ETV Bharat / state

ವ್ಯಾಕ್ಸಿನ್​​ಗೆ ಮುಗಿಬಿದ್ದ ಜನರು: ನೋ ಸ್ಟಾಕ್ ಬೋರ್ಡ್ ನೋಡಿ ಆಕ್ರೋಶ - ದೊಡ್ಡಬಳ್ಳಾಪುರದಲ್ಲಿ ವ್ಯಾಕ್ಸಿನೇಷನ್​

ಕೊರೊನಾ ಮೂರನೇ ಅಲೆಯ ಆತಂಕ ಎದುರಾದ ಹಿನ್ನೆಲೆ ಜನರು ಕೊರೊನಾ ಲಸಿಕೆ ಪಡೆಯಲು ಧಾವಿಸಿದ್ದು, ವ್ಯಾಕ್ಸಿನ್​ ನೋ ಸ್ಟಾಕ್​ ಬೋರ್ಡ್​ ನೋಡಿ ಆಕ್ರೋಶ ಹೊರಹಾಕಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

people outrage against no vaccine board
ವ್ಯಾಕ್ಸಿನ್​ಗೆ ಮುಗಿಬಿದ್ದ ಜನರು
author img

By

Published : Jul 31, 2021, 2:02 PM IST

ದೊಡ್ಡಬಳ್ಳಾಪುರ: ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದ್ದು, ವ್ಯಾಕ್ಸಿನ್​​ಗಾಗಿ ಲಸಿಕೆ ಕೇಂದ್ರಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಕೊರತೆಯಿಂದ ನೋ ಸ್ಟಾಕ್ ಬೋರ್ಡ್ ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವ್ಯಾಕ್ಸಿನ್​ಗೆ ಮುಗಿಬಿದ್ದ ಜನರು

ದೊಡ್ಡಬಳ್ಳಾಪುರ ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಕೇರಳದಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭವಾಗಿದ್ದು, ರಾಜ್ಯಕ್ಕೂ ವ್ಯಾಪಿಸುವ ಆತಂಕವನ್ನುಂಟು ಮಾಡಿದೆ. ಇದರಿಂದ ವ್ಯಾಕ್ಸಿನ್​ಗಾಗಿ ಜನ ಲಸಿಕೆ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದಾರೆ.

ದೊಡ್ಡಬಳ್ಳಾಪುರ ಲಸಿಕೆ ಕೇಂದ್ರದಲ್ಲೂ ಸಹ ವೃದ್ಧರು ಮಹಿಳೆಯರು ಸೇರಿದಂತೆ ಜನ್ರು ಬೆಳಗಿನಿಂದ ಕ್ಯೂನಲ್ಲಿ ನಿಂತಿದ್ರು. ಆದ್ರೆ ಕೇವಲ 30 ಜನರಿಗೆ ಲಸಿಕೆ‌ ನೀಡಿ ಇದೀಗ ವ್ಯಾಕ್ಸಿನ್ ಇಲ್ಲ ಅನ್ನುತ್ತಿದ್ದಾರೆ. ಗೇಟ್​ಗೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ವ್ಯಾಕ್ಸಿನ್​ಗಾಗಿ ಬಂದ ಜನರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ಜಗಳಕ್ಕೆ ಮುಂದಾಗಿದ್ದು, ಲಸಿಕೆ ಬರುವವರೆಗೂ ರಸ್ತೆಯಲ್ಲೇ ಕೂರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.