ETV Bharat / state

ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ : ಸಚಿವ ಜಗದೀಶ್ ಶೆಟ್ಟರ್ - ನಾಯಕತ್ವ ಬದಲಾವಣೆ ವಿಚಾರ

ಮಠಾಧೀಶರು ಸಿಎಂ ಮನೆಗೆ ಈ ಹಿಂದೆಯೂ ಭೇಟಿ ನೀಡಿದ್ದರು. ಈಗಲೂ ಭೇಟಿ ನೀಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ..

Jagadish Shettar
ಜಗದೀಶ್ ಶೆಟ್ಟರ್
author img

By

Published : Jul 21, 2021, 9:54 PM IST

ದೇವನಹಳ್ಳಿ : ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ‌ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ. ಹೀಗಾಗಿ, ಈ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ ಎಂದು ಬೃಹತ್ ಮತ್ತು ಮಧ್ಯಮ, ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್​ ಹೇಳಿದರು.

ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಆಗಮಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ‌ಎಲ್ಲೂ ಸ್ಪಷ್ಟವಾಗಿ ಹೇಳಿಲ್ಲ.

ಇಲ್ವೇ ಇಲ್ಲ ನಾಯಕತ್ವ ಬದಲಾವಣೆ.. ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್

ಹೀಗಾಗಿ, ಈ ಬಗ್ಗೆ ಚರ್ಚೆ ಮಾಡೋದು ಅನವಶ್ಯಕ. ನಾನು ಇಲಾಖೆಯ ಕೆಲಸಗಳ ಮೇಲೆ ದೆಹಲಿಗೆ ತೆರಳಿದ್ದೆ. ಗುಜರಾತ್​​​ ರಾಜ್ಯ ಹಾಗೂ ಕೇಂದ್ರ ಸಚಿವ ರಾಜನಾಥ್ ಸಿಂಗ್​​ರನ್ನು ‌ಭೇಟಿಯಾಗಿದ್ದೆ. ರಾಜ್ಯದಿಂದ ದೆಹಲಿಗೆ ತೆರಳಿದರೆ ವಿಶೇಷ ಅರ್ಥ ಕಲ್ಪಿಸುವ ರೀತಿ ಆಗಿದೆ ಎಂದರು.

ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಸಂಪುಟ ಸಹೋದ್ಯೋಗಿಗಳಲ್ಲಿ ಆತಂಕ

ಮಠಾಧೀಶರು ಸಿಎಂ ಮನೆಗೆ ಈ ಹಿಂದೆಯೂ ಭೇಟಿ ನೀಡಿದ್ದರು. ಈಗಲೂ ಭೇಟಿ ನೀಡಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.