ETV Bharat / state

ಕಾರಿನಿಂದ ಆಯಿಲ್ ಸೋರುತ್ತಿದೆ ಎಂದು ಗಮನ ಬೇರೆಡೆ ಸೆಳೆದ.. 5.9 ಲಕ್ಷ ಕಳ್ಳತನ ಮಾಡಿ ಎಸ್ಕೇಪ್​ ಆದ - ದೊಡ್ಡಬಳ್ಳಾಪುರ ಕಳ್ಳತನ ಪ್ರಕರಣ

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

money-theft-from-car-in-doddaballapur
ಕಾರಿನಿಂದ ಆಯಿಲ್ ಸೋರುತ್ತಿದೆ ಎಂದು ಗಮನ ಬೇರೆಡೆ ಸೆಳೆದು 5.9 ಲಕ್ಷ ಕಳ್ಳತನ
author img

By

Published : Oct 21, 2022, 10:42 AM IST

ದೊಡ್ಡಬಳ್ಳಾಪುರ: ಕಾರಿನ ಆಯಿಲ್ ಸೋರುತ್ತಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದು 5.9 ಲಕ್ಷ ರೂಪಾಯಿ ಹಣ ಎಗರಿಸಿದ ಘಟನೆ ದೊಡ್ಡಬಳ್ಳಾಪುರದ ಸರ್ಕಾರಿ ನೌಕರರ ಭವನ ಸಮೀಪದ ಉರ್ದು ಶಾಲೆ ಮುಂದೆ ನಡೆದಿದೆ. ಕಾರಿನ ಹಿಂಬದಿ ಸೀಟ್​​ನಲ್ಲಿ ಇಟ್ಟ ಹಣವನ್ನು ಕಳ್ಳರು ದೋಚಿದ್ದಾರೆ.

ನಾಗರಾಜ್ ಎಂಬುವರು ಜಮೀನು ನೋಂದಣಿಗಾಗಿ ನಗರದ ಉಪನೋಂದಣಿ ಅಧಿಕಾರಿಗಳ ಕಚೇರಿಗೆ ಬಂದಿದ್ದರು. ಆದರೆ ತಾಂತ್ರಿಕ ತೊಂದರೆಯಿಂದ ಜಮೀನು ನೋಂದಣಿಯಾಗದೇ, ಹಣದೊಂದಿಗೆ ಕಾರಿನ ಬಳಿಗೆ ಬಂದು ಹಿಂಬದಿಯ ಸೀಟ್​​ನಲ್ಲಿ ಬ್ಯಾಗ್ ಇಟ್ಟಿದ್ದಾರೆ. ಆಗ ಕಾರು ಹತ್ತುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾರಿನಿಂದ ಆಯಿಲ್ ಸೋರುತ್ತಿದೆ ಎಂದು ನಾಗರಾಜ್ ಅವರ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ.

ಈ ಬಗ್ಗೆ ನಗರ ನಾಗರಾಜ್ ನೀಡಿದ ದೂರಿನಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 5.9 ಲಕ್ಷ ರೂ. ಕಳ್ಳತನ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಬನವಾಸಿ ಬಳಿ ಮಾರಕಾಸ್ತ್ರ ತೋರಿಸಿ ದರೋಡೆ: 50 ಲಕ್ಷ ರೂ ಎಗರಿಸಿದ ಖದೀಮರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.