ಹೊಸಕೋಟೆ: ವಿಧಾನಸಭಾ ಉಪಚುನಾವಣೆಯ ಮತದಾನ ನಾಳೆ ನಡೆಯಲಿರುವುದರಿಂದ ಚುನಾವಣಾಧಿಕಾರಿಗಳು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ.
ಹೊಸಕೋಟೆ ನಗರದ ಜೂನಿಯರ್ ಕಾಲೇಜಿನಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲಿಸಿದ ಅಧಿಕಾರಿಗಳು ಆಯಾ ಮತಗಟ್ಟೆ ಅಧಿಕಾರಿಗಳಿಗೆ ಮತಯಂತ್ರಗಳ ವಿತರಣೆ ಮಾಡಿದರು.
ಇಂದು ಸಂಜೆಯೊಳಗೆ ಸೀಲ್ ಮಾಡಿದ ವಿವಿಪ್ಯಾಟ್, ಇವಿಎಂ ಮತಯಂತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ಮತಗಟ್ಟೆಗೆ ಸೇರಿಕೊಳ್ಳಲಿದ್ದಾರೆ. ಅಧಿಕಾರಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಒಟ್ಟು 297 ಗ್ರಾಮಗಳಲ್ಲಿ 286 ಮತಗಟ್ಟೆಗಳನ್ನು ತೆರೆಯಲಾಗಿದೆ. ಅದರಲ್ಲಿ 85 ಸೂಕ್ಷ್ಮ ಹಾಗೂ 201 ಸಾಮಾನ್ಯ ಮತಗಟ್ಟೆಗಳಿವೆ. ಇದರಲ್ಲಿ 25 ಮೊಬೈಲ್ ಸೆಕ್ಟರ್ ಹಾಗೂ 12 ಸೂಪರ್‌ವೈಸ್ ಮೊಬೈಲ್ ಸೆಕ್ಟರ್‌ಗಳನ್ನ ಹೊಂದಿದೆ ಎಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,711 ಮತದಾರರಿದ್ದು, ಅದರಲ್ಲಿ 109106 ಪುರುಷ ಮತದಾರರು, 107592 ಮಹಿಳಾ ಮತದಾರರು ಹಾಗೂ 29 ಇತರೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣಾ ಕರ್ತವ್ಯದಲ್ಲಿ 1400 ಸಿಬ್ಬಂದಿ ಕೆಲಸ ಮಾಡಲಿದ್ದು, 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಚುನಾವಣಾಧಿಕಾರಿ ತಿಳಿಸಿದರು.