ETV Bharat / state

ವೀಕೆಂಡ್​ ಕರ್ಫ್ಯೂಗೆ ಡೋಂಟ್‌ಕೇರ್ : ಹೋಟೆಲ್​ಗಳು ಒಪನ್​​, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ - ದೇವನಗಳ್ಳಿಯಲ್ಲಿ ವೀಕೆಂಡ್​ ಕರ್ಫ್ಯೂಗೆ ಡೋಂಟ್ ಕೇರ್ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ

ಹೋಟೆಲ್ ಒಳಗಡೆ ಗ್ರಾಹಕರನ್ನು ಬಿಟ್ಟು ಹೊರಗಡೆ ಬಾಗಿಲು ಮುಚ್ಚಿ ಉಪಹಾರ ನೀಡಿದ್ದಾರೆ. ಇದರೊಂದಿಗೆ ಸರಕಾರದ ಗೈಡ್‌ಲೈನ್ಸ್, ರೂಲ್ಸ್​​ಗಳಿಗೆ ಕಿಮ್ಮತ್ತು ನೀಡಲಿಲ್ಲ. ಈ ಬಗ್ಗೆ ಹೋಟೆಲ್‌ನವರನ್ನು ಕೇಳಿದರೆ ನಮಗೆ ಯಾವುದೇ ಭಯವಿಲ್ಲ. ನೀವು ಏನ್ ಬೇಕಾದರೂ ಮಾಡಿಕೊಳ್ಳಿ ಅಂತಾ ನಿರ್ಭಯವಾಗಿ ಉಡಾಫೆಯ ಉತ್ತರ ನೀಡಿದ್ದಾರೆ..

ವೀಕೆಂಡ್​ ಕರ್ಫ್ಯೂಗೆ ಡೋಂಟ್ ಕೇರ್
ವೀಕೆಂಡ್​ ಕರ್ಫ್ಯೂಗೆ ಡೋಂಟ್ ಕೇರ್
author img

By

Published : Jan 8, 2022, 5:19 PM IST

ಕಲಬುರಗಿ/ ದೇವನಹಳ್ಳಿ : ಕೊರೊನಾ ಉಲ್ಭಣವಾದ ಹಿನ್ನೆಲೆ ರಾಜ್ಯ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೆ ತಂದಿದೆ. ಆದರೆ, ಕಲಬುರಗಿ ನಗರದಲ್ಲಿ ಕೆಲ ಹೋಟೆಲ್ ಉದ್ಯಮಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದಂತಿದೆ. ಕದ್ದುಮುಚ್ಚಿ ಹೋಟೆಲ್‌ಗಳ ಎಸಿ ರೂಮ್‌ಗಳಲ್ಲಿ ಕುಳಿತು ಉಪಹಾರ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ವೀಕೆಂಡ್​ ಕರ್ಫ್ಯೂಗೆ ಡೋಂಟ್ ಕೇರ್..

ರಂಗ ಮಂದಿರ ಬಳಿಯ ಪ್ರತಿಷ್ಠಿತ ಸೆಂಟ್ರಲ್ ಕಾಮತ್ ಹೋಟೆಲ್ ಮಾಲೀಕರು ಸರ್ಕಾರಿ ನಿಯಮ ಗಾಳಿಗೆ ತೂರಿದ್ದಾರೆ. ಸರ್ಕಾರದ ನಿಯಮಾನುಸಾರ ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಹೋಟೆಲ್‌ಗಳಿಂದ ಕೇವಲ ಪಾರ್ಸೆಲ್ ವ್ಯವಸ್ಥೆಗೆ ಅವಕಾಶ ನೀಡಿದೆ.

ಆದರೆ, ಹೋಟೆಲ್ ಮಾಲೀಕರು ಈ ರೂಲ್ಸ್‌​ಗೆ ಕ್ಯಾರೇ ಎನ್ನದೇ ಹೋಟೆಲ್ ಒಳಗಡೆ ಎಸಿ ಹಾಲ್‌ನಲ್ಲಿ ಕುಳಿತು ಉಪಹಾರ ಮಾಡುವುದಕ್ಕೆ ಅವಕಾಶ ನೀಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಹೋಟೆಲ್ ಒಳಗಡೆ ಗ್ರಾಹಕರನ್ನು ಬಿಟ್ಟು ಹೊರಗಡೆ ಬಾಗಿಲು ಮುಚ್ಚಿ ಉಪಹಾರ ನೀಡಿದ್ದಾರೆ. ಇದರೊಂದಿಗೆ ಸರಕಾರದ ಗೈಡ್‌ಲೈನ್ಸ್, ರೂಲ್ಸ್​​ಗಳಿಗೆ ಕಿಮ್ಮತ್ತು ನೀಡಲಿಲ್ಲ. ಈ ಬಗ್ಗೆ ಹೋಟೆಲ್‌ನವರನ್ನು ಕೇಳಿದರೆ ನಮಗೆ ಯಾವುದೇ ಭಯವಿಲ್ಲ. ನೀವು ಏನ್ ಬೇಕಾದರೂ ಮಾಡಿಕೊಳ್ಳಿ ಅಂತಾ ನಿರ್ಭಯವಾಗಿ ಉಡಾಫೆಯ ಉತ್ತರ ನೀಡಿದ್ದಾರೆ.

ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ : ಇನ್ನು ಸರ್ಕಾರದ ಆದೇಶವನ್ನು ಪಾಲಿಸದೆ ದೇವನಹಳ್ಳಿ ತಾಲೂಕಿನ ಬಿದನೂರು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ತರಗತಿ ತೆಗೆದುಕೊಂಡಿದ್ದಾರೆ. ಬಿದನೂರು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಎಸ್‌ಎಸ್​​ಎಲ್​​​ಸಿ ಮಕ್ಕಳಿಗೆ ಪಾಠ ಹೇಳಿದ್ದಾರೆ.

ಖಾಸಗಿ ಶಾಲೆಗಳನ್ನ ಕ್ಲೋಸ್ ಮಾಡಲಾಗಿದೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ತರಗತಿಗಳು ನಡೆಯುತ್ತಿರುವುದರಿಂದ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ನಿಯಮಗಳನ್ನ ಗಾಳಿಗೆ ತೂರಿ ಶಿಕ್ಷಕರು ಮಕ್ಕಳಿಗೆ ತರಗತಿಯನ್ನ ತೆಗೆದುಕೊಂಡಿರುವುದು ಕೋವಿಡ್ ಬಗೆಗಿನ ನಿರ್ಲಕ್ಷ್ಯತೆ ತೋರಿಸುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.