ಆನೇಕಲ್: ಸರ್ಜಾಪುರದ ಡಾ. ಬಿ. ಆರ್ ಅಂಬೇಡ್ಕರ್ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮವನ್ನು ಆಲಿಕಲ್ಲು ಮಳೆಯಿಂದಾಗಿ ಮೊಟಕುಗೊಳಿಸಲಾಯಿತು.
ಮಧ್ಯಾಹ್ನ 2 ಗಂಟೆಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಬೆಂಗಳೂರು ಮಾರ್ಗದಿಂದ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಸಾಗಿದ್ದರು. ಕೆಲವೇ ನಿಮಿಷಗಳಲ್ಲಿ ಸರ್ಜಾಪುರದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭದಲ್ಲಿಯೇ ಗುಡುಗು ಸಹಿತ ಮಳೆಯ ಅಬ್ಬರದಿಂದಾಗಿ ಆಲಿಕಲ್ಲು ಮಳೆ ಆರ್ಭಟ ಶುರುವಾಗಿದ್ದೇ ತಡ ನೆರೆದಿದ್ದ ಜನರು ಸುರಕ್ಷಿತ ಜಾಗಗಳಿಗೆ ತೆರಳಿದರು. ಅಷ್ಟರಲ್ಲಿ ಪೆಂಡಾಲ್ ಗಾಳಿಗೆ ಕಿತ್ತು ಕುರ್ಚಿಗಳು ಹಾಳಾಗಿ ಹಾಕಿದ್ದ ವೇದಿಕೆ ಚೆಲ್ಲಾಪಿಲ್ಲಿಯಾದ ಪರಿಣಾಮ ಕಾರ್ಯಕ್ರಮ ನಿಲ್ಲಿಸುವಂತಾಯಿತು.
ಓದಿ: ಯಾದಗಿರಿ: ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಪರ್ಶಿಸಿ ಬಾಲಕಿ ಸಾವು