ದೊಡ್ಡಬಳ್ಳಾಪುರ : ವಯಸ್ಸಿನ್ನೂ 32 ವರ್ಷ. ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ಮಗ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಲೇಬೇಕಾದ ಸಂಕಷ್ಟ ಇಡೀ ಕುಟುಂಬವನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣದ ವಿನಾಯಕನಗರದ ಅಂಜನೇಯಲು ಮತ್ತು ಶಾಂತಮ್ಮನವರ ಒಬ್ಬನೇ ಮಗ ನರೇಶ್ ಕಿಡ್ನಿ ಫೇಲ್ಯೂರ್ನಿಂದ ಬಳಲುತ್ತಿರುವವರು.
10 ವರ್ಷಗಳ ಹಿಂದೆ ಮದುವೆಯಾಗಿರುವ ನರೇಶ್ಗೆ 7 ವರ್ಷದ ಮಗನಿದ್ದಾನೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಾ ಇಡೀ ಕುಟುಂಬ ಜವಾಬ್ದಾರಿ ತನ್ನ ಹೆಗಲಿಗೆ ಹಾಕೊಂಡಿದ್ದನು. ಆದರೆ, ಇದೀಗ ಆ ಕುಟುಂಬದ ಸಂತೋಷವನ್ನು ನರೇಶ್ ಅನಾರೋಗ್ಯ ಕಿತ್ತುಕೊಂಡಿದೆ. ಎರಡು ಕಿಡ್ನಿ ವೈಫಲ್ಯದಿಂದ ನರಳುತ್ತಿರುವ ನರೇಶ್ ಸ್ಥಿತಿ ನೋಡಿ ಇವತ್ತು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ.
ಮಗನ ಜೀವ ಉಳಿಸಲು ತಾಯಿ ಪಾರ್ವತಮ್ಮ ತಮ್ಮ ಕಿಡ್ನಿ ಕೊಡಲು ಮುಂದಾಗಿದ್ದಾರೆ. ತಾಯಿ ಕಿಡ್ನಿ ಮಗನಿಗೆ ಮ್ಯಾಚ್ ಆಗಿದೆ. ಆದರೆ, ಕಿಡ್ನಿ ಬದಲಾವಣೆ ಆಪರೇಷನ್ಗಾಗಿ ₹9 ಲಕ್ಷ ಹಣ ಬೇಕಿದೆ. ಮನೆಯ ಸ್ಥಿತಿಯನ್ನು ನೋಡಲಾಗದೆ ನರೇಶ್ ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಾರೆ. ಆಕೆಗೆ ಬರುವ 9 ಸಾವಿರದಲ್ಲಿ ಸಂಸಾರ ನಡೆಯಬೇಕು. ಇದರ ಜೊತೆಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕು.
ಒಮ್ಮೆ ಡಯಾಲಿಸ್ ಮಾಡಬೇಕಾದರೆ 2 ಸಾವಿರ ಹಣ ಬೇಕಿದೆ. ನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಕುಟುಂಬಕ್ಕೆ ದಾನಿಗಳ ನೆರವು ಅಗತ್ಯವಾಗಿದೆ. ನರೇಶ್ ಸ್ನೇಹಿತರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಲ್ಲಿ ಮನವಿ ಮಾಡಿ ನರೇಶ್ ಆಪರೇಷನ್‌ಗೆ ವ್ಯವಸ್ಥೆ ಮಾಡುವಂತೆ ಅಂಗಲಾಚಿದ್ದಾರೆ. ದಾನಿಗಳು ನೀಡುವ ₹9 ಲಕ್ಷ ಹಣ ಇಡೀ ಕುಟುಂಬದ ದುಃಖವನ್ನೇ ದೂರ ಮಾಡುತ್ತೆ. ಹೃದಯವಂತ ದಾನಿಗಳು ಈ ಕುಟುಂಬಕ್ಕೆ ನೆರವಾಗಿ ಕುಟುಂಬದವರ ಕಣ್ಣೀರ ಒರೆಸೇಕಿದೆ.
ನರೇಶ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಅಕೌಂಟ್ ನಂಬರ್ - 20168383276
ಬ್ರ್ಯಾಂಚ್ ಕೋಡ್ - 11287
ಐಎಫ್ಐಸಿ ಕೋಡ್ - SBIN0011287
ಇದನ್ನೂ ಓದಿ: ಎಸ್‍ಎಂಎ ಕಾಯಿಲೆಗೆ ತುತ್ತಾದ ಮಗು.. ಜೀವ ಉಳಿಸಲು ಬೇಕಿದೆ 16 ಕೋಟಿ ರೂ. ಧನಸಹಾಯ