ETV Bharat / state

ಹೊಸಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ - ಕರ್ನಾಟಕದ ಮಳೆ ಸುದ್ದಿ

ಲಾಕ್‌ಡೌನ್‌ ಇದ್ದಿದ್ದರಿಂದ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಂಚರಿಸಲಿಲ್ಲ. ಆದರೆ, ತುರ್ತು ಅಗತ್ಯಗಳಿಗಾಗಿ ಹೊರ ಬಂದಿದ್ದವರು ಮಳೆಯಿಂದ ಪರದಾಡಿದರು..

rain
rain
author img

By

Published : May 23, 2021, 9:42 PM IST

ಹೊಸಕೋಟೆ/ : ತೌಕ್ತೆ ಚಂಡಮಾರುತ ಪರಿಣಾಮ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ.

ಗುಡುಗು, ಮಿಂಚು ಸಹಿತ ಜೋರು ಮಳೆಯಾಗಿದೆ. ಬೆಳಗ್ಗೆಯಿಂದ ಬಿಸಿಲು ಹೆಚ್ಚಾಗಿತ್ತು. ಆದರೆ‌, ಸಂಜೆ ಆದಂತೆ ಶುರುವಾದ ಮಳೆ ಒಂದು ಗಂಟೆಗಳಿಗೂ ಹೆಚ್ಚು ಕಾಲ ಸುರಿದಿದೆ.

ತಾವರೆಕೆರೆ, ಮಂಚಪನಹಳ್ಳಿ, ಸೊಣ್ಣನಾಯಕಹಳ್ಳಿ,ಗಂಗಪುರ ಭಾನಮಾಕನಹಳ್ಳಿ ಸೇರಿದಂತೆ ಹಲವು ಕಡೆ ಮಳೆ ಬೀಳುತ್ತಿದೆ. ಮಳೆ ನೀರಿನಿಂದ ಮೋರಿಗಳು‌ ತುಂಬಿ‌ ರಸ್ತೆಯಲ್ಲಿ ಹರಿಯುತ್ತಿದೆ. ಮಳೆ ಆರಂಭವಾದಂತೆ ವಿದ್ಯುತ್​ ಕಡಿತಗೊಳಿಸಲಾಗಿದೆ. ಜನ ಕತ್ತಲಲ್ಲಿ ಕಾಲ ಕಳೆಯುತ್ತಿದ್ದಾರೆ.

ಲಾಕ್‌ಡೌನ್‌ ಇದ್ದಿದ್ದರಿಂದ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಂಚರಿಸಲಿಲ್ಲ. ಆದರೆ, ತುರ್ತು ಅಗತ್ಯಗಳಿಗಾಗಿ ಹೊರ ಬಂದಿದ್ದವರು ಮಳೆಯಿಂದ ಪರದಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.