ETV Bharat / state

ಹೊಸಕೋಟೆ ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ... - ಫೆಬ್ರವರಿ 09 ರಂದು ಸಂಜೆ ಡಿಮಸ್ಟರಿಂಗ್ ಕಾರ್ಯ

ಹೊಸಕೋಟೆ ನಗರ ಸ್ಥಳೀಯ ಸಂಸ್ಥೆಗಳ 31 ವಾರ್ಡುಗಳಿಗೆ, ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ

Kn_Bng_04_hosakoteNagarasabeElection_vis_KA10002
ಹೊಸಕೋಟೆ ನಗರಸಭೆ ಚುನಾವಣೆ:ಅಂತಿಮ‌ ಕಣದಲ್ಲಿ 114 ಅಭ್ಯರ್ಥಿಗಳು
author img

By

Published : Feb 9, 2020, 6:39 AM IST

ಬೆಂಗಳೂರು: ಹೊಸಕೋಟೆ ನಗರ ಸ್ಥಳೀಯ ಸಂಸ್ಥೆಗಳ 31 ವಾರ್ಡುಗಳಿಗೆ, ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮತದಾನ ನಡೆಯಲಿದೆ. ಅಂತಿಮ‌ ಕಣದಲ್ಲಿ 114 ಅಭ್ಯರ್ಥಿಗಳಿದ್ದಾರೆ. 47 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು ಇದರಲ್ಲಿ 21 ಅತಿ ಸೂಕ್ಷ್ಮ, 14 ಸೂಕ್ಷ್ಮ ಮತ್ತು 12 ಸಾಮಾನ್ಯ ಮತಗಟ್ಟೆ ಕೇಂದ್ರಗಳಾಗಿವೆ.

ಹೊಸಕೋಟೆ ನಗರಸಭೆ ಚುನಾವಣೆ:ಅಂತಿಮ‌ ಕಣದಲ್ಲಿ 114 ಅಭ್ಯರ್ಥಿಗಳು

62 ಮತಯಂತ್ರ (ಇವಿಎಂ) ಗಳನ್ನು ಹಾಗೂ 275 ಸಿಬ್ಬಂದಿಗಳನ್ನು ಹೊಸಕೋಟೆ ನಗರಸಭೆ ಚುನಾವಣೆ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ. ಹೊಸಕೋಟೆ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 47373 ಮತದಾರರಿದ್ದು, ಅದರಲ್ಲಿ 23938 ಪುರುಷ ಮತದಾರರು, 23419 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರಿದ್ದಾರೆ.

ಚುನಾವಣೆಯು ಶಾಂತಿಯುತವಾಗಿ ನಡೆಯಲು‌ 1 ಡಿವೈಎಸ್ಪಿ, 3 ಪೊಲೀಸ್ ಇನ್ಸ್‌ಪೆಕ್ಟರ್, 13 ಸಬ್ ಇನ್ಸ್‌ಪೆಕ್ಟರ್, 10 ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್, 130 ಹೆಡ್ ಕಾನ್ಸ್ ಸ್ಟೇಬಲ್ ಹಾಗೂ ಪೊಲೀಸ್ ಕಾನ್ಸ್ ಸ್ಟೇಬಲ್, 45 ಗೃಹ ರಕ್ಷಕ ದಳದ ಸಿಬ್ಬಂದಿಗಳು, 12 ಮಹಿಳಾ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟಾರೆ 223 ಪೊಲೀಸರನ್ನು, 5 ಡಿ.ಆರ್ ತುಕಡಿಗಳನ್ನು ಹಾಗೂ 1 ಕೆ.ಎಸ್.ಆರ್.ಪಿ. ತುಕಡಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಹೊಸಕೋಟೆ ತಾಲ್ಲೂಕಿನ ಹಳೇ ಬಸ್ ನಿಲ್ದಾಣದ ಬಳಿ ಇರುವ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಫೆಬ್ರವರಿ 09 ರಂದು ಸಂಜೆ ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ. ಹಾಗೂ ಇದೇ ಶಾಲೆಯಲ್ಲಿ ಫೆಬ್ರವರಿ 11 ರಂದು ಬೆಳಿಗ್ಗೆ 8.00 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಫೆಬ್ರವರಿ 11 ರಂದು ಕೊನೆಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.