ಆನೇಕಲ್: ಬಹು ನಿರೀಕ್ಷೆಯ ಆನೇಕಲ್ ಕರಗ ಶಕ್ತ್ಯುತ್ಸವದ ನಾಟಕೀಯ ಬೆಳವಣಿಗೆಯಲ್ಲಿ ವಿವಾದಿತ ಕರಗ ಹೊರುವ ಜವಾಬ್ದಾರಿ ಕುಲಸ್ಥರ ಪರವಾಗಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ. ನಾಳೆ ಬುಧವಾರ ಆನೇಕಲ್ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಕುಡಿ ಮರ ಕಟ್ಟುವ ಮೂಲಕ 2022ರ ಕರಗ ಮಹೋತ್ಸವಕ್ಕೆ ಚಾಲನೆ ದೊರೆಯುವ ಬೆನ್ನಲ್ಲೇ ಇಂದು ಸಂಜೆ ತಾಲೂಕು ಕಚೇರಿಯಿಂದ ಕುಲಸ್ತ ಚಂದ್ರಪ್ಪ ಕರಗ ಹೊರುವ ತೀರ್ಮಾನವನ್ನು ದಂಡಾಧಿಕಾರಿ ಪಿ. ದಿನೇಶ್ ಹೊರಡಿಸಿದ್ದಾರೆ.
ಆನೇಕಲ್ ಕರಗ ಹೊರುವ ವಿಚಾರದಲ್ಲಿ ತಾಲೂಕಿನ ಕುಲಸ್ಥರು ಹಾಗೂ ಅರ್ಚಕರ ಕುಟುಂಬದ ನಡುವಿನ ವಾದ ಕೋರ್ಟ್ ಮೆಟ್ಟಿಲೇರಿತ್ತು. ಇದು ಕೊಲೆ ಪ್ರಕರಣಗಳು ನಡೆದು ದಶಕಗಳ ಕಾಲ ಕರಗ ನಿಂತಿತ್ತು. ಅನಂತರ ಸುತ್ತಲ ಗ್ರಾಮಸ್ಥರ ಆಶಯದಂತೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ತೆಗೆದುಕೊಂಡ ನಿರ್ಣಯದಂತೆ ಕರಗ ಮತ್ತೆ ಆರಂಭಗೊಂಡಿತ್ತಾದರೂ ಕೋವಿಡ್ ಹಿನ್ನೆಲೆ ಎರಡು ಮೂರು ವರ್ಷ ಆಚರಣೆ ನಿಂತಿತ್ತು.
ಇದೀಗ ಕಳೆದ 18ರಂದು ತಹಶೀಲ್ದಾರ್, ಮುಜರಾಯಿ ಅಧಿಕಾರಿ ಮತ್ತು ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ನಡೆದ ವಹ್ನಿಕುಲ ಕುಲಸ್ಥರ ಹಾಗೂ ಅರ್ಚಕ ಅರ್ಜುನಪ್ಪರ ಮುಖಾಮುಖಿ ಸಭೆ ನಡೆದಿತ್ತು. ಅಂದಿನ ನಿರ್ಣಯದಂತೆ ಅರ್ಚಕರಿಗೆ ವಯಸ್ಸಾದ ಕಾರಣಕ್ಕೆ ಅವರು ಸೂಚಿಸುವ ವ್ಯಕ್ತಿ ಕರಗ ಹೊರುವ ನಿಯಮ ಜಾರಿಯಲ್ಲಿತ್ತು.
ಹೀಗಾಗಿ, ಅಂದಿನ ಸಭೆಯಲ್ಲಿ ಅರ್ಚಕ ಅರ್ಜುನಪ್ಪ ತನ್ನ ಮೊಮ್ಮಗ ಮನೋಜ್ ಕರಗ ಹೊರಬೇಕೆಂದು ಸೂಚಿಸಿದ ಬೆನ್ನಲ್ಲಿ ಮೌಖಿಕವಾಗಿ ತೀರ್ಮಾನಿಸಿ ಸಭೆ ಮುಕ್ತಾಯಗೊಂಡು ಅರ್ಜುನಪ್ಪ ತನ್ನ ಮೊಮ್ಮಗನಿಗೆ ತರಭೇತಿ ನೀಡಿ ಮನೋಜ್ ಕರಗದ ತಾಲೀಮು ನಡೆಸಿದ್ದ. ಈ ನಡುವೆ ಕುಲಸ್ಥರ ಪಾಳಯದ ಚಂದ್ರಪ್ಪ ಮತ್ತೆ ಮೇಲ್ಮನವಿಯ ದೂರಿನಂತೆ ಕರಗ ಹೊರುವ ವ್ಯಕ್ತಿ ವಿವಾಹವಾಗಿರಬೇಕು.
ಅರ್ಚಕ ಸ್ಥಾನ ವಂಶಪಾರಂಪರಿಕವಾದುದಲ್ಲವಾದ್ದರಿಂದ ಅರ್ಚಕ ಅರ್ಜುನಪ್ಪ ಸೂಚಿಸುವ ಅಧಿಕಾರ ಇಲ್ಲ ಎಂದು ತಹಶೀಲ್ದಾರ್ ಕಚೇರಿಯ ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಮೂರು ಬಾರಿ ವಾದ - ಪ್ರತಿವಾದ ಆಲಿಸಿದ ನಂತರ ಚಂದ್ರಪ್ಪ ಈ ಬಾರಿ ಕರಗ ಹೊರುವ ಜವಾಬ್ದಾರಿಯನ್ನು ಕೋರ್ಟ್ ಆದೇಶ ಹೊರಡಿಸಿದೆ.
ಅರ್ಚಕ ಮನೋಜ್ ವಿವಾಹವಾಗಿಲ್ಲದ ಕಾರಣ ಹಾಗೂ ಅರ್ಚಕ ಅರ್ಜುನಪ್ಪ ವಯಸ್ಸು 72 ವರ್ಷ ಮೀರಿದ ಕಾರಣಕ್ಕೆ ಅರ್ಚಕ ವೃತ್ತಿ ವಂಶಪಾರಂಪರ್ಯವಾಗಲಿ, ಸಂವಿಧಾನದತ್ತವಾಗಲಿ, ಪ್ರಾಪ್ತವಾಗಿರುವ ಸಾಕ್ಷ್ಯಾಧಾರ ಊರ್ಜಿತಗೊಳ್ಳದ ಕಾರಣಕ್ಕೂ ಅವರ ಪರವಾದ ಸೋತಿದ್ದು, ಈ ಬಾರಿಯ ಕರಗ ನಾಳೆಯಿಂದ ಚಂದ್ರಪ್ಪ ಕುಲಸ್ಥರು ನೆರವೇರಿಸಲು ಇಂದಿನಿಂದಲೇ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
ಓದಿ: ವಿಜಯಪುರದಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ: ಮೂವರ ಸ್ಥಿತಿ ಗಂಭೀರ