ETV Bharat / state

ಮಹಾಮಾರಿ ತೊಲಗಿಸಲು ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರಿಂದ ದೇವರ ಉತ್ಸವ: ಎಲ್ಲಿದೆ ಕೋವಿಡ್​​ ನಿಯಮ? - ಕೋವಿಡ್​ ನಿಯಂತ್ರಣಕ್ಕೆ ಪೂಜೆ

ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರು ತಮ್ಮ ಗುರು ಹಿರಿಯರು ಮಾಡಿಕೊಂಡು ಬಂದ ಆಚರಣೆಗಳಂತೆ, ಸದ್ಯ ಕೊರೊನಾ ರೋಗವನ್ನು ನಿಯಂತ್ರಿಸಲು ದೇವರ ಮೊರೆ ಹೋಗಿದ್ದಾರೆ.

nelamangala peoples special worship for god to control covid
ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರಿಂದ ದೇವರ ಉತ್ಸವ
author img

By

Published : Jun 17, 2021, 8:08 PM IST

ನೆಲಮಂಗಲ: ಮಹಾಮಾರಿ ಕೊರೊನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹತ್ತು ಹಲವು ನಿಯಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರೂ ಸಂಪೂರ್ಣವಾಗಿ ಕೊರೊನಾ ನಿಯಂತ್ರಿಸಲು ಆಗುತ್ತಿಲ್ಲ. ಇದರ ಮಧ್ಯೆ ಗ್ರಾಮೀಣ ಭಾಗದ ಜನರು ಕೋವಿಡ್​ ಆರ್ಭಟಕ್ಕೆ ಬೆಚ್ಚಿ ಬಿದ್ದಿದ್ದು, ದೇವರ ಮೊರೆ ಹೋಗುತ್ತಿದ್ದಾರೆ. ಅದರಂತೆ ನೆಲಮಂಗಲದ ಮಲ್ಲಾಪುರ ಗ್ರಾಮಸ್ಥರು ತಮ್ಮ ಗುರುಹಿರಿಯರು ಮಾಡಿಕೊಂಡು ಬಂದ ಆಚರಣೆಗಳಂತೆ, ಸದ್ಯ ಕೊರೊನಾ ರೋಗವನ್ನು ನಿಯಂತ್ರಿಸಲು ದೇವರ ಮೊರೆ ಹೋಗಿದ್ದಾರೆ.

ಈ ಮೊದಲು ಕಾಲರಾ, ಪ್ಲೇಗ್​​ನಂತಹ ಕಾಯಿಲೆ, ದನಕರುಗಳಿಗೆ ಸಾಂಕ್ರಾಮಿಕ ರೋಗ ಮತ್ತಿತರ ಯಾವುದೇ ರೋಗರುಜಿನೆಗಳು ಊರ ಒಳಗೆ ಬಾರದಂತೆ ಗ್ರಾಮದೇವತೆ ನಾಡಮಾರಮ್ಮನ ಮೊರೆಹೋಗ್ತಿದ್ರು. ಹಾಗೆಯೇ ಇದೀಗ ಕೊರೊನಾ ಮಾಹಾಮಾರಿಯಿಂದ ಗ್ರಾಮದ ಜನರನ್ನು ರಕ್ಷಿಸುವಂತೆ ಗ್ರಾಮ ದೇವತೆಯ ಪೂಜೆ ಮಾಡಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಮಲ್ಲಾಪುರ ಗ್ರಾಮಸ್ಥರಿಂದ ದೇವರ ಉತ್ಸವ - ಅಧಿಕಾರಿಗಳು ಏನಂದ್ರು?

ಕಳೆದ ವರ್ಷ ಕೊರೊನಾ ಮಹಾಮಾರಿ ಆರ್ಭಟ ತಗ್ಗಿಸಲು ಘೋಷಣೆಯಾದ ಲಾಕ್​ಡೌನ್ ನಿಂದ ಗ್ರಾಮದಲ್ಲಿ ಯಾವುದೇ ಆಚರಣೆ ಮಾಡಿಲ್ಲ. ಈ ಬಾರಿ ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆ ಗ್ರಾಮದ ಮನೆ ಮನೆಗಳಿಂದಲೂ ಅನ್ನ ತಂದು ದೇವಾಲಯದ ಕಲ್ಲಿನಕಂಬದ ಮುಂದೆ ರಾಶಿ ಹಾಕಿ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದಾರೆ.

ದೇವರ ಮೆರವಣಿಗೆ ಮಾಡಿ, ಕೊರೊನಾ ಮಾರಿ ಊರ ಒಳಗೆ ಬಾರದಂತೆ ಪೂಜೆ ಸಲ್ಲಿಸಿದ ನಂತರ ರಾಶಿ-ರಾಶಿ ಅನ್ನವನ್ನ ಊರಿನ ಹೊರಗೆ ಚೆಲ್ಲಿ ಬರುತ್ತಿದ್ದಾರೆ. ಊರ ಹೊರಗೆ ಅನ್ನ ಚೆಲ್ಲಿದರೆ, ಮಹಾಮಾರಿ ಅಲ್ಲೇ ಇರುತ್ತದೆ. ಊರ ಒಳಗೆ ಪ್ರವೇಶಿಸುವುದಿಲ್ಲ ಅನ್ನುವುದು ಗ್ರಾಮಸ್ಥರ ನಂಬಿಕೆಯಾಗಿದೆ.

ಲಾಕ್‌ಡೌನ್ ನಿಯಮ‌ವನ್ನು ಮಲ್ಲಾಪುರ ಗ್ರಾಮಸ್ಥರು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರವಿಲ್ಲದೇ ಗುಂಪುಗುಂಪಾಗಿ ರಾತ್ರಿ ಹೊತ್ತಿನಲ್ಲಿ ದೇವರ ಉತ್ಸವ ನೆಡೆಸಿ, ಪೂಜೆ ಸಲ್ಲಿಸಿ, ಅನ್ನವನ್ನು ಊರ ಹೊರಗೆ ಸಾಗಿಸಿದ್ದಾರೆ. ಈ ಸಂಬಂಧ ನಗರಸಭೆ ಅಧಿಕಾರಿಗಳು, ತಾಲೂಕು ಅಡಳಿತ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಉತ್ಸವದಲ್ಲಿ ಪಾಲ್ಗೊಂಡ ಗ್ರಾಮದ ಮುಖ್ಯಸ್ಥರು, ದೇವಾಲಯದ ಅರ್ಚಕರು ಸೇರಿದಂತೆ ಯಾರೇ ಶಾಮೀಲಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಕೆ. ಮಂಜುನಾಥ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.