ದೊಡ್ಡಬಳ್ಳಾಪುರ: ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿದ್ದ ನಿವೃತ್ತ ಲೋಕಾಯುಕ್ತ ಜಸ್ಟೀಸ್ ವೆಂಕಟಾಚಲರ ನಿಧನದಿಂದ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರ ನಿಧನಕ್ಕೆ ಕಂಬನಿ ಮಿಡಿದ ದೊಡ್ಡಬಳ್ಳಾಪುರ ಕನ್ನಡಪರ ಸಂಘಟನೆ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ನಗರದ ಡಿ ಕ್ರಾಸ್ ವೃತ್ತದಲ್ಲಿ ಜಸ್ಟೀಸ್ ವೆಂಕಟಾಚಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಆಚರಣೆ ನಡೆಸಿದರು. 2001ರಲ್ಲಿ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಜಸ್ಟೀಸ್ ವೆಂಕಟಾಚಲ ಅವರು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ದೇಶದಲ್ಲಿಯೇ ಹೆಸರು ತಂದವರೆಂದು ಗುಣಗಾನ ಮಾಡಿದರು.