ETV Bharat / state

ದುಬೈನಿಂದ ಬಂದ ಕೊರಿಯರ್​​ನಲ್ಲಿ 2.45 ಕೋಟಿ ಮೌಲ್ಯದ ಅಕ್ರಮ ಚಿನ್ನ ಪತ್ತೆ - ಈಟಿವಿ ಭಾರತ ಕನ್ನಡ

ಕೊರಿಯರ್ ಮೂಲಕ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣವು ಕಸ್ಟಮ್ಸ್ ಇಂಟೆಲಿಜೆನ್ಸ್ ಯೂನಿಟ್​​ ಕಾರ್ಯಾಚರಣೆ ವೇಳೆ ಬಯಲಾಗಿದೆ.

gold-found-in-a-courier-from-dubai-at-bengaluru-airport
ದುಬೈನಿಂದ ಬಂದ ಕೊರಿಯರ್​​ನಲ್ಲಿ 2.45 ಕೋಟಿ ಮೌಲ್ಯದ ಚಿನ್ನ ಪತ್ತೆ
author img

By

Published : Nov 7, 2022, 7:18 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) : ದುಬೈನಿಂದ ಕೊರಿಯರ್ ಮೂಲಕ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣವು ಕಸ್ಟಮ್ಸ್ ಇಂಟೆಲಿಜೆನ್ಸ್ ಯೂನಿಟ್ (CIU) ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ವ್ಯಕ್ತಿಯನ್ನು ಬಂಧಿಸಲಾಗಿದ್ದು, 2.45 ಕೋಟಿ ರೂ. ಮೌಲ್ಯದ 4.72 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

ನವೆಂಬರ್ 5ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ದುಬೈನಿಂದ ಟ್ರೆಡ್ ಮಿಲ್ 5 HP ಯಂತ್ರ ಕೊರಿಯರ್ ಮೂಲಕ ಬಂದಿತ್ತು. ಆದರೆ ಏರ್ ಕಾರ್ಗೋ ಕಮಿಷನ್​ರೇಟ್​​ನ ಕಸ್ಟಮ್ಸ್ ಇಂಟಲಿಜೆನ್ಸ್ ಯೂನಿಟ್ ವಿಭಾಗದ ಅಧಿಕಾರಿಗಳಿಗೆ ಕೊರಿಯರ್ ಕಳಿಸಿದ ಮತ್ತು ತೆಗೆದುಕೊಳ್ಳುವ ವ್ಯಕ್ತಿಯ ಮೇಲೆ ಸಂಶಯವಿತ್ತು. ಬಳಿಕ ಟ್ರೆಡ್ ಮಿಲ್ ಯಂತ್ರ ಸ್ಕ್ಯಾನ್ ಮಾಡಿದಾಗ ಅಕ್ರಮ ಚಿನ್ನ ಸಾಗಾಣಿಕೆ ಬೆಳಕಿಗೆ ಬಂದಿದೆ.

gold-found-in-a-courier-from-dubai-at-bengaluru-airport
ಕೊರಿಯರ್​​ನಲ್ಲಿ 2.45 ಕೋಟಿ ಮೌಲ್ಯದ ಚಿನ್ನ ಪತ್ತೆ

ಟ್ರೆಡ್ ಮಿಲ್ 5 HP ಯಂತ್ರ ಬಿಚ್ಚಿದಾಗ ಅದರೊಳಗೆ ಗೋಲ್ಡ್ ಬಾರ್​​ಗಳು ಪತ್ತೆಯಾಗಿವೆ. ಒಟ್ಟು 2.45 ಕೋಟಿ ರೂಪಾಯಿ ಮೌಲ್ಯದ 4.72 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಕೊರಿಯರ್ ಸ್ವೀಕರಿಸಬೇಕಾದ ವ್ಯಕ್ತಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ತಾಯಿಯೇ ಮಗು ಎಸೆದು ಕೊಂದ ಪ್ರಕರಣ: ಪೊಲೀಸ್​​ ಚಾರ್ಜ್​​ಶೀಟ್​ನಲ್ಲಿ ಏನಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.