ ಬಿಜೆಪಿ ಟಿಕೆಟ್​​ನ ಪ್ರಬಲ ಆಕಾಂಕ್ಷಿ ಶರತ್ ಬಚ್ಚೇಗೌಡರನ್ನ ಮನವೊಲಿಸಲು ಸಿಎಂ ಯಡಿಯೂರಪ್ಪ ಹರಸಹಾಸ ಮಾಡಿದ್ರು.‌‌ ಆದ್ರೆ ಇದಕ್ಕೊಪ್ಪದ ಶರತ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ ನಂತರ ಶರತ್​ರನ್ನ ಸಮಾಧಾನ ಮಾಡಲು ಗೃಹ ಮಂಡಳಿ‌ ಅಧ್ಯಕ್ಷರಾಗಿ ನೇಮಿಸಿ ಸಿಎಂ ಆದೇಶಿಸಿದ್ದಾರೆ.

ರಾಜ್ಯ ಉಪ ಚುನಾವಣೆ ಘೋಷಣೆಯಾದ ನಂತರ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಸಿಎಂಗೆ ತಲೆನೋವಾಗಿದೆ.‌ ಆದ್ರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಂಡಾಯವೆದ್ದಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ಸಿಎಂ ಬಿಎಸ್​ವೈ ನಿಗಮ‌ ಮಂಡಳಿ ಅಧ್ಯಕ್ಷ ಸ್ಥಾನ‌ ನೀಡಿ ಇಂದು ಆದೇಶ ಹೊರಡಿಸಿದ್ದಾರೆ.

ಗೃಹ ಮಂಡಳಿ‌ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ

ಆದ್ರೆ ಇದಕ್ಕೊಪ್ಪದ ಶರತ್ ಬಚ್ಚೇಗೌಡ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನ ತಿರಸ್ಕಾರ ಮಾಡಿದ್ದಾರೆ. ಹೊಸಕೋಟೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶರತ್ ಬಚ್ಚೇಗೌಡ, ಸಿಎಂ ಮೇಲೆ ನನಗೆ ಅಪಾರ ಗೌರವವಿದೆ. ಗೃಹ ಮಂಡಳಿಯಾಗಲಿ ಯಾವುದೇ ನಿಗಮ ಮಂಡಳಿಯಾಗಲಿ ನನಗೆ ಬೇಡ ಅಂತಾ ತಿರಸ್ಕಾರ ಮಾಡಿದ್ದಾರೆ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಹಿನ್ನೆಲೆ ಉನ್ನತ ಜವಾಬ್ದಾರಿ ಬೇಡ ಎಂದು ಟಿಕೆಟ್ ಸಿಗದೇ ಇದ್ರು ಸ್ವಾಭಿಮಾನಿಯಾಗಿ ಪಕ್ಷೇತರನಾಗಿ ಕಣಕ್ಕೆ ಇಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಅನರ್ಹ ಶಾಸಕರ ಪ್ರಕರಣ ಕೋರ್ಟ್​ನಲ್ಲಿದ್ದು, ತೀರ್ಪಿನ ಮೇಲೆ ಟಿಕೆಟ್ ನಿರ್ಧಾರವಾಗಲಿದೆ ಎಂದರು.

ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಗ್ಯಾರಂಟಿ. ಅದರಲ್ಲಿ ಅನುಮಾನವೇ ಬೇಡ ಅಂತಾ ಶರತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ರು. ಇನ್ನು ಶರತ್ ಬಚ್ಚೇಗೌಡರ ಈ ಹೇಳಿಕೆ ಸಿಎಂಗೆ ತಲೆನೋವಾಗಿ ಪರಿಣಮಿಸಿದ್ದು, ಹೊಸಕೋಟೆ ಉಪ ಕಣ ಮುಂದೆ ಸಾಕಷ್ಟು ತಿರುವು ಪಡೆದುಕೊಳ್ಳಲಿದೆ.

Intro:ಹೊಸಕೋಟೆ:

ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ....ಹೊಸಕೋಟೆ ಉಪಚುನಾವಣೆಗೆ ಸ್ಪರ್ಧಿಸಲು ಒಲವು, ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ.....

ರಾಜ್ಯ ಉಪಚುನಾವಣೆ ಘೋಷಣೆಯಾದ ನಂತರ ಅನರ್ಹ ಶಾಸಕ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದೇ ಸಿಎಂಗೆ ತಲೆನೊವ್ವಾಗಿತ್ತು.‌ ಆದ್ರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಂಡಾಯವೆದ್ದಿದ್ದ ಟಿಕೆಟ್ ಆಕಾಂಕ್ಷಿ ಗಳಿಗೆ ಸಿಎಂ ಬಿಎಸ್ ವೈ ನಿಗಮ‌ಮಂಡಳಿ ಅಧ್ಯಕ್ಷ ಸ್ಥಾನ‌ ನೀಡಿ ಇಂದು ಆದೇಶ ಹೊರಡಿಸಿದ್ದಾರೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಅನರ್ಹ ಶಾಸಕ ಎಂಟಿಬಿಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಿರುವ ಸಿಎಂ ಪ್ರಭಲ ಆಕಾಂಕ್ಷಿ ಶರತ್ ಬಚ್ಚೇಗೌಡ ರನ್ನ ಮನವೊಲಿಸಲು ಹರಸಹಾಸ ಮಾಡಿದ್ರು.‌‌ ಆದ್ರೆ ಇದಕ್ಕೊಪ್ಪದ ಶರತ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ ಬೆನ್ನಲೆ ಶರತ್ ರನ್ನ ಸಮಾಧಾನ ಮಾಡಲು ಗೃಹ ಮಂಡಳಿ‌ ಅಧ್ಯಕ್ಷರಾಗಿ ನೇಮಿಸಿ ಸಿಎಂ ಆದೇಶಿಸಿದ್ದಾರೆ.

Body:ಆದ್ರೆ ಇದಕ್ಕೊಪ್ಪದ ಶರತ್ ಬಚ್ಚೇಗೌಡ ಗೃಹಮಂಡಳಿ ಅಧ್ಯಕ್ಷ ಸ್ಥಾನವನ್ನ ಖಡಖಂಡಿತವಾಗಿ ತಿರಸ್ಕಾರ ಮಾಡಿದ್ದಾರೆ. ಹೊಸಕೋಟೆಯಲ್ಲಿ ತುರ್ತು ಪತ್ರಿಕಾಗೊಷ್ಟಿ ನಡೆಸಿದ ಶರತ್ ಬಚ್ಚೇಗೌಡ ಸಿಎಂ ಮೇಲೆ ನನಗೆ ಅಪಾರ ಗೌರವವಿದೆ. ಗೃಹಮಂಡಳಿಯಾಗಲಿ ಯಾವುದೇ ನಿಗಮಮಂಡಳಿಯಾಗಲಿ ನನಗೆ ಬೇಡ ಅಂತಾ ತಿರಸ್ಕಾರ ಮಾಡಿದ್ದಾರೆ. ಜತೆಗೆ ಸದ್ಯದ ಪರಿಸ್ಥಿತಿಯಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಹಿನ್ನಲೆ ಉನ್ನತ ಜವಾಬ್ದಾರಿ ಬೇಡ ಎಂದು ಟಿಕೆಟ್ ಸಿಗದೇ ಇದ್ರು ಸ್ವಾಭಿಮಾನಿ ಯಾಗಿ ಪಕ್ಷೇತರರಾಗಿ ಕಣಕ್ಕೆ ಇಳಿಯೋದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನೂ
ಅನರ್ಹ ಶಾಸಕರ ಪ್ರಕರಣ ಕೋರ್ಟ್ ನಲ್ಲಿದ್ದು, ತೀರ್ಪಿನ ಮೇಲೆ ಟಿಕೆಟ್ ನಿರ್ಧಾರವಾಗಲಿದೆ.

Conclusion:ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕಿಳಿಯುವುದು ಗ್ಯಾರಂಟಿ ಅದರಲ್ಲಿ ಅನುಮಾನವೇ ಬೇಡ ಅಂತಾ ಶರತ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ರು. ಇನ್ನೂ ಶರತ್ ಬಚ್ಚೇಗೌಡರ ಈ ಹೇಳಿಕೆ ಸಿಎಂ ಗೆ ತಲೆನೊವ್ವಾಗಿ ಪರಿಣಮಿಸಿದ್ದು, ಹೊಸಕೋಟೆ ಉಪಕಣ ಮುಂದೆ ಸಾಕಷ್ಟು ಪಡೆದುಕೊಳ್ಳಲಿದೆ.

ಬೈಟ್: ಶರತ್ ಬಚ್ಚೇಗೌಡ, ಬಿಜೆಪಿ ಟಿಕೆಟ್ ಆಕಾಂಕ್ಷಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.