ETV Bharat / state

ಅಯ್ಯೋ ದುರ್ವಿಧಿಯೇ.... ಮೃತ ಮಗನ ಹೂಳಲು ಹಣವಿಲ್ಲದೇ ಕೆರೆಂಗಳದಲ್ಲಿಯೇ ಸಮಾಧಿ ಮಾಡಿದ ಹೆತ್ತವರು!

ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ತಮ್ಮ ಮಗುವನ್ನು ಹೂಳಲು ಹಣವಿಲ್ಲದೇ ಕೆರೆಯ ಪಕ್ಕದಲ್ಲಿಯೇ ಹೂತು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ಮಗನನ್ನು ಹೂಳಲು ಹಣವಿಲ್ಲದೆ ಕೆರೆಂಗಳದಲ್ಲಿಯೇ ಸಮಾಧಿ ಮಾಡಿದ ಹೆತ್ತವರು
author img

By

Published : May 13, 2019, 1:34 PM IST

ಬೆಂಗಳೂರು : ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ತಮ್ಮ ಮಗು ಹೂಳಲು ಹಣವಿಲ್ಲದೇ ಕೆರೆಯ ಪಕ್ಕದಲ್ಲಿಯೇ ಹೂತು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ - ದೊಮ್ಮಸಂದ್ರ ರಸ್ತೆಯ ನಾರಾಯಣಘಟ್ಟ ಗ್ರಾಮದ ಕೆರೆಯಂಗಳದಲ್ಲಿ ಈ ಘಟನೆ ನಡೆದಿದೆ. ಆ ಮಗುವಿನ ತಂದೆ ತಾಯಿ ಉತ್ತರ ಭಾರತದ ಮೂಲದವರಾಗಿದ್ದು, ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದರು ಎಂದು ಹೇಳಲಾಗ್ತಿದೆ.

ಮಣ್ಣಲ್ಲಿ ಹೂತಿರುವ ಮಗುವನ್ನು ಹೊರ ತೆಗೆದ ಸೂರ್ಯಸಿಟಿ ಪೊಲೀಸರು ಆ ಮಗು 11 ರಿಂದ 12 ವರ್ಷದ ಬಾಲಕ ಎಂದು ಗುರುತಿಸಿದ್ದಾರೆ.ಇನ್ನು ಆನೇಕಲ್ ತಹಶೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ಸೂರ್ಯಸಿಟಿ ಪೊಲೀಸರು ಹಾಗೂ ಖಾಸಗಿ ವೈದ್ಯರ ಸಹಕಾರದಿಂದ ನಾರಾಯಣಘಟ್ಟ ಕೆರೆಯಂಗಳಕ್ಕೆ ತೆರಳಿದ ತಂಡ ಕಾರ್ಯಾಚರಣೆ ನಡೆಸಿ ಮೃತ ಬಾಲಕನ ಶವವನ್ನು ಹೊರ ತೆಗೆದಿದೆ.

ಮೃತ ಮಗನನ್ನು ಹೂಳಲು ಹಣವಿಲ್ಲದೆ ಕೆರೆಯ ಅಂಗಳದಲ್ಲಿಯೇ ಸಮಾಧಿ ಮಾಡಿದ ಹೆತ್ತವರು
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಉತ್ತರ ಭಾರತದ ಆ ದಂಪತಿಗೆ ತಮ್ಮ ಮೃತ ಮಗನನ್ನು ದೂರದೂರಿಗೆ ಕೊಂಡೊಯ್ಯಲು ಹಣವಿಲ್ಲದೇ ಈ ರೀತಿ ಕೆರೆಯ ಅಂಗಳದಲ್ಲಿಯೇ ಹೂತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.