ETV Bharat / state

ಕೆಂಪೇಗೌಡ ಏರ್​ಪೋರ್ಟ್​: ವಿದೇಶದಿಂದ ಬರುವವರಿಗೆ ಆರ್​ಟಿ-ಪಿಸಿಆರ್ ಟೆಸ್ಟ್‌

ಭಾರತಕ್ಕೆ ಕೋವಿಡ್​ ನಾಲ್ಕನೇ ಅಲೆಯ ಭೀತಿ ಕಾಡುತ್ತಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆರ್​ಟಿ-ಪಿಸಿಆರ್​ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ. ಪಾಸಿಟಿವ್ ಬಂದಲ್ಲಿ ಪ್ರಯಾಣಿಕರು ಕ್ವಾರಂಟೈನ್ ಆಗಬೇಕಿದೆ.​

author img

By

Published : Dec 25, 2022, 1:18 PM IST

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ(ಬೆಂ.ಗ್ರಾ): ಕೋವಿಡ್​ ಹೊಸ ರೂಪಾಂತರ ಭೀತಿಯಿಂದಾಗಿ ರಾಜ್ಯ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆರ್​​ಟಿ-ಪಿಸಿಆರ್​ ಟೆಸ್ಟಿಂಗ್​ ಕಡ್ಡಾಯ ಮಾಡಲಾಗುತ್ತಿದೆ.

ಚೀನಾ, ಜಪಾನ್​, ದಕ್ಷಿಣ ಕೊರಿಯಾ, ಹಾಂ​ಕಾಂಗ್​ ಮತ್ತು ಥಾಯ್ಲೆಂಡ್​ನಿಂದ ಬರುವ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ. ಆರ್​ಟಿ-ಪಿಸಿಆರ್​ ವರದಿಯನುಸಾರ ಪಾಸಿಟಿವ್​ ಬಂದರೆ ಅವರನ್ನು ಕ್ವಾರಂಟೈನ್​ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರನ್ವಯ ವಿಮಾನ ನಿಲ್ದಾಣದಲ್ಲಿ ಆರ್​ಟಿ-ಪಿಸಿಆರ್​ ಟೆಸ್ಟಿಂಗ್ ಮಾಡಲಾಗುತ್ತಿದೆ.

ಕೊರೊನಾ ಹೊಸತಳಿ ಬಿಎಫ್.7 ಆತಂಕದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರು ಗ್ರಾಮಾಂತರ ಡಿಹೆಚ್​ಒ ವಿಜಯೇಂದ್ರ ತಿಳಿಸಿದ್ದರು. ಇದೀಗ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಮುಖವಾಗಿ ವಿದೇಶಗಳಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್​ ಮಾಡಲಾಗುತ್ತಿದೆ.

ನಿಲ್ದಾಣದ ಅರೈವಲ್​ನ ಒಳಭಾಗದಲ್ಲಿ ಟೆಸ್ಟಿಂಗ್​ಗಾಗಿ 2 ರಿಜಿಸ್ಟ್ರೇಷನ್​ ಕೌಂಟರ್ ಮತ್ತು 6 ಟೆಸ್ಟಿಂಗ್​ ಕೌಂಟರ್​ಗಳ ವ್ಯವಸ್ಥೆ ಮಾಡಲಾಗಿದೆ. ಟೆಸ್ಟಿಂಗ್​ ವೇಳೆ ಪಾಸಿಟಿವ್​ ಬಂದಲ್ಲಿ ಅಂಥವರನ್ನು ಕ್ವಾರಂಟೈನ್ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ. ಅಲ್ಲದೇ ಅವರ ವಿಳಾಸ ಮತ್ತು ಫೋನ್ ನಂಬರ್​ಅನ್ನು ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಿಬ್ಬಂದಿಯನ್ನು ನೇಮಕ ಮಾಡಿ ಓಮಿಕ್ರಾನ್​ ವೈರಸ್​ನ ಉಪ ರೂಪಾಂತರ ಬಿಎಫ್.7 ಅನ್ನು ತಡೆಗಟ್ಟುವ ಕಾರ್ಯ ಮಾಡಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ ಎಂದು ತಿಳಿಸಿದರು.

ಶೇ.2 ರಷ್ಟು ಪ್ರಯಾಣಿಕರ ತಪಾಸಣೆ: ವಿದೇಶದಿಂದ ಆಗಮಿಸುತ್ತಿರುವ ಶೇ.2ರಷ್ಟು ಪ್ರಯಾಣಿಕರ ತಪಾಸಣೆ ಮತ್ತು ಗಂಟಲು ದ್ರವ ಸಂಗ್ರಹಣೆಯ ಸ್ಯಾಂಪಲ್ಸ್​ ಅನ್ನು ಲ್ಯಾಬ್​ಗೆ ಕಳಿಸಲಾಗುತ್ತಿತ್ತು. ಪ್ರಯಾಣಿಕರ ಸ್ಕ್ರೀನಿಂಗ್ ಮಾಡಿ ಜ್ವರ ಮತ್ತು ಕೊರೊನಾ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿತ್ತು. ಇದಕ್ಕೆಂದೇ ಏರ್​ಪೋರ್ಟ್​ನಲ್ಲಿ ಆರೋಗ್ಯ ಇಲಾಖೆಯು ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಿತ್ತು.

ಅದರಂತೆ ಒಂದು ಪಾಳಿಯಲ್ಲಿ ಇಬ್ಬರು ಲ್ಯಾಬ್​ ಟೆಕ್ನಿಷಿಯನ್ಸ್​ ಮತ್ತು ಒಬ್ಬರು ಆಪರೇಟರ್ ಆಗಿ​ ಕೆಲಸ ಮಾಡುತ್ತಿದ್ದರು. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಗ್ರಾಮಾಂತರ ಡಿಹೆಚ್​ಒ ತಿಳಿಸಿದ್ದರು. ಇದೀಗ ಕೇಂದ್ರ ಸರ್ಕಾರದ ಆದೇಶದಂತೆ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೋವಿಶೀಲ್ಡ್ ಲಸಿಕೆ ಪೂರೈಸುವಂತೆ ಬಿಬಿಎಂಪಿ ಮನವಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಜನರಿಗೆ ಬೂಸ್ಟರ್ ಡೋಸ್ ನೀಡಲು ಕೋವಿಶೀಲ್ಡ್ ಲಸಿಕೆ ಕೊರತೆಯಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಮನವಿ ಸಲ್ಲಿಸಲಾಗಿದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮತ್ತು ಆಕ್ಸಿಜನ್ ಪ್ಲಾಂಟ್‌ಗಳ ಬಗ್ಗೆ ಬಿಬಿಎಂಪಿ ಮಾಹಿತಿ ಪಡೆದುಕೊಂಡಿದೆ.

ಆರೋಗ್ಯ ಸೇವೆಗಳ ಕುರಿತು ಮಾಕ್‌ ಡ್ರಿಲ್‌: ಆಕ್ಸಿಜನ್‌ ಪ್ಲಾಂಟ್‌, ಆಕ್ಸಿಜನ್‌ ಜನರೇಟರ್‌ ಸೇರಿದಂತೆ ಕೋವಿಡ್‌ ಉಪಕರಣಗಳು, ಸಿಬ್ಬಂದಿ, ವ್ಯವಸ್ಥೆಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯಂತೆ ಡಿಸೆಂಬರ್‌ 27ರಂದು ಎಲ್ಲ ಆಸ್ಪತ್ರೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಇದನ್ನೂ ಓದಿ: ಕೋವಿಡ್​ ಹಿನ್ನೆಲೆ: ಕೆಂಪೇಗೌಡ ಏರ್ಪೋಟ್​ನಲ್ಲಿ ಡಿಹೆಚ್ಒ ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.