ETV Bharat / state

ಲಾಕ್​ಡೌನ್​ನಿಂದ ಲಕ್ಷಗಳ ಲೆಕ್ಕದಲ್ಲಿ ನಷ್ಟ.. ಪರಿಹಾರದ ಸಿಕ್ಕಿದ್ದು ಸಾವಿರದಲ್ಲಿ.. ಇದು ಪುಷ್ಪ ಕೃಷಿಕರ ಗೋಳು!! - flower news

ರೈತರು ತಿಂಗಳಿಗೆ ಔಷಧಿ, ರಸಗೊಬ್ಬರ, ಕೂಲಿ ಕಾರ್ಮಿಕರ ವೇತನಕ್ಕಾಗಿ ₹1ರಿಂದ ₹2 ಲಕ್ಷ ಖರ್ಚಾಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ತೀರಿಸಬೇಕಿದೆ. ಆದರೆ, ಹೂಗಳು ಮಾರಾಟವಾಗದೆ ಲಕ್ಷಾಂತರ ರೂ. ನಷ್ಟಕ್ಕೆ ತುತ್ತಾಗಿದ್ದೇವೆ ಎಂದು ಹೂವು ಬೆಳೆಗಾರರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

lackdown effect on flower orchidist
ಹೂವು ಬೆಳೆಗಾರರ ಗೋಳು
author img

By

Published : May 8, 2020, 7:22 PM IST

ದೊಡ್ಡಬಳ್ಳಾಪುರ : ಲಾಕ್‌ಡೌನ್‌ ಜಾರಿಯಾದಾಗಿನಿಂದಲೂ ಪಾಲಿಹೌಸ್‌ಗಳಲ್ಲಿ ಬೆಳೆಯಲಾಗಿದ್ದ ಹೂವು ಮಾರಾಟವಾಗದೇ ಪುಷ್ಪ ಕೃಷಿಕರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಬೆಸ್ಕಾಂ ಮೇ 18ರೊಳಗೆ ವಿದ್ಯುತ್ ಬಿಲ್ ಪಾವತಿಗೆ ಗಡುವು ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಕ್ಷಾಂತರ ರೂ. ಸಾಲ ಪಡೆದು ಪಾಲಿಹೌಸ್​ಗಳಲ್ಲಿ ಹೂವು ಬೆಳೆದು ದೇಶಿ ಮಾರುಕಟ್ಟೆ ಸೇರಿದಂತೆ ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಆದರೆ, ಲಾಕ್​ಡೌನ್‌ನಿಂದ ವಿಮಾನಯಾನ ರದ್ದಾಗಿದರಿಂದ ರಫ್ತು ನಿಂತಿದೆ. ದೇಶದಲ್ಲಿ ದೇವಸ್ಥಾನಗಳ ಬಾಗಿಲು ಬಂದ್ ಆಗಿವೆ. ಮದುವೆ ಕಾರ್ಯಗಳು ಸೇರಿದಂತೆ ಶುಭ ಸಮಾರಂಭಗಳು ನಡೆಯುತ್ತಿಲ್ಲ, ಇದರಿಂದ ಹೂವುಗಳನ್ನು ಕೇಳುವವರೇ ಇಲ್ಲದಂತಾಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ತುತ್ತಾಗಿದ್ದಾರೆ.

ಹೂವು ಬೆಳೆಗಾರರ ಗೋಳು ಕೇಳೋರು ಯಾರು?

ರೈತರು ತಿಂಗಳಿಗೆ ಔಷಧಿ, ರಸಗೊಬ್ಬರ, ಕೂಲಿ ಕಾರ್ಮಿಕರ ವೇತನಕ್ಕಾಗಿ ₹1ರಿಂದ ₹2 ಲಕ್ಷ ಖರ್ಚಾಗುತ್ತಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ತೀರಿಸಬೇಕಿದೆ. ಆದರೆ, ಹೂಗಳು ಮಾರಾಟವಾಗದೆ ಲಕ್ಷಾಂತರ ರೂ. ನಷ್ಟಕ್ಕೆ ತುತ್ತಾಗಿದ್ದೇವೆ ಎಂದು ಹೂವು ಬೆಳೆಗಾರರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ಹೂವು ಬೆಳೆಗಾರರಿಗೆ ಪರಿಹಾರವಾಗಿ ಹೆಕ್ಟೇರ್​ಗೆ ₹25 ಸಾವಿರ ಘೋಷಣೆ ಮಾಡಿದೆ. ಆದರೆ, ಈ ಹಣ ಪಾಲಿಹೌಸ್​ನಲ್ಲಿ ಹೂವು ಬೆಳೆಯುವವರಿಗೆ ಏನೂ ಸಾಲದು, ಎಕರೆಗೆ ಲಕ್ಷ ರೂಪಾಯಿ ಪರಿಹಾರ ಕೊಟ್ಟರೆ, ನಮ್ಮ ಕಷ್ಟ ಕೊಂಚಮಟ್ಟಿಗಾದ್ರೂ ಬಗೆಹರಿಯುವುದೆಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.