ETV Bharat / state

ಐತಿಹಾಸಿಕ ನಲ್ಲೂರು ಕೋಟೆ ಗಂಗಮ್ಮದೇವಿಯ ಅದ್ಧೂರಿ ಜಾತ್ರಾ ಮಹೋತ್ಸವ - undefined

ನಲ್ಲೂರು ಕೋಟೆಯ ಗಂಗಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯು ಅನಾದಿ ಕಾಲದಿಂದಲೂ ಅಂದರೆ ಚೋಳರ ಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಿಕ ಪದ್ಧತಿಯಾಗಿದೆ. 13 ಊರಿನ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರು, ಮಾರ್ಗದರ್ಶಿಗಳು ಸೇರಿ ಈ ಜಾತ್ರೆ ನಡೆಸುತ್ತಾರೆ.

ಗಂಗಮ್ಮದೇವಿ
author img

By

Published : Apr 26, 2019, 5:37 PM IST

ಬೆಂಗಳೂರು: ಐತಿಹಾಸಿಕ ನಲ್ಲೂರು ಕೋಟೆಯ ಗಂಗಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯನ್ನು 13 ಊರುಗಳು ಸೇರಿಕೊಂಡು ಮಾಡುವುದು ವಿಶೇಷ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ ಟಿಪ್ಪು ಕೋಟೆ ಎಷ್ಟು ಪ್ರಸಿದ್ಧಿ ಮತ್ತು ಇತಿಹಾಸ ಹೊಂದಿದೆಯೋ ಹಾಗೆಯೇ ನಲ್ಲೂರು ಕೋಟೆಯ ಶ್ರೀ ಗಂಗಾಮದೇವಿ ದೇವಸ್ಥಾನವೂ ಸುಪ್ರಸಿದ್ಧ. ಇಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಜಾತ್ರೆಯನ್ನು ಸುತ್ತಮುತ್ತಲಿನ 13 ಗ್ರಾಮದ ಜನರು ಸೇರಿ ಆಚರಿಸುತ್ತಾರೆ.

ಏಪ್ರಿಲ್ ತಿಂಗಳ 24, 25 ಮತ್ತು 26ರಂದು ಮೂರು ದಿನಗಳ ಕಾಲ ನಡೆಯಿತು. ನಲ್ಲೂರು ಕೋಟೆಯ ಗಂಗಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯು ಅನಾದಿಕಾಲದಿಂದಲೂ ಅಂದರೆ ಚೋಳರ ಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಿಕ ಪದ್ಧತಿಯಾಗಿದೆ. 13 ಊರಿನ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರು, ಮಾರ್ಗದರ್ಶಿಗಳು ಸೇರಿ ಈ ಜಾತ್ರೆ ನಡೆಸುತ್ತಾರೆ. ನಲ್ಲೂರು, ಹೊಸನಲ್ಲೂರು ಬಾಲೇಪುರ, ಚೊನ್ನಹಳ್ಳಿ, ಬಿದಲುಪುರ, ಮಲ್ಲೇನಹಳ್ಳಿ, ರೆಡ್ಡಿಹಳ್ಳಿ ದೊಡ್ಡಹೊಸಹಳ್ಳಿ, ಚಿಕ್ಕಹೊಸಹಳ್ಳಿ, ದೇವನಾಯಕನಹಳ್ಳಿ, ನಲ್ಲಪ್ಪನಹಳ್ಳಿ, ಮಲ್ಲೇಪುರ ಮತ್ತು ಅರಸಿನಕುಂಟೆ ಗ್ರಾಮಗಳ ಜನರು ಒಟ್ಟಾಗಿ ಐತಿಹಾಸಿಕ ದೇವಿಯ ಜಾತ್ರೆಗೆ ಸಾಕ್ಷಿಯಾದರು.

ಕೋಟೆ ಗಂಗಮ್ಮದೇವಿ ಜಾತ್ರೆ

ಪ್ರತಿ ಊರಿನಲ್ಲೂ ಅದ್ದೂರಿಯಾಗಿ ಗಂಗಮ್ಮ ದೇವಿಯ ಜಾತ್ರೆಯನ್ನು ಮಾಡಿದ್ರು. ಏಪ್ರಿಲ್ 24ರಂದು ಈ ದಿನ ಉತ್ಸವದಲ್ಲಿ 13 ಊರುಗಳಿಂದ ತಮ್ಮ ತಮ್ಮ ಮನೆಗಳಲ್ಲಿ ಹಲವಾರು ಹೂವುಗಳಿಂದ ಅಲಂಕೃತ ದೀಪವನ್ನು ತಯಾರಿಸಿ ಹಾಗೂ ಗ್ರಾಮ ದೇವರುಗಳನ್ನು ಹೂವಿನಿಂದ ಅಲಂಕರಿಸಿ ಅಲಂಕೃತವಾದ ವಿಧ ವಿಧವಾದ ರೀತಿಯ ಪಲ್ಲಕ್ಕಿಯಲ್ಲಿಟ್ಟು ಸಿದ್ಧತೆ ಮಾಡಿಕೊಂಡು ದೇವಿಯ ಸನ್ನಿಧಿಗೆ ಬಂದರು. ಅದೇ ರೀತಿ ನಿನ್ನೆ ಅಂದರೆ ಏಪ್ರಿಲ್ 25ರ ಬೆಳಗಿನ ಜಾವ ಪ್ರತಿ ಊರಿನವರು ಗಂಗಮ್ಮ ದೇವರ ಮಂದಿರದ ಮುಂದೆ ಮೊದಲೇ ಸಿದ್ಧಪಡಿಸಿದ್ದ ಅಗ್ನಿ ಕುಂಡದಲ್ಲಿ ತಮ್ಮ ತಮ್ಮ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದುಕೊಂಡು ಹೋಗಿ ತಾಯಿ ಗಂಗಮ್ಮ ದೇವಿಗೆ ಹರಕೆ ಅರ್ಪಿಸಿ ಪೂರ್ಣಗೊಳಿಸಿದರು. ಇದು ಪ್ರತಿ ಬಾರಿಯ ಜಾತ್ರೆಯಲ್ಲಿ ನಡೆಯುವ ಸಂಪ್ರದಾಯ. ಈ ರೀತಿ ಮಾಡಿದರೆ ಪಾಪಗಳು ಕಳೆಯುತ್ತವೆ ಎಂಬ ನಂಬಿಕೆಯಿದೆ. ಅಲ್ಲದೇ ಇದರಿಂದ ಯಾರಿಗೂ ಗಾಯಗಳಾಗುವುದಿಲ್ಲ. ಅದೇ ರೀತಿ ಅಗ್ನಿ ಕುಂಡದಲ್ಲಿ ಹೋದವರಿಗೆ ಯಾವುದೇ ನೋವು ಉಂಟಾಗಿಲ್ಲ.

ದೀಪೋತ್ಸವದ ಬಳಿಕ ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬಂಧು ಬಾಂಧವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಾರನೇಯ ದಿನ ಅಂದರೆ 26ರಂದು ಜಾತ್ರೆಗೆ ಬೇರೆ ಬೇರೆ ಊರುಗಳಿಂದ ಬಂದಿರುವ ಸಂಬಂಧಿಗಳು, ಸ್ನೇಹಿತರು ಕುಟುಂಬಸ್ಥರು ಜಾತ್ರೆಯಲ್ಲಿ ಪಾಲ್ಗೊಂಡರು. ವಿಶೇಷವಾಗಿ ಕೆಲವರು ಬಾಯಿಗೆ ಬೀಗ ಹಾಕಿಕೊಳ್ಳುವುದರ ಮೂಲಕ ಗಂಗಮ್ಮ ದೇವಿಗೆ ಹರಕೆ ತೀರಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು. ಇದರ ಜೊತೆಯಲ್ಲಿ ಪಾನಕ, ಮಜ್ಜಿಗೆಯನ್ನು ಪ್ರತಿ ಗ್ರಾಮದವರು ಜಾತ್ರೆಗೆ ಬರುವವರಿಗೆ ನೀಡಿ ಬೇಸಿಗೆಯ ಬಿಸಿಯಲ್ಲಿ ನೆರವಾದರು.

Intro:KN_BNG_01_260419_gangamma jatre_script_Ambarish
Slug: ಅದ್ದೂರಿಯಾಗಿ ನಡೆದ ಐತಿಹಾಸಿಕ ನಲ್ಲೂರು ಕೋಟೆಯ ಗಂಗಮ್ಮದೇವಿಯ ಜಾತ್ರಾ ಮಹೋತ್ಸವ

ಬೆಂಗಳೂರು: ಐತಿಹಾಸಿಕ ನಲ್ಲೂರು ಕೋಟೆಯ ಗಂಗಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯನ್ನು ೧೩ ಊರುಗಳು ಸೇರಿಕೊಂಡು ಮಾಡುವುದು ವಿಶೇಷ.. ಈ ಜಾತ್ರೆಯ ಕುರಿತ ಒಂದು ವರದಿ ಇಲ್ಲಿದೆ ನೋಡಿ..

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಟಿಪ್ಪು ಕೋಟೆ ಎಷ್ಟು ಪ್ರಸಿದ್ಧಿ ಮತ್ತು ಇತಿಹಾಸ ಹೊಂದಿದೆಯೋ ಅಷ್ಟೇ ಇತಿಹಾಸ ಮತ್ತು ಪ್ರಸಿದ್ಧಿ ಹೊಂದಿರುವ ಮತ್ತೊಂದು ಕೋಟೆಯಂತಲೇ ಕರೆಯುವ ದೇವಾಲಯ ಅಂದರೆ ಅದು ನಲ್ಲೂರು ಕೋಟೆಯ ಶ್ರೀ ಗಂಗಾಮದೇವಿ ದೇವಸ್ಥಾನ.. ಇಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಜಾತ್ರೆಯನ್ನು ಸುತ್ತಮುತ್ತಲಿನ ೧೩ ಗ್ರಾಮದ ಜನರು ಸೇರಿ ಆಚರಿಸುತ್ತಾರೆ.. ಏಪ್ರಿಲ್ ತಿಂಗಳ 24, 25 ಮತ್ತು 26 ರಂದು ಮೂರು ದಿನಗಳ ಕಾಲ ನಡೆಯುತ್ತದೆ..

ನಲ್ಲೂರು ಕೋಟೆಯ ಗಂಗಮ್ಮ ದೇವಸ್ಥಾನದಲ್ಲಿ ನಡೆಯುವ ಜಾತ್ರೆಯು ಅನಾದಿಕಾಲದಿಂದಲೂ ಅಂದರೆ ಚೋಳರ ಕಾಲದಿಂದಲೂ ನಡೆದು ಬಂದಂತಹ ಸಾಂಪ್ರದಾಯಿಕ ಪದ್ಧತಿಯಾಗಿದೆ. ಈ ಜಾತ್ರೆ ನಡೆಯುವುದಕ್ಕೂ ಮುಂಚೆ 13 ಊರಿನ ಗ್ರಾಮಸ್ಥರು, ಮುಖಂಡರು ಹಾಗೂ ಅರ್ಚಕರು, ಮಾರ್ಗದರ್ಶಿಗಳು, ಇವರೆಲ್ಲರ ಸಹಕಾರದಿಂದ ದೇವಿ ಗಂಗಮ್ಮ ಜಾತ್ರೆಯ ವಿಚಾರವಾಗಿ ಚರ್ಚಿಸಿ 13 ಊರಿನ ಗ್ರಾಮಸ್ಥರಿಗೆ ಮನೆಮನೆಗೂ ಇಂತಿಷ್ಟು ಹಣವನ್ನು ಜಾತ್ರೆಗೆ ನೀಡಬೇಕೆಂದು ತಿಳಿಸಿ, ಜಾತ್ರೆಯ ಮೂರು ದಿನಕ್ಕೂ ಮುಂಚೆ 13 ಊರಿನ ಪ್ರತಿಯೊಂದು ಮನೆ ಮನೆಗೂ ಭೇಟಿ ನೀಡಿ ಅರ್ಚಕರು ಮೂರು ದಿನದ ಜಾತ್ರೆಯನ್ನು ಯಾವ ರೀತಿ ನಡೆಸಿಕೊಂಡು ಹೋಗಬೇಕೆಂದು ಅರ್ಚಕರು ತಿಳಿಸುತ್ತಾರೆ. ಅದೇ ಪ್ರಕಾರ ಜಾತ್ರೆಯನ್ನು ನಡೆಸುತ್ತಾರೆ.. ಈ ಜಾತ್ರೆಗೆ ನಲ್ಲೂರು, ಹೊಸನಲ್ಲೂರು ಬಾಲೇಪುರ, ಚೊನ್ನಹಳ್ಳಿ, ಬಿದಲುಪುರ, ಮಲ್ಲೇನಹಳ್ಳಿ, ರೆಡ್ಡಿಹಳ್ಳಿ ದೊಡ್ಡಹೊಸಹಳ್ಳಿ, ಚಿಕ್ಕಹೊಸಹಳ್ಳಿ, ದೇವನಾಯಕನಹಳ್ಳಿ, ನಲ್ಲಪ್ಪನಹಳ್ಳಿ, ಮಲ್ಲೇಪುರ ಮತ್ತು ಅರಸಿನಕುಂಟೆ ಗ್ರಾಮಗಳು ಸೇರಿಕೊಂಡಿದ್ದು ಎಲ್ಲಾ ಗ್ರಾಮದ ಜನರು ಒಟ್ಟಾಗಿ ಸೇರಿ ಈ ಐತಿಹಾಸಿಕ ದೇವಿಯಾ ಜಾತ್ರೆಗೆ ಸಾಕ್ಷಿಯಾದರು.. ಪ್ರತಿ ಊರಿನಲ್ಲೂ ಅದ್ದೂರಿಯಾಗಿ ಗಂಗಮ್ಮ ದೇವಿಯ ಜಾತ್ರೆಯನ್ನು ಮಾಡಿದ್ರು..

ಎಪ್ರಿಲ್ 24 ರಂದು ಈ ದಿನ ಉತ್ಸವದಲ್ಲಿ 13 ಊರುಗಳಿಂದ ತಮ್ಮ ತಮ್ಮ ಮನೆಗಳಲ್ಲಿ ಹಲವಾರು ಹೂವುಗಳಿಂದ ಅಲಂಕೃತ ದೀಪವನ್ನು ತಯಾರಿಸಿ, ಹಾಗೂ ಗ್ರಾಮ ದೇವರುಗಳನ್ನು ಹೂವಿನಿಂದ ಅಲಂಕರಿಸಿ ಅಲಂಕೃತವಾದ ವಿಧವಿಧವಾದ ರೀತಿಯ ಪಲ್ಲಕ್ಕಿಯಲ್ಲಿಟ್ಟು ಸಿದ್ದತೆ ಮಾಡಿಕೊಂಡು ದೇವಿಯ ಸನ್ನಿದಿಗೆ ಬಂದರು.. ದೀಪೋತ್ಸವ ಮತ್ತು ಪಲ್ಲಕ್ಕಿಗಳನ್ನು ರಾತ್ರಿಯ ವೇಳೆ ಎಲ್ಲಾ ಊರಿನ ಗ್ರಾಮಸ್ಥರು ನಲ್ಲೂರಿನ ಗಂಗಮ್ಮ ದೇವರ ಮಂದಿರಕ್ಕೆ ಆಗಮಿಸುತ್ತಾರೆ. ಈಗೆ ದೀಪಗಳನ್ನು ರಾತ್ರಿಯಿಂದ ಬೆಳಗಿನವರೆಗೂ ಪ್ರತಿ ಗ್ರಾಮದವರೂ ನಲ್ಲೂರು ಕೋಟೆಯ ಗಂಗಮ್ಮ ದೇವಿಯ ಸನ್ನಿದಿಗೆ ತೆಗದುಕೊಂಡು ಬಂದರು..

ಅದೇ ರೀತಿ ನಿನ್ನೆ ಅಂದರೆ ಎಪ್ರೀಲ್ 25 ರ ಬೆಳಗಿನ ಜಾವ ಪ್ರತಿ ಊರಿನವರು ಗಂಗಮ್ಮ ದೇವರ ಮಂದಿರದ ಮುಂದೆ ಮೊದಲೇ ಸಿದ್ದಪಡಿಸಿದ್ದ ಅಗ್ನಿ ಕುಂಡದಲ್ಲಿ ತಮ್ಮ ತಮ್ಮ ದೀಪಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಡೆದು ಕೊಂಡು ಹೋಗಿ ತಾಯಿ ಗಂಗಮ್ಮ ದೇವಿಗೆ ಹರಕೆಯನ್ನು ಅರ್ಪಿಸಿ ಪೂರ್ಣಗೊಳಿಸಿದರು.. ಇದು ಪ್ರತಿ ಬಾರಿಯ ಜಾತ್ರೆಯಲ್ಲಿ ನಡೆಯುವ ಸಂಪ್ರದಾಯ.. ಈ ರೀತಿ ಮಾಡಿದ್ರೆ ಪಾಪಗಳು ಕಳೆಯುತ್ತವೆ ಅನ್ನೋ ನಂಬಿಕೆ.. ಅಲ್ಲದೇ ಇದರಿಂದ ಯಾರಿಗೂ ಗಾಯಗಳಾಗುವುದಿಲ್ಲ..‌ಅದೇ ರೀತಿ ಅಗ್ನಿ ಕುಂಡದಲ್ಲಿ ಹೋದ ವರೆಗೆ ಯಾವುದೇ ನೋವು ಉಂಟಾಗಿಲ್ಲ.. ದೀಪೋತ್ಸವದ ಬಳಿಕ ತಮ್ಮ ತಮ್ಮ ಮನೆಯ ಅಂಗಳದಲ್ಲಿ ಬಂಧು ಬಾಂಧವರಿಗೆ ಊಟದ ವ್ಯವಸ್ಥೆ ಮಾಡಿದ್ರು..

ಮಾರನೇಯ ದಿನ ಅಂದರೆ 26 ರಂದು ಜಾತ್ರೆಗೆ ಬೇರೆ ಬೇರೆ ಊರುಗಳಿಂದ ಬಂದಿರುವ ಸಂಬಂಧಿಗಳು, ಸ್ನೇಹಿತರು ಕುಟುಂಬಸ್ಥರು ಜಾತ್ರೆಯಲ್ಲಿ ಪಾಲ್ಗೊಂಡರು.. ವಿಶೇಷವಾಗಿ ಕೆಲವರು ತಮ್ಮ ಹರಕೆಗಳನ್ನು ಬಾಯಿಗೆ ಬೀಗ ಹಾಕಿಕೊಳ್ಳುವುದರ ಮೂಲಕ ಗಂಗಮ್ಮ ದೇವಿಗೆ ಹರಕೆಯನ್ನು ತೀರಿಸಿದರು.. ಅದೇ ರೀತಿ ಪ್ರತಿಯೊಬ್ಬರಿಗೂ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಮಾಡಿದರು.... ಇದರ ಜೊತೆಯಲ್ಲಿ ಪಾಣಕ, ಮಜ್ಜಿಗೆಯನ್ನು ಪ್ರತಿ ಗ್ರಾಮದವರು ಜಾತ್ರೆಗೆ ಬರುವವರಿಗೆ ನೀಡಿ ಬೇಸಿಗೆಯ ಬಿಸಿಯಲ್ಲಿ ತಂಪು‌ ಪಾನೀಯವನ್ನು ನೀಡಿದ್ರು... ಈ ಸಂದರ್ಭದಲ್ಲಿ ಸಾವಿರಾರು ಜನರು ಗಂಗಮ್ಮ ದೇವಿಯ ದರ್ಶನ ಪಡೆಯಲು ಆಗಮಿಸಿದರು.. ರಾಜ್ಯದ ವಿವಿಧ ಮೂಲೆಗಳಿಂದ ಈ ಐತಿಹಾಸಿಕ ದೇವಿಯ ದರ್ಶನ ಪಡೆದರು.. Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.