ನೆಲಮಂಗಲ: ಆಸ್ತಿ ವಿವಾದ ಹಿನ್ನೆಲೆ ವ್ಯಕ್ತಿಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಟ್ಟಣದ ರೇಣುಕಾ ನಗರದಲ್ಲಿ ನಡೆದಿದೆ.
ಶಫಿವುಲ್ಲಾ (60)ಕೊಲೆ ಆದ ವ್ಯಕ್ತಿ. ಕಳೆದ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಹೆಂಡತಿ, ಮಗಳನ್ನ ಕೋಣೆಯಲ್ಲಿ ಕೂಡಿ ಹಾಕಿ ಮತ್ತೊಂದು ರೂಮಿನಲ್ಲಿ ಶಫಿವುಲ್ಲಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
![ನೆಲಮಂಗಲದಲ್ಲಿ ವ್ಯಕ್ತಿಯ ಕೊಲೆ, killed man over land dispute in nelamangala](https://etvbharatimages.akamaized.net/etvbharat/prod-images/kn-bng-01-murder-av-ka10019_28112019101325_2811f_1574916205_126.jpg)
ಅಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಬಂಧಿಗಳೊಂದಿಗೆ ವ್ಯಾಜ್ಯ ಇದ್ದು ದ್ವೇಷಕಟ್ಟಿಕೊಂಡಿದ್ದರು. ಇದೇ ಕಾರಣಕ್ಕೆ ಸಂಬಂಧಿಕರಿಂದ ಕೊಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.