ನೆಲಮಂಗಲ: ಬೆಂಗಳೂರು ಹೊರವಲಯದ ತುಮಕೂರು ರಸ್ತೆಯ ಮಾದವಾರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ ತಿಳಿಸಿದರು.
ರೋಗಲಕ್ಷಣಗಳಿಲ್ಲದ ಸೋಂಕಿತರಿಗಾಗಿ ಕೋವಿಡ್ ಕೇರ್ ಸೆಂಟರ್ ಸಿದ್ದಪಡಿಸಲಾಗಿದೆ. ಮನೆಯಲ್ಲಿ ಹೋಂ ಕ್ವಾರಂಟೈನ್ ಒಳಗಾಗಲು ಸೌಲಭ್ಯ ಇಲ್ಲದವರು ಇಲ್ಲಿ ದಾಖಲಾಗಬಹುದು. ಬೆಂಗಳೂರಿನಲ್ಲಿ 8 ಕೋವಿಡ್ ಕೇರ್ ಸೆಂಟರ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ, BIECಯಲ್ಲಿ 5000 ಬೆಡ್‌ಗಳ ಕ್ಯಾಪಾಸಿಟಿಯ 5 ಹಾಲ್ಗಳು ಈಗಾಗಲೇ ರೆಡಿ ಇದೆ. ಹಂತಹಂತವಾಗಿ ಬೆಡ್‌ಗಳ ಸಾಮರ್ಥ್ಯ ಹೆಚ್ಚಿಸಲಾಗುವುದು. ಬಾಡಿಗೆ ಹಾಗೂ ಖರೀದಿ ಹಣಕಾಸಿನ ವಿಚಾರದಲ್ಲಿ ಗೊಂದಲಗಳಿದ್ದು, 28 ಸಾಮಗ್ರಿಗಳಿಗೆ ಒಂದು ಸೆಟ್‌ಗೆ ಒಂದು ದಿನಕ್ಕೆ 800 ರೂಪಾಯಿ ಫಿಕ್ಸ್ ಮಾಡಲಾಗಿತ್ತು. ಇದರಿಂದ 5,000 ಬೆಡ್‌ಗಳಿಗೆ ಒಂದು ತಿಂಗಳಿಗೆ 12 ಕೋಟಿ ರೂ ಆಗುತ್ತಿತ್ತು. ಕೆಲವು ಸಾಮಗ್ರಿಗಳನ್ನ ಖರೀದಿ ಮಾಡಲಾಗುವುದು, ಮರುಬಳಕೆಯ 7 ವಸ್ತುಗಳನ್ನು ಖರೀದಿಸಲಾಗುವುದು. ಮಂಚ, ಹಾಸಿಗೆ, ತಲೆದಿಂಬು, ಹೊದಿಕೆ, ಬಕೆಟ್, ಫ್ಯಾನ್, ಜಗ್ ಖರೀದಿಸಲಾಗುವುದು. ಪ್ರಾರಂಭದಲ್ಲಿ ಖರೀದಿಗೆ 7500 ಫಿಕ್ಸ್ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ 4800 ಫಿಕ್ಸ್ ಮಾಡಲಾಗಿದೆ.
ನಾನು ಬರುವ ಮೊದಲೇ 4,800 ಫಿಕ್ಸ್ ಮಾಡಲಾಗಿತ್ತು, ನಾನು ಬದಲಾಯಿಸಲು ಆಗುವುದಿಲ್ಲ. 7 ಸಾಮಗ್ರಿಗಳಿಗೆ 2 ಕೋಟಿ 40 ಲಕ್ಷ ನೀಡಿ ಖರೀದಿ ಮಾಡಲಾಗುವುದು. ಉಳಿಕೆ 21 ಸಾಮಗ್ರಿಗಳಿಗೆ 3 ಕೋಟಿ 25 ಲಕ್ಷ ಹಣವನ್ನು ಒಂದು ತಿಂಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಒಂದು ದಿನದ ಊಟಕ್ಕೆ 240 ರೂಪಾಯಿಗಳನ್ನ ಫಿಕ್ಸ್ ಮಾಡಲಾಗಿದ್ದು, ಇಸ್ಕಾನ್, ಇಂದಿರಾ ಕ್ಯಾಂಟೀನ್, ಏಜೆನ್ಸಿಗಳ ಮುಖಾಂತರ ಊಟ ವಿತರಣೆಯಾಗಲಿದೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಡಾಕ್ಟರ್ಸ್ 14 ದಿನ ಇಲ್ಲೇ ಇರಬೇಕು. ನಂತರ ಒಂದು ವಾರ ರೆಸ್ಟ್ ಪಡೆದ ನಂತರ ಕೆಲಸಕ್ಕೆ ಹಾಜರಾಗಬೇಕು. ಮೂರು ಪಾಳಿಯಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಸೋಮವಾರದೊಳಗೆ ಎಲ್ಲ ಸಿದ್ದತೆಗಳನ್ನ ಮಾಡಿ ಶುರು ಮಾಡಲಾಗುವುದು ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ವಿವರಿಸಿದರು.