ನೆಲಮಂಗಲ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿಯನ್ನ ಪೊಲೀಸರು ಬಂದಿಸಿದ್ದಾರೆ.
ಕಡಬಗೆರೆ ಕ್ರಾಸ್ ಬಳಿ ಇರುವ ಆಟೋ ಸ್ಟಾಂಪ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ವ್ಯಕ್ತಿಯನ್ನ ಬಂಧಿಸಿದಾಗ ಆತನ ಬಳಿ 300 ಗ್ರಾಂ ಗಾಂಜಾ ಪತ್ತೆಯಾಗಿದೆ. ಬಂಧಿತ ವ್ಯಕ್ತಿ ಕಡಬಗೆರೆಯ ಜನಪ್ರಿಯ ಟೌನ್ಶಿಪ್ ನಿವಾಸಿ ಶಿವಪ್ರಸಾದ್ ಪಿ.ವಿ. ಎನ್ನಲಾಗಿದೆ. ಈ ಕುರಿತು ಎನ್ಡಿಪಿಎಸ್ ಅಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.