ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಒಟ್ಟು 25 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುತ್ತಿದ್ದು, ಅಂತಿಮವಾಗಿ ಕಣದಲ್ಲಿ 427 ಸ್ಥಾನಗಳಿಗೆ 1131 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣಾ ಪ್ರಚಾರ ಮಾಡುವುದರಿಂದ ತಮ್ಮ ವಿವರವನ್ನು ಒಳಗೊಂಡ ಕರಪತ್ರವನ್ನು ಪ್ರಿಂಟ್ ಮಾಡಿಸುತ್ತಿದ್ದಾರೆ. ಹೀಗಾಗಿ ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಈಗ ಕೈತುಂಬಾ ಕೆಲಸ ಸಿಕ್ಕಿದೆ.
ದೊಡ್ಡಬಳ್ಳಾಪುರ ನಗರ ಮತ್ತು ಹೋಬಳಿ ಕೇಂದ್ರದಲ್ಲಿರುವ ಪ್ರಿಂಟಿಂಗ್ ಪ್ರೆಸ್ಗಳಲ್ಲಿ ಈಗ ಕೈ ತುಂಬಾ ಕೆಲಸ. ಸಾಮಾನ್ಯವಾಗಿ ಒಬ್ಬ ಅಭ್ಯರ್ಥಿ 400ರಿಂದ ಸಾವಿರ ಮತದಾರರ ಕ್ಷೇತ್ರ ಪ್ರತಿನಿಧಿಸುತ್ತಾನೆ. ಚುನಾವಣಾ ಆಯೋಗದಿಂದ ಚಿಹ್ನೆ ಸಿಕ್ಕ ನಂತರ ಕರಪತ್ರಗಳನ್ನು ಪ್ರಿಂಟಿಂಗ್ ಮಾಡಿಸುತ್ತಾನೆ. ಬಹುತೇಕ ಅಭ್ಯರ್ಥಿಗಳು ಚಿಹ್ನೆ ಸಿಗುವ ಮುನ್ನವೇ ಕರಪತ್ರ ಪ್ರಿಂಟಿಂಗ್ ಮಾಡಿಸಿ ಪ್ರಚಾರಕ್ಕೆ ಧುಮುಕುತ್ತಿರುವುದರಿಂದ ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಈಗ ಲಾಭದ ಸಮಯ.
ಓದಿ: ರಾಜ್ಯದಲ್ಲಿ 26 ಸಾವಿರ ಕೋಟಿ ರೂ. ಹೂಡಿಕೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ
ಈ ಕುರಿತು ಮಾತನಾಡಿದ ಹನುಮಾನ್ ಪ್ರಿಂಟಿಂಗ್ ಪ್ರೆಸ್ ಮಾಲೀಕರಾದ ಪದ್ಮನಾಭ್, ಚುನಾವಣೆ ಬಂದ್ರೆ ಕೈ ತುಂಬ ಕೆಲಸ ಇರುತ್ತೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾದ ತಕ್ಷಣವೇ ಅಭ್ಯರ್ಥಿಗಳಿಂದ ಬೇಡಿಕೆ ಬರುತ್ತೆ. ಚಿಹ್ನೆ ಬಂದ ನಂತರ ಅಭ್ಯರ್ಥಿಗಳಿಂದ ಸಾಕಷ್ಟು ಬೇಡಿಕೆ ಬರುತ್ತೆ. ಕ್ಷೇತ್ರದಲ್ಲಿರುವ ಮತದಾರರ ಸಂಖ್ಯೆಗೆ ಅನುಗುಣವಾಗಿ ಕರಪತ್ರ ಪ್ರಿಂಟಿಂಗ್ ಮಾಡಿಸುತ್ತಾರೆ. ನಾವು ಪ್ರತಿ ಸಾವಿರ ಕರಪತ್ರಗಳಿಗೆ ಒಂದು ಸಾವಿರ ಬೆಲೆ ನಿಗದಿ ಮಾಡಿದ್ದು, ಪ್ರತಿದಿನ 35 ಸಾವಿರದಿಂದ 40 ಸಾವಿರ ಕರಪತ್ರ ಪ್ರಿಂಟಿಂಗ್ ಮಾಡುತ್ತೇವೆ. ಕಲರ್ ಪ್ರಿಂಟಿಂಗ್ಗೆ ಬೆಂಗಳೂರಿಗೆ ಹೋಗಬೇಕು ಎಂದು ತಿಳಿಸಿದರು.