ETV Bharat / state

ರಾತ್ರಿ ವೇಳೆ ಜನರನ್ನು ಬೆದರಿಸಿ ದರೋಡೆ ಮಾಡ್ತಿದ್ದವರ ಬಂಧನ

ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಲಾಂಗು ಮಚ್ಚು ತೋರಿಸಿ ಹೆದರಿಸಿ ಹಣ, ಒಡವೆ ದೋಚುತ್ತಿದ್ದ ಮೋಸ್ಟ್​ ವಾಂಟೆಡ್​ ದರೋಡೆಕೋರರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಬೇಟೆಗೆ ರಾತ್ರಿ ದರೋಡೆಕೋರರ ಗ್ಯಾಂಗ್ ಅಂದರ್
author img

By

Published : Jun 25, 2019, 10:54 PM IST

ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಲಾಂಗು ಮಚ್ಚು ತೋರಿಸಿ ಚಿನ್ನ, ಹಣವನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್​ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.

ದರೋಡೆಕೋರರ ಗ್ಯಾಂಗ್ ಅಂದರ್

ಗುಡಿಬಂಡೆ ತಾಲೂಕಿನ ಸಂದೀಪ್ ರೆಡ್ಡಿ (23), ನಿವಾಸ್ ಎನ್.ವಿ. ಬಿನ್ ವೆಂಕಟೇಶಪ್ಪ (21), ಚಿಕ್ಕಬಳ್ಳಾಪುರ ಜಿಲ್ಲೆಯ ನವೀನ್ (19), ರಜನಿಕಾಂತ್ (22), ಇದೇ ಜಿಲ್ಲೆಯ ನಿವಾಸ್ ಬಿನ್ ರಾಮಚಂದ್ರಪ್ಪ (23), ಪ್ರದೀಪ್ (23) ಬಂಧಿತ ಆರೋಪಿಗಳು. ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ.‌ ಬಂಧಿತರಿಂದ ಲಾಂಗ್, ಲ್ಯಾಪ್​ಟಾಪ್, ಚಿನ್ನದ ಒಡವೆಗಳು‌ ಸೇರಿದಂತೆ 18,763,00 ರೂ.ಗಳಷ್ಟು ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿವೈಎಸ್ಪಿ‌ ಮೋಹನ್ ತಿಳಿಸಿದ್ರು.

ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗಿತ್ತು. ಸಂದೀಪ್ ರೆಡ್ಡಿ ನೇತೃತ್ವದ ಗ್ಯಾಂಗ್ ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಜನರಿಗೆ ಲಾಂಗ್ ತೋರಿಸಿ ದರೋಡೆ ಮಾಡುತ್ತಿತ್ತು. ಬಂಧಿತ ದರೋಡೆಕೋರರ ಗ್ಯಾಂಗ್​ನಲ್ಲಿ ಒಬ್ಬ ಬಾಲಕ ಇದ್ದು, ಅವನ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ. ಇನ್ನೂ ಹಲವು ಜನರು ಈ ಟೀಂನಲ್ಲಿರುವ ಅನುಮಾನವಿದ್ದು, ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಲಾಗಿದೆ. ಬಂಧಿತ ಆರೋಪಿಗಳಿಂದ ಒಂದು ಕಾರು, ಚಿನ್ನದ ಉಂಗುರ, ಎರಡು ಮೋಟಾರ್ ಸೈಕಲ್, ಮೂರು ಲಾಂಗುಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್, ಒಂದು ಚಿನ್ನದ ತಾಳಿ ಮತ್ತು ಒಂದು ಬೆಳ್ಳಿ‌ ಚೈನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:KN_BNG_01_25_night_ robbers_Ambarish_7203301
Slug: ಪೊಲೀಸ್ ಬೇಟೆಗೆ ರಾತ್ರಿ ಕಳ್ಳರು ಅಂದರ್

ರಾತ್ರಿ ವೇಳೆ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದವರು ಅಂದರ್ : ಒಬ್ಬ ಹುಡುಗ ಸೇರಿ ಏಳು ಜನರ ಬಂಧನ

ಬೆಂಗಳೂರು: ರಾತ್ರಿ ವೇಳೆ ಸಂಚಾರ ಮಾಡುವ ವಾಹನಗಳನ್ನು ಅಡ್ಡಗಟ್ಟಿ ಅವರಿಗೆ ಲಾಂಗ್‌ ಗಳನ್ನು ತೋರಿಸಿ ಅವರ ಬಳಿ ಚಿನ್ನ ಹಣವನ್ನು ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ..

ಅನಂತ್ ಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸಂದೀಪ್ ರೆಡ್ಡಿ ೨೩, ನಿವಾಸ್ ಎನ್ ವಿ ಬಿನ್ ವೆಂಕಟೇಶಪ್ಪ ೨೧, ಚಿಕ್ಕಬಳ್ಳಾಪುರ ಜಿಲ್ಲೆಯ ನವೀನ್ ೧೯, ರಜನಿಕಾಂತ್ ೨೨, ಇದೇ ಜಿಲ್ಲೆಯ ೧೭ ವರ್ಷದ ಬಾಲಕ, ನಿವಾಸ್ ಬಿನ್ ರಾಮಚಂದ್ರಪ್ಪ ೨೩, ಪ್ರದೀಪ್ ೨೩ ಬಂದಿತ ಆರೋಪಿಗಳು.. ಇವರ ಮೇಲೆ ಮೂರರಿಂದ ಇಪ್ಪತ್ತು ಪ್ರಕರಣಗಳು ದಾಖಲಾಗಿವೆ..‌ ಈ ಗ್ಯಾಂಗ್ ನ ಪ್ರಮುಖ ಲೀಡರ್ ಸಂದೀಪ್ ರೆಡ್ಡಿ ಮೇಲೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ನಗರ‌‌ ಸೇರಿದಂತೆ ಹಲವು ಠಾಣೆಗಳಲ್ಲಿ ೨೦ ಪ್ರಕರಣಗಳು ದಾಖಲಾಗಿವೆ.. ಇವರಿಂದ ಲಾಂಗ್ ,ಲ್ಯಾಪ್ ಟಾಪ್, ಚಿನ್ನದ ಒಡವೆಗಳು‌ ಸೇರಿದಂತೆ ೧೮೭೬೩೦೦ ರೂಗಳ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿವೈಎಸ್ಪಿ‌ ಮೋಹನ್ ಕುಮಾರ್ ತಿಳಿಸಿದರು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಗ್ಗಲಹಳ್ಳಿ ಗ್ರಾಮದ ಇಬ್ಬರು ಚಿನ್ನದ ಸರ ಕಳವಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿತ್ತು.. ಅಲ್ಲದೇ ಬೆಂಗಳೂರು ಗ್ರಾಮಾಂತರ, ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ದರೋಡೆ ಪ್ರಕರಣಗಳು ಹೆಚ್ಚಾಗಿದ್ದು, ಈ ದರೋಡೆ ಗ್ಯಾಂಗ್ ಅನ್ನು ಬಂದಿಸಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದಿನ ಅಧೀಕ್ಷಕರಾದ ರಾಮ್‌ನಿವಾಸ್ ಸೆಟಪ್, ಹಾಲಿ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್, ದೊಡ್ಡಬಳ್ಳಾಪುರ ಉಪವಿಭಾಗದ ಉಪಾಧೀಕ್ಷಕರಾದ ಮೊಇಹನ್ ಕುಮಾರ್ ಮಾರ್ಗದರ್ಶನದಲ್ಲಿ ವಿಜಯಪುರ ವೃತ್ತದ ಸಿಪಿಐ ಪ್ರಕಾಶ್, ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಆದ ವೆಂಕಟೇಶ ಮತ್ತು ನಂದೀಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು, ಆರೋಪಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ..

ಠಾಣಾ ವ್ಯಾಪ್ತಿಯ ಬೂದಿಗೆರೆ ಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಕೈಗಾರಿಕಾ ಪ್ರದೇಶವಿದ್ದು, ಈ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ಹಾಗೂ ಬೆಂಗಳೂರಿಗೆ ಹೋಗಲು ಟೋಲ್‌ ಇಲ್ಲದಿರುವುದರಿಂದ ಪ್ರತಿ ದಿನ ಸಾವಿರಾರು ವಾಹನಗಳು ಸಂಚಾರ ನಡೆಸುತ್ತವೆ.. ಇದರಿಂದ ಈ ರಸ್ತೆಯಲ್ಲಿ ಸಂದೀಪ್ ರೆಡ್ಡಿ ನೇತೃತ್ವದ ಗ್ಯಾಂಗ್ ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಅವರಿಗೆ ಲಾಂಗ್ ತೋರಿಸಿ ದರೋಡೆ ಮಾಡುತ್ತಿದ್ದರು.. ಈ ಮಾಹಿತಿ ಪಡೆದ ನಮ್ಮ ತಂಡ ರಾತ್ತಿ ವೇಳೆ ಚೆಕ್ ಮಾಡುತ್ತಿರುವಾಗ ಮಾರುತಿ ಸ್ವಿಪ್ಡ್ ಡಿಸೈನರ್ ಕಾರಿನಲ್ಲಿ ಬರುತ್ತಿದ್ದ ದರೋಡೆಕೋರರ ಗ್ಯಾಂಗ್ ಅನ್ನು ನಮ್ಮ‌ಪೊಲೀಸ್ ಡ್ರೈವರ್ ನೋಡಿದ್ದು, ಅನುಮಾನಗೊಂಡ ಪೊಲೀಸ್ ಚಾಲಕರು ಮಾರುತಿ ಸ್ವಿಫ್ಟ್ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದಾಗ ಪೊಲೀಸ್ ಗಾಡಿಗೆ ದರೋಡೆಕೋರರು ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ..

ಈ ವೇಳೆ ದರೋಡೆಕೋರರ ಮೊಬೈಲ್ ಪೊನ್ ಗಳು ಅಲ್ಲೇ ಬಿದ್ದಿದ್ದು ಅವುಗಳಿಂದ ಆರೋಪಿಗಳನ್ನು ಹಿಡಿಯಲು ಸಹಾಯವಾಯ್ತು ಎಂದು ಡಿವೈಎಸ್ಪಿ ಮೋಹನ್ ತಿಳಿಸಿದ್ದಾರೆ.. ಅಲ್ಲದೇ ಮಾರುತಿ ಕಾರು ಕೂಡ ಇವರದಲ್ಲದೇ ಕದ್ದು ತಂದಿದ್ದು, ಕದ್ದ ಕಾರಿನಿಂದಲೇ ದರೋಡೆ ಮಾಡುತ್ತಿದ್ದರು.. ಈ ಗ್ಯಾಂಗ್ ನಲ್ಲಿ ಏಳು ಆರೋಪಗಳನ್ನು ಬಂಧಿಸಲಾಗಿದ್ದು ಅದರಲ್ಲಿ ಒಬ್ಬ ಬಾಲಕ ಇದ್ದು, ಅವನ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ.. ಉಳಿದಂತೆ ಆರು ದರೋಡೆಕೊರರನ್ನು ಬಂದಿಲಾಗಿದ್ದು, ಇನ್ನು ಹಲವು ಜನರು ಈ ಟೀಮ್ ನಲ್ಲಿ ಇರುವ ಅನುಮಾನವಿದ್ದು ಅವರನ್ನು ವಶಕ್ಕೆ ಪಡೆಯಲು ಬಲೆ ಬೀಸಲಾಗಿದೆ.. ಬಂಧಿತ ಆರೋಪಿಗಳಿಂದ ಒಂದು ಕಾರು, ಚಿನ್ನದ ಉಂಗುರ, ಎರಡು ಮೋಟಾರ್ ಸೈಕಲ್, ಮೂರು ಲಾಂಗುಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್, ಒಂದು ಚಿನ್ನದ ತಾಳಿ ಮತ್ತು ಒಂದು ಬೆಳ್ಳಿ‌ ಚೈನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ರು..
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.