ETV Bharat / state

ಸ್ನಾನ ಗೃಹದಲ್ಲಿ ಜಾರಿ ಬಿದ್ದ ಹಿರಿಯ ನಟಿ ಡಾ. ಲೀಲಾವತಿ ಬೆನ್ನುಮೂಳೆಗೆ ಸಣ್ಣ ಪೆಟ್ಟು: ಒಂದು ತಿಂಗಳ ವಿಶ್ರಾಂತಿ - Senior Actress Leelavathi got injured

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿರುವ ಕನ್ನಡದ ಹಿರಿಯ ನಟಿ ಡಾ. ಲೀಲಾವತಿ ಅವರು ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ.

senior-actress-leelavathi-got-injured
ಕಾಲು ಜಾರಿ ಬಿದ್ದ ನಟಿ ಲೀಲಾವತಿ
author img

By

Published : Aug 6, 2021, 11:05 PM IST

Updated : Aug 7, 2021, 2:42 PM IST

ನೆಲಮಂಗಲ: ಹಿರಿಯ ನಟಿ ಡಾ. ಲೀಲಾವತಿ ಅವರಿಗೆ ಸ್ನಾನಗೃಹದಲ್ಲಿ ಜಾರಿ ಬಿದ್ದು ಬೆನ್ನುಮೂಳೆಗೆ ಸಣ್ಣ ಪೆಟ್ಟಾಗಿದ್ದು, ವೈದ್ಯರ ಸಲಹೆಯಂತೆ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಡಾ. ಲೀಲಾವತಿ

ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿರುವ ಕನ್ನಡದ ಹಿರಿಯ ನಟಿ ಡಾ. ಲೀಲಾವತಿ ಅವರು ಇಂದು ಸಂಜೆ ಸ್ನಾನಗೃಹಕ್ಕೆ ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಸ್ನಾನಗೃಹದ ಚಿಲಕ ತೆಗೆಯಲು ಸಾಧ್ಯವಾಗದೇ ಮುಕ್ಕಾಲು ತಾಸು ಅಲ್ಲಿಯೇ ಕಳೆದಿದ್ದಾರೆ. ಸಹಾಯಕ್ಕಾಗಿ ಕೂಗಿದ್ದಾರೆ, ಯಾರೂ ಬರದಿದ್ದಾಗ ತಾವೇ ಎದ್ದು ಬಂದಿದ್ದಾರೆ.

ಬಳಿಕ ಮಗ ವಿನೋದ್ ರಾಜ್​ಗೆ ವಿಷಯ ತಿಳಿಸಿದ್ದು, ವಿನೋದ್ ನೋವಿನಿಂದ ನರಳುತ್ತಿದ್ಧ ತಮ್ಮ ತಾಯಿಯನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೆನ್ನುಮೂಳೆಗೆ ಸಣ್ಣ ಪ್ರಮಾಣದ ಪೆಟ್ಟಾಗಿದ್ದು, ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಿಂದ ನಟಿಯಾಗುತ್ತಿರೋದು ಇದೇ ಮೊದಲು.. ಸೊಸೆ ಕುರಿತು ಮಾವಂದಿರಾದ 'ಅಣ್ತಮ್ಮಾ' ಹೀಗಂದರು..

Last Updated : Aug 7, 2021, 2:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.