ದೊಡ್ಡಬಳ್ಳಾಪುರ: ಅಧ್ಥಕ್ಷರಾದ ಮೇಲೆ ಎಲ್ಲಾ ಹಾಲಿನ ಒಕ್ಕೂಟಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಹಾಗೆಯೇ ದೊಡ್ಡಬಳ್ಳಾಪುರ ಹಾಲಿನ ಡೈರಿಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಚಾರಕಿಹೊಳಿ ಹೇಳಿದರು.
ಇದೇ ವೇಳೆ ನಂದಿನಿ ಹಾಲಿನ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಬೋರ್ಡ್ ಮೀಟಿಂಗ್‌ನಲ್ಲಿ ಹಾಲಿನ ಬೆಲೆ ಹೆಚ್ಚಿಸುವ ತೀರ್ಮಾನವನ್ನು ಡೈರೆಕ್ಟರ್ ಕೈಗೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಹ ಮಾತನಾಡಲಾಗಿದೆ. ಅವರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರ ಅನುಮತಿ ನಂತರ ಬೆಲೆ ಏರಿಕೆ ಮಾಡಲಾಗುವುದು ಎಂದರು.
ಬೆಲೆ ಏರಿಕೆಗೂ ಮುನ್ನ ರೈತರ ಸಲಹೆ ಪಡೆಯಲಾಗುವುದು. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ಬೆಲೆ ಏರಿಕೆಯಾಗಿಲ್ಲ. ಈ ಬಾರಿ ಖಂಡಿತ ಬೆಲೆ ಏರಿಕೆಯಾಗಲಿದೆ. ಆದರೆ, ಎಷ್ಟು ಎಂದು ಈಗಲೇ ಹೇಳಲಾಗುವುದಿಲ್ಲ ಎಂದರು.