ETV Bharat / state

ಮುಜರಾಯಿ ದೇವಸ್ಥಾನದಲ್ಲಿ ಪ್ರತೀ ತಿಂಗಳು ಸರಳ ಸಾಮೂಹಿಕ ವಿವಾಹ: ಕೋಟಾ ಶ್ರೀನಿವಾಸ ಪೂಜಾರಿ

ಸರಳ ವಿವಾಹದಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

minister kota srinivasa poojari talk
ಸರಳ ಸಾಮೂಹಿಕ ವಿವಾಹ
author img

By

Published : Feb 25, 2021, 8:46 PM IST

ದೊಡ್ಡಬಳ್ಳಾಪುರ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು 48 ಜೋಡಿಗಳು ದಾಂಪತ್ಯ ಜೀವಂತ ಕಾಲಿಟ್ಟರು. ನೂತನ ದಂಪತಿಗಳಿಗೆ ಆಶೀರ್ವದಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪ್ರತೀ ತಿಂಗಳು ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.

ಸರಳ ಸಾಮೂಹಿಕ ವಿವಾಹ

ಓದಿ: ಲಂಚ ಪಡೆಯುವ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಕಂದಾಯ ನಿರೀಕ್ಷಕ

ಸರಳ ಸಾಮೂಹಿಕ ವಿವಾಹ ಪ್ರೋತ್ಸಾಹಿಸುವ ಮತ್ತು ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕೆ ಸಹಾಯ ಮಾಡುವ ಕಾರಣಕ್ಕೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡುತ್ತಿದೆ. ಕಳೆದ ವರ್ಷದಲ್ಲಿ ಪ್ರಾರಂಭವಾದ ಯೋಜನೆ ಕೊರೊನಾದಿಂದ ಸಾಕಷ್ಟು ಹಿನ್ನಡೆ ಅನುಭವಿಸಿತು. ಆದರೆ ಕೊರೊನಾ ನಂತರ ರಾಜ್ಯಾದ್ಯಂತ ಸಪ್ತಪದಿ ಯೋಜನೆ ಯಶಸ್ವಿಯಾಗಿ ನೆರವೇರುತ್ತಿದೆ.

ಸರಳ ವಿವಾಹದಲ್ಲಿ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂದು ದೊಡ್ಡಬಳ್ಳಾಪುರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಆರ್ಟ್ ಆಫ್ ಲಿವಿಂಗ್​ನ ರವಿಶಂಕರ್ ಗೂರೂಜಿ, ಆನಂದ ಗೂರೂಜಿ ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೊರೊನಾ ಕಾರಣದಿಂದಾಗಿ ಸರಳ ವಿವಾಹ ಕಾರ್ಯಕ್ರಮ ವಿಳಬಂವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರತೀ ತಿಂಗಳು ದೇವಾಲಯಗಳಲ್ಲಿ ಸಪ್ತಪದಿ ಯೋಜನೆಯಡಿ ವಿವಾಹಗಳು ನೆರವೇರಲಿವೆ. ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ವಿವಾಹ ನಡೆಯುತ್ತಿರುವುದರಿಂದ ನವಜೋಡಿಗಳಿಗೆ ದೇವರ ಅನುಗ್ರಹ ಸಿಗಲಿ. ಮದುವೆ ಮಹೂರ್ತಗಳಲ್ಲಿ ಯಾವುದೇ ಗೊಂದಲವಾಗಬಾರದೆನ್ನುವ ಕಾರಣಕ್ಕೆ ನಾಲ್ಕೈದು ಮಹೂರ್ತಗಳಲ್ಲಿ ಸರಳ ವಿವಾಹ ಕಾರ್ಯಕ್ರಮ ಮಾಡಲಾಗುವುದು ಎಂದರು.

ಬಜೆಟ್ ಬಗ್ಗೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತಮ ಬಜೆಟ್ ಮಂಡನೆ ಮಾಡಲಿದ್ದಾರೆ. ದೇವಾಲಯಗಳ ಅಭಿವೃದ್ಧಿ ಹಾಗೂ ಟ್ರಸ್ಟಿಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಬಜೆಟ್​​ನಲ್ಲಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಕೇರಳ ಮತ್ತು ಆಂಧ್ರದಲ್ಲಿ ಮುಜರಾಯಿ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲೂ ದಲಿತ ಅರ್ಚಕರ ನೇಮಕ ಸರ್ಕಾರ ಮಾಡಲಿದೆಯಾ ಎಂಬ ಪ್ರಶ್ನೆಗೆ, ಇಲ್ಲಿ ದಲಿತರು ಸೇರಿದಂತೆ ಮೇಲ್ಜಾತಿಯ ಜನರು ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿದ್ದಾರೆ. ಹಿಂದಿನ ಸಂಪ್ರದಾಯವೇ ಮುಂದುವರೆಯುತ್ತೆ ಎಂದು ಹೇಳಿದರು.

ಮದುವೆ ಮಾಡಿಸುವಂತೆ ಗಲಾಟೆ, ಕೊನೆಗೂ ನಡೆಯಿತು ಆ ಜೊಡಿ ಮದುವೆ:

ರಾಜಘಟ್ಟದ ಸುಕನ್ಯಾ, ಅಟ್ಟೂರು ಲೇಔಟ್ ಮುನಿರಾಜು ಎಂಬುವರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಅರ್ಜಿ ಹಾಕಿದ್ದರು. ಆದರೆ ಅವಿವಾಹಿತರ ದೃಢೀಕರಣ ದಾಖಲೆ ಸಲ್ಲಿಸಿರಲಿಲ್ಲ. ಇದರಿಂದ ಈ ಜೋಡಿ ಅರ್ಜಿ ತಿರಸ್ಕೃತವಾಗಿತ್ತು. ಆದರೆ ಇದ್ಯಾವುದರ ಅರಿವು ಇಲ್ಲದೆ ಸುಕನ್ಯಾ ಮತ್ತು ಮುನಿರಾಜು ವಧು-ವರನ ಉಡುಪಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು. ಆದರೆ ದೇವಸ್ಥಾನದ ಆಡಳಿತ ಮಂಡಳಿ ಇವರ ವಿವಾಹಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಜೋಡಿಯ ಸಂಬಂಧಿಕರು, ಸಚಿವರ ಮುಂದೆ ಗಲಾಟೆ ಮಾಡಿದರು. ಇದರಿಂದ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತು. ಸಚಿವರ ಭರವಸೆಯ ಮೇಲೆ ಕೊನೆಗೂ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು.

ನವ ವಧು-ವರರಿಗೆ ದೇವಸ್ಥಾನ ಆಡಳಿತ ಮಂಡಳಿಯಿಂದ 55 ಸಾವಿರ ರೂ. ಪ್ರೋತ್ಸಾಹಧನ

ಸರಳ ಸಾಮೂಹಿಕ ವಿವಾಹ ಸಪ್ತಪದಿ ಕಾರ್ಯಕ್ರಮದಲ್ಲಿ ಒಟ್ಟು 48 ಜೋಡಿಗಳು ವಿವಾಹ ಜೀವನಕ್ಕೆ ಕಾಲಿಟ್ಟಿದ್ದು, ವರನಿಗೆ ಹೂವಿನ ಹಾರಕ್ಕೆ ರೂ. 5,000, ವಧುವಿಗೆ ವಸ್ತ್ರ ಮತ್ತು ಹೂವಿನ ಹಾರಕ್ಕಾಗಿ ರೂ. 10,000 ಹಾಗೂ ನಲವತ್ತು ಸಾವಿರ ಮೌಲ್ಯದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಸೇರಿದಂತೆ ವಧು-ವರರಿಗೆ ರೂ. 55,000 ಪ್ರೋತ್ಸಾಹಧನವನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.