ನೆಲಮಂಗಲ: ಡಾಬಾಗಳಲ್ಲಿ ಪುಂಡ ಪೋಕರಿಗಳು ಕುಡಿದು ಹಾವಳಿ ಮಾಡುತ್ತಿರುವ ಹಿನ್ನೆಲೆ ನೆಲಮಂಗಲ ಪೊಲೀಸರು ಡಾಬಾಗಳ ಮೇಲೆ ದಾಳಿ ನಡೆಸಿದರು.
ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚೆನ್ನಣ್ಣವರ ಆದೇಶ ಹಿನ್ನಲೆ ನೆಲಮಂಗಲ ಉಪ ವಿಭಾಗದ ಸುಮಾರು 150ಕ್ಕೂ ಹೆಚ್ಚು ಪೊಲೀಸರು ತಾಲೂಕಿನ ರಾಜ್ಯ ಹೆದ್ದಾರಿಗಳ ಬಳಿ ಇರುವ ಡಾಬಾಗಳ ಮೇಲೆ ದಾಳಿ ನಡೆಸಿದರು. ಡಾಬಾಗಳಲ್ಲಿನ ಪುಂಡಾಟಗಳು ಕುರಿತಂತೆ ಡಾಬಾ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದರು.
ಮದ್ಯಪಾನ ಮಾಡುತ್ತಿದ್ದವರಿಗೆ ಬುದ್ಧಿವಾದ ಹೇಳಿದ ಪೊಲೀಸರು ಡಾಬಾಗಳಲ್ಲಿ ಪುಂಡಾಟ ನಡೆಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.