ETV Bharat / state

ಸಚಿವರ ಎದುರೇ ಸಾಮಾಜಿಕ ಅಂತರ ಮರೆತು ರೇಷನ್​​ಗಾಗಿ ಮುಗಿಬಿದ್ದ ಬೀದಿ ವ್ಯಾಪಾರಿಗಳು - ಸಚಿವ ಎಂಟಿಬಿ ನಾಗರಾಜ್

ಸಚಿವರ ಮುಂದೆ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕಪ್ರೇಕ್ಷಕರಂತೆ ನಿಲ್ಲುವಂತಾಯ್ತು..

bengaluru
bengaluru
author img

By

Published : May 30, 2021, 9:34 PM IST

Updated : May 30, 2021, 10:57 PM IST

ಹೊಸಕೋಟೆ : ಕೊರೊನಾ ಎರಡನೇ ಅಲೆ ಸಂಕಷ್ಟಕ್ಕೆ ಸಿಲುಕಿದ್ದ ಹೊಸಕೋಟೆ ಜನಕ್ಕೆ ಸಚಿವ ಎಂಟಿಬಿ ನಾಗರಾಜ್ ಇಂದು ಸಾವಿರಾರು ರೇಷನ್ ಕಿಟ್​ಗಳನ್ನು ವಿತರಿಸಿದ್ರು.

ಹೊಸಕೋಟೆಯ ಅಯ್ಯಪ್ಪ ಸ್ವಾಮಿ ಟೆಂಪಲ್ ಬಳಿ ನೂರಾರು ಬೀದಿ ವ್ಯಾಪಾರಿಗಳಿಗೆ ರೇಷನ್ ಕಿಟ್​ಗಳನ್ನು ಹಂಚಿದರು. ಸಚಿವರು ಬರುವವರೆಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಲಿನಲ್ಲಿ ನಿಂತುಕೊಂಡಿದ್ದ ಜನ, ರೇಷನ್ ಕಿಟ್​​ ಕೊಡಲಾರಂಭಿಸಿದಾಗ ಗುಂಪು ಗುಂಪಾಗಿ ದಿನಸಿ ಪದಾರ್ಥವನ್ನು ಪಡೆಯಲು ಅಂತರ ಮರೆತು ಮುಗಿಬಿದ್ದರು.

ಪೊಲೀಸರು ದೂರ - ದೂರ ನಿಂತು ಸಾಲಿನಲ್ಲಿ ಬಂದು ರೇಷನ್ ಪಡೆದುಕೊಳ್ಳುವಂತೆ ಬೀದಿ ವ್ಯಾಪಾರಿಗಳಿಗೆ ಅದೆಷ್ಟೇ ಹೇಳಿದ್ರೂ ಯಾರೊಬ್ಬರೂ ಕೇರ್ ಮಾಡಲಿಲ್ಲ, ಎಲ್ಲಿ ರೇಷನ್ ಕಿಟ್​​ಗಳು ಖಾಲಿಯಾಗುತ್ತಿವೆ ಎಂಬ ಆತಂಕದಲ್ಲಿ ಗುಂಪು ಗುಂಪಾಗಿ ಮುಗಿಬಿದ್ದರು.

ಸಚಿವರ ಎದುರೇ ಸಾಮಾಜಿಕ ಅಂತರ ಮರೆತು ರೇಷನ್​​ಗಾಗಿ ಮುಗಿಬಿದ್ದ ಬೀದಿ ವ್ಯಾಪಾರಿಗಳು

ಸಾಮಾಜಿಕ ಅಂತರವನ್ನು ಕಾಪಾಡಲು ಬಾಕ್ಸ್​ಗಳನ್ನು ಹಾಕಲಾಗಿತ್ತು. ಆದರೆ, ಇದ್ಯಾವುದಕ್ಕೂ ಕ್ಯಾರೇ ಅನ್ನದ ಜನ ದಿನಸಿಗಾಗಿ ಮುಗಿಬಿದ್ದರು. ದಿನಸಿಗಾಗಿ ಕೆಲವು ಜನ ಟೋಕನ್​ಗಳನ್ನು ಹಿಡಿದುಕೊಂಡು ಬಂದರೆ ಇನ್ನು ಕೆಲವು ಜನ ಟೋಕನ್​ಗಳಿಲ್ಲದೆ ನಮಗೂ ಕೊಡಿ ನಮಗೂ ಕೊಡಿ ಎಂದು ದುಂಬಾಲು ಬಿದ್ದರು.

ಸಚಿವರ ಮುಂದೆ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕಪ್ರೇಕ್ಷಕರಂತೆ ನಿಲ್ಲುವಂತಾಯ್ತು.

Last Updated : May 30, 2021, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.