ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ಮಲ್ಲೇಪುರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಅನುದಾನದಡಿ ಕೈಗೊಳ್ಳಲಾಗಿರುವ ಕುಂಟೆ ಅಭಿವೃದ್ಧಿ ಕಾಮಗಾರಿ ಆರಂಭಕ್ಕೂ ಮುನ್ನ ಕೂಲಿ ಕಾರ್ಮಿಕರು, ಕೋವಿಡ್-19 ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಕೆಲಸದ ಸ್ಥಳದಲ್ಲಿ ಮೂರು ಅಡಿ ಅಂತರ ದೂರ ಇರುವ ಹಾಗೆ ಕೆಲಸ ಮಾಡುತ್ತೇವೆ. ಗುಂಪು ಗುಂಪಾಗಿ ಕೆಲಸಕ್ಕೆ ಹೋಗದೇ ಕುಟುಂಬದಿಂದ ಕುಟಂಬಗಳಿಗೆ ಒಂದು ಮೀಟರ್ ಅಂತರ ಇರುವಂತೆ ನೋಡಿಕೊoಡು ಕೆಲಸಕ್ಕೆ ಹೋಗುತ್ತೇವೆ. ನಿತ್ಯ ಐದರಿಂದ ಆರು ಸಲ ನಾವು ಹಾಗೂ ನಮ್ಮ ಕುಟಂಬ ಸೋಪಿನಿಂದ ಕೈ-ಕಾಲು, ಮುಖ ತೊಳೆದುಕೊಳ್ಳುತ್ತೇವೆ. ನಾನು ಮತ್ತು ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಮುಖಕ್ಕೆ ಮಾಸ್ಕ್ ಧರಿಸುತ್ತೇವೆ.
ಪ್ರತಿಯೊoದು ಜೀವಿಯ ಆರೋಗ್ಯ, ನಮ್ಮ ಆರೋಗ್ಯ ಕಾಪಡಿಕೊಳ್ಳುವುದು ನಮ್ಮ ಕರ್ತವ್ಯ. ಕೋವಿಡ್-19 ಸೋಂಕು ಹರಡದಂತೆ ಕೂಲಿ ಕೆಲಸದ ಸ್ಥಳದಲ್ಲಿ ಮುಂಜಾಗ್ರತಾ ತೆಗೆದುಕೊಳ್ಳುವ ಬಗ್ಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.