ದೇವನಹಳ್ಳಿ: ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕ್ವಾರಂಟೈನ್ಗೆ ಹೋಗದೆ ಎಸ್ಕೇಪ್ ಆಗಲು ಯತ್ನಿಸಿದ್ದ ತಾಯಿ-ಮಗಳನ್ನು ಏರ್ಪೋರ್ಟ್ ನಿಬ್ಬಂದಿ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.
ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಈ ತಾಯಿ-ಮಗಳು ಬಂದಿದ್ದರು. ಅವರನ್ನು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇವರು ಅಧಿಕಾರಿಗಳ ಕಣ್ಣು ತಪ್ಪಿಸಿ ಟ್ಯಾಕ್ಸಿ ಹಿಡಿದು ಮನೆಗೆ ತೆರಳಲು ಮುಂದಾಗಿದ್ದರು. ಇವರ ಕೈಗೆ ಹಾಕಿದ್ದ ರೆಡ್ ಝೋನ್ ಎಂಬ ಸೀಲ್ನ್ನು ಕಂಡ ಸಿಎಸ್ಸಿ(ಸಾಮಾನ್ಯ ಸೇವಾ ಕೇಂದ್ರ) ತಂಡದ ಸದಸ್ಯರು ಈ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ತಾಯಿ-ಮಗಳನ್ನು ತರಾಟೆಗೆ ತೆಗೆದುಕೊಂಡು ಕ್ವಾರಂಟೈನ್ಗೆ ಹೋಗುವಂತೆ ಸೂಚಿಸಿದರು.
ಪುಟ್ಟ ಮಗುವಿದ್ದ ಕಾರಣ ಕ್ವಾರಂಟೈನ್ ಕೇಂದ್ರಕ್ಕೆ ಹೋಗಲು ಇವರು ನಿರಾಕರಿಸಿದ್ದರು ಎನ್ನಲಾಗುತ್ತಿದೆ.