ETV Bharat / state

ಅನಧಿಕೃತ ತ್ಯಾಜ್ಯ ವಿಲೇವಾರಿ ಘಟಕವಾಗುತ್ತಿರುವ ಕೆರೆ - Waste dumping lake

ತ್ಯಾಜ್ಯವನ್ನು ಹಾಕಿದರೆ ನಿಯಮ 1937 ಕಲಂ 91 ಅನ್ವಯ ಕ್ರಿಮಿನಲ್ ಮೊಕದ್ದೊಮೆ ಹೂಡಲಾಗುವುದೆಂದು ಎಚ್ಚರಿಗೆ ನೀಡಿದ್ದರೂ ಸಹ ಇಲ್ಲಿನ ನಿವಾಸಿಗಳು ಮಾತ್ರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬೇಸಿಗೆ ಇರುವುದರಿಂದ ಕೆರೆಯಲ್ಲಿ ನೀರೆಲ್ಲಾ ಬತ್ತಿ ಹೋಗಿದೆ. ಈ ಹಿನ್ನೆಲೆ ಕೆರೆಗೆ ಮಾಂಸದ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ಸುರಿಯುತ್ತಿದ್ದಾರೆ

ಅನಧಿಕೃತ ತ್ಯಾಜ್ಯ
author img

By

Published : Apr 23, 2019, 4:51 AM IST

ಬೆಂಗಳೂರು: ಕೆರೆಗೆ ಕಟ್ಟಡಗಳ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಸುರಿಯುದಂತೆ ಅಧಿಕಾರಿಗಳು ಫಲಕವನ್ನು ಅಳವಡಿಸಿದ್ದಾರೆ. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜನರು ತ್ಯಾಜ್ಯವನ್ನು ತಂದು ಸುರಿಯುತ್ತಲೇ ಇದ್ದಾರೆ, ಜನರ ಜೀವನಾಡಿಗಳಾಗಿದ್ದ ಕೆರೆ ಬತ್ತಿಹೋಗಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನ ಕೆರೆಗಳನ್ನು ಹಾಳುಗೆಡವುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳು ಕಣ್ಣೆದುರೇ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಈ ಅವ್ಯವಸ್ತೆ ತಾಂಡವವಾಡುತ್ತಿದ್ದು, ಈ ಕೆರೆಯು ಬೆಂಗಳೂರು ಅಂತರಾಷ್ಟ್ರೀಯ ವಿಮಾನಯಾನದ ಅಧೀನಕ್ಕೆ ಒಳ ಪಡುತ್ತದೆ.

ಅನಧಿಕೃತ ತ್ಯಾಜ್ಯ

ತ್ಯಾಜ್ಯವನ್ನು ಹಾಕಿದರೆ ನಿಯಮ 1937 ಕಲಂ 91 ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದೆಂದು ಎಚ್ಚರಿಗೆ ನೀಡಿದ್ದರೂ ಸಹ ಇಲ್ಲಿನ ನಿವಾಸಿಗಳು ಮಾತ್ರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಬೇಸಿಗೆ ಇರುವುದರಿಂದ ಕೆರೆಯಲ್ಲಿ ನೀರೆಲ್ಲಾ ಬತ್ತಿ ಹೋಗಿದೆ. ಈ ಹಿನ್ನೆಲೆ ಕೆರೆಗೆ ಮಾಂಸದ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ಸುರಿಯುತ್ತಿದ್ದಾರೆ.

ಸುಮಾರು 80 ಎಕರೆಗೂ ಹೆಚ್ಚಿನ ವಿಸ್ತೀರ್ಣಹೊಂದಿರುವ ಈ ಕೆರೆ, ಈ ಹಿಂದೆ ಹತ್ತಾರು ಹಳ್ಳಿಗಳಿಗೆ ಜೀವನಾಡಿಯಾಗಿತ್ತು, ಕೆರೆ ತುಂಬಿದ್ದಾಗ ಎಲ್ಲಾ ಬೋರ್​ವೆಲ್ ಗಳಲ್ಲಿ ನೀರು ಬರುತ್ತಿತ್ತು. ಜನ ಕೃಷಿ ಚಟುವಟಿಕೆಗಳನ್ನ ನಡೆಸಿ ಜೀವನ ಸಾಗಿಸುತ್ತಿದ್ದರು. ಆದರೆ ನೀರು ಖಾಲಿಯಾದಂತೆ ಜನರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಮತ್ತೊಂದೆಡೆಇದೇ ಜನರು ಈ ಕೆರೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

Intro:ಅನಧಿಕೃತ ತ್ಯಾಜ್ಯ ವಿಲೇವಾರಿ ಘಟಕಗಳಾಗುತ್ತಿರುವ ಕೆರೆಗಳು.

ಕೆರೆಗಳಿಗೆ ಕಟ್ಟಡಗಳ ಮತ್ತು ಮಾಂಸದಂಗಡಿಗಳ ತ್ಯಾಜ್ಯವನ್ನು ಸುರಿಯುದಂತೆ ಅಧಿಕಾರಿಗಳು ಫಲಕವನ್ನು ಅಳವಡಿಸಿದ್ದಾರೆ, ಆದರೇ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತ್ಯಾಜ್ಯವನ್ನು ತಂದು ಸುರಿಯುತ್ತಲೇ ಇದ್ದಾರೆ, ಜನರ ಜೀವನಾಡಿಗಳಾಗಿದ್ದ ಕೆರೆಗಳು ಬತ್ತಿಹೋಗಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಜನ ಕೆರೆಗಳನ್ನು ಹಾಳುಗೆಡುವುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಕಣ್ಣೆದುರೇ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಮಚ್ಚಿ ಕುಳಿತ್ತಿದ್ದಾರೆ.

ಕೊಕ್ಕೆರಿಗಳ ಹಾರಾಟ, ಪಕ್ಷಿ ಸಂಕುಲವೇ ಇಲ್ಲಿ ಮೇಳೈಯಿಸಿದಂತಿರುವುದು, ಮತ್ತೊಂದೆಡೆ ಕಸದ ತ್ಯಾಜ್ಯವನ್ನು ಸುರಿದಿರುವುದು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ. ಈ ಕೆರೆಯು ಬೆಂಗಳೂರು ಅಂತರಾಷ್ಟ್ರೀಯ ವಿಮಾನಯಾನದ ಅಧೀನಕ್ಕೆ ಒಳ ಪಡುತ್ತದೆ. ತ್ಯಾಜ್ಯವನ್ನು ಹಾಕಿದರೆ ನಿಯಮ 1937 ಕಲಂ 91 ಅನ್ವಯ ಕ್ರಿಮಿನಲ್ ಮೊಕದ್ದೊಮೆ ಹೂಡಲಾಗುವುದೆಂದು ಎಚ್ಚರಿಗೆ ನೀಡಿದ್ದರೂ ಸಹ ಇಲ್ಲಿನ ನಿವಾಸಿಗಳು ಮಾತ್ರ ನಿಯಮವನ್ನು ಗಾಳಿಗೆ ತೂರಿದ್ದಾರೆ. ಸೂಲಿಬೆಲೆ ಕೆರೆಯು ಬೇಸಿಗೆ ಪ್ರಾರಂಭವಾದ್ದರಿಂದ ನೀರಲ್ಲ ಬತ್ತಿ ಹೋಗಿದೆ. ಕೆರೆಗೆ ಮಾಂಸದ ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ಸುರಿಯುತ್ತಿದ್ದಾರೆ. ಮುಂದಿನ ಯುವ ಪೀಳಗೆಗೆ ಇಲ್ಲಿ ಕೆರೆಯಿತ್ತು ಎನ್ನುವಷ್ಟರ ಮಟ್ಟಿಗೆಯಿದೆ. ಅಧಿಕಾರಿಗಳು ಮಾತ್ರ ಬೇಜವಬ್ದಾರಿತನ ತೋರಿಸುತ್ತಿದ್ದಾರೆ. ಕಸ ಹಾಕುವವರ ವಿರುದ್ಧ ಸೂಕ್ತ ಕ್ರಮಗೈಗೊಳ್ಳಬೇಕಾಗಿದೆ.

Body:ಸುಮಾರು 80 ಎಕರೆಗೂ ಹೆಚ್ಚಿನ ವಿಸ್ಥಿರ್ಣವೊಂದಿರುವ ಈ ಕೆರೆ ಈ ಹಿಂದೆ ನೀರು ತುಂಬಿಕೊಂಡು, ಹತ್ತಾರು ಹಳ್ಳಿಗಳಿಗೆ ಜೀವ ನಾಡಿಯಾಗಿತ್ತು, ಕೆರೆ ತುಂಬಿದ್ದಾಗ ಎಲ್ಲಾ ಬೋರ್ ವೆಲ್ ಗಳಲ್ಲಿ ನೀರು ಬರುತ್ತಿತ್ತು, ಜನ ಕೃಷಿ ಚಟುವಟಿಕೆಗಳನ್ನ ನಡೆಸಿ ಜೀವನ ಸಾಗಿಸುತ್ತಿದ್ದರು, ಆದರೇ ನೀರು ಖಾಲಿಯಾದಂತೆ ಜನರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ, ಮುಂದೊಂದು ದಿನ ಕೆರೆ ತುಂಬಿದರೂ ಕೂಡಾ ಆ ನೀರನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ಕಾರಣ ಕಟ್ಟಡ ತ್ಯಾಜ್ಯ, ಮಾಂಸದ ತ್ಯಾಜ್ಯಗಳು ತುಂಬಿ ಗಬ್ಬ ನಾರುತ್ತಿದೆ, ಜನಗಳಿಗಷ್ಟೇ ಅಲ್ಲದೇ ಪ್ರಾಣಿ ಪಕ್ಷಿ ಸಂಕುಲ ಕೂಡಾ ಹೆಚ್ಚಿನ ತೊಂದರೆಗೆ ಸಿಲುಕಿದೆ. ಕೆರೆಯನ್ನು ನೋಡುತ್ತಿದ್ದರೆ ತುಂಬಾ ನೋವುಂಟಾಗುತ್ತದೆ. ಅಧಿಕಾರಿಗಳಿಗೆ ಕೆರೆಯ ಬಗ್ಗೆ ಎಷ್ಟು ಬಾರಿ ಮನವಿ ಮಾಡಿದರೂ ತಲೆ ಕೇಡಿಸಿಕೊಳ್ಳುತ್ತಿಲ್ಲ. ,ಮಾಂಸದ ತ್ಯಾಜ್ಯ ಸುರಿಯುವುದರಿಂದ ನಾಯಿಗಳ ಕಾಟ ಜಾಸ್ತಿಯಾಗಿದೆ.

ಒಂದು ಕಾಲದಲ್ಲಿ ಜನರ ಜೀವನಾಡಿಗಳಾಗಿದ್ದ ಕೆರೆಗಳು, ಅವುಗಳಿಂದ ಮನುಷ್ಯ ಎಷ್ಟೇ ಅನುಕೂಲವನ್ನು ಪಡೆದುಕೊಂಡಿರುವುದನ್ನು ಮರೆತು ತಾನೇ ಕೆರೆಗಳನ್ನು ಹಾಳುಗೇಡುವುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ

Conclusion:ಧರ್ಮರಾಜು ಎಮ್ ಕೆಆರ್ ಪುರ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.