ETV Bharat / state

ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್... - ಹಿರಿಯ ನಟ ರಾಜೇಶ್ ಅಂತ್ಯಕ್ರಿಯೆ

ಅಭಿಮಾನಿಯ ಮನವಿಯಂತೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಹಿರಿಯ ನಟ ಕಲಾತಪಸ್ವಿ ರಾಜೇಶ್​ ಅವರ ಅಂತ್ಯಸಂಸ್ಕಾರ ನೆರವೇರಿದೆ.

senior-actor-rajesh-funeral-in-govindapura
ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್
author img

By

Published : Feb 19, 2022, 7:01 PM IST

Updated : Feb 19, 2022, 7:44 PM IST

ನೆಲಮಂಗಲ: ಅಭಿಮಾನಿಯ ಮನವಿಯಂತೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಹಿರಿಯ ನಟ, ಕಲಾತಪಸ್ವಿ ರಾಜೇಶ್​ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಳಿಯ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಯಿತು.

senior-actor-rajesh-funeral-in-govindapura
ಅಂತಿಮ ವಿಧಿವಿಧಾನ ಬಳಿಕ ಸಮಾಧಿಗೆ ನಮನ

ರಾಜೇಶ್ ಅವರ ಅಭಿಮಾನಿ ಸಿದ್ದಲಿಂಗಯ್ಯ ಎಂಬುವರು ಗೋವಿಂದಪುರ ಗ್ರಾಮದಲ್ಲಿ ಅಂತ್ಯಕ್ರಿಯೆಗಾಗಿ ತಮ್ಮ 10 ಗುಂಟೆ ಜಾಗವನ್ನು ನೀಡಿದ್ದಾರೆ. ಪೊಲೀಸ್​ ಸಿಬ್ಬಂದಿಯು ಸರ್ಕಾರಿ ಗೌರವ ಸಲ್ಲಿಸಿದರು. ಹಾಲುಮತ ಸಂಪ್ರದಾಯದಂತೆ ರಾಜೇಶ್ ಅಂತ್ಯಕ್ರಿಯೆ ಜರುಗಿತು.

ಮಣ್ಣಲ್ಲಿ ಮಣ್ಣಾದ ಹಿರಿಯ ನಟ ಕಲಾತಪಸ್ವಿ ರಾಜೇಶ್

ಇದನ್ನೂ ಓದಿ: ತಾತನ ಅಂತಿಮ ದರ್ಶನ ಪಡೆದ ನಟಿ ಐಶ್ವರ್ಯ ಅರ್ಜುನ್​

ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಅವರು ಇಂದು ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದರು. ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜೇಶ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ರಾಜೇಶ್ ಅವರ ಅಂತಿಮ ದರ್ಶನ ಪಡೆದಿದ್ದರು.

Last Updated : Feb 19, 2022, 7:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.