ಬೆಂಗಳೂರು: ನೀರಿನ ತೊಟ್ಟಿ ಶುಚಿಗೊಳಿಸುವ ಸಂದರ್ಭದಲ್ಲಿ ಹತ್ತಿರವೇ ಇದ್ದ ಹೆಜ್ಜೇನು ದಾಳಿ ಮಾಡಿದ್ದು, ನಾಲ್ವರು ಗಂಭಿರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡು-ಆನೇಕಲ್ ಗಡಿ ಭಾಗದ ಬಿನ್ನಮಂಗಲದಲ್ಕಿ ಸಂಭವಿಸಿದೆ.
ಮನು, ನಂದೀಶ್, ಮನೋಜ್ ಮತ್ತು ಲೋಕೇಶ್ ಮೇಲೆ ಹೆಜ್ಜೇನು ದಾಳಿಗೆ ಒಳಗಾದವರು. ಬಿನ್ನಮಂಗಲ ಬಳಿಯಿರುವ ಖಾಸಗಿ ಉಪ್ಪಿನಕಾಯಿ ಕಾರ್ಖಾನೆಯೊಂದರ ನೀರಿನ ಟ್ಯಾಂಕ್ ಶುದ್ಧಗೊಳಿಸಲು ಬೆಂಗಳೂರಿನ ಟ್ಯಾಂಕ್ ಕ್ಲೀನಿಂಗ್ ತಂಡವನ್ನು ಕರೆಸಲಾಗಿತ್ತು. ಕಾರ್ಖಾನೆ ಮೇಲಿದ್ದ ನೀರಿನ ಟ್ಯಾಂಕ್ಗೆ ಇಳಿಯುವ ಸಂದರ್ಭ ಹೆಜ್ಜೇನು ದಾಳಿ ನಡೆಸಿದೆ.
ನಾಲ್ವರು ಯುವಕರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಇನ್ನಿಬ್ಬರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸದ್ಯಕ್ಕೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.