ETV Bharat / state

ವಿದೇಶದಿಂದ 130 ಜನರ ಆಗಮನ: ಆಕಾಶ್ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆ - ಕೊರೊನಾ ವೈರಸ್‌ ಚಿಕಿತ್ಸೆ

ವಿದೇಶದಿಂದ ಬಂದ 130 ಪ್ರಯಾಣಿಕರನ್ನು ಆಕಾಶ್ ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿದೆ.

Covid-19 latest news  ಭಾರತದಲ್ಲಿ ಕೊರೊನಾ ವೈರಸ್‌
ಭಾರತದಲ್ಲಿ ಕೊರೊನಾ ವೈರಸ್‌
author img

By

Published : Mar 20, 2020, 2:10 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಸಹ ವಿದೇಶದಿಂದ 130 ಪ್ರಯಾಣಿಕರು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 130 ಜನರನ್ನ ಆಕಾಶ್ ಹಾಸ್ಪಿಟಲ್​ಗೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಬೆಳಗ್ಗೆ 5.40 ರ ಸಮಯಕ್ಕೆ ದುಬೈನಿಂದ ಬಂದ ವಿಮಾನದಲ್ಲಿ 38 ಪ್ರಯಾಣಿಕರು, ಲಂಡನ್ ನಿಂದ 7.50 ರ ವಿಮಾನದಲ್ಲಿ 44 ಪ್ರಯಾಣಿಕರು, 9.45 ರ ವಿಮಾನದಲ್ಲಿ ಲುಫ್ಥಾನ್ಸ್​ ನಿಂದ ಮರಳಿದ ಪ್ರಯಾಣಿಕರನ್ನ ಏರ್​ಪೋರ್ಟ್​​ನಿಂದ ನೇರವಾಗಿ ಬಿಎಂಟಿಸಿ ಬಸ್ ಮೂಲಕ ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಆಕಾಶ್ ಆಸ್ಪತ್ರೆಯಲ್ಲಿ ಎಲ್ಲರಿಗೂ ಪ್ರಾಥಮಿಕ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಸ್ಕ್ರೀನಿಂಗ್ ಪರೀಕ್ಷೆ ಮಾಡಿ ಕೆಟಗರಿಗಳಾಗಿ ವಿಂಗಡಣೆ ಮಾಡಿ, ಬಳಿಕ A ಕೆಟಗರಿಗೆ ಬಂದವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳಿಸಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.