ನೆಲಮಂಗಲ: ಸಮಾನತೆ ಮತ್ತು ದಮನಿತರ ಉದ್ಧಾರಕ್ಕೆ ಹೆಚ್ಚು ಒತ್ತು ನೀಡಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯನ್ನು ಹೆಸರಘಟ್ಟ ಬಳಿ ಇರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.
ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಯ ಇಬ್ಬರು ತರಕಾರಿ ಮಾರಾಟಗಾರರಿಗೆ ನೂತನ ಅವಿಷ್ಕಾರದ ಸೌರಶಕ್ತಿ ಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಿ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಿದರು. ಐ.ಐ.ಹೆಚ್.ಆರ್.ನ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಮತ್ತು ನಾಮ ನಿದೇರ್ಶಿತ ನಿರ್ವಹಣಾ ಕಮಿಟಿಯ ಸದಸ್ಯರಾದ ಡಾ. ಪ್ರಭಾಕರ್ ಮತ್ತು ಶಿವಪ್ರಸಾದ್ ಧ್ವಜರೋಹಣ ಮಾಡಿ, ಮಹಾತ್ಮನಿಗೆ ಪುಷ್ಪ ನಮನ ಸಲ್ಲಿಸಿ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.
ತುಮಕೂರಿನ ಶಿರಾ ತಾಲೂಕಿನ ಯರಾಡಕಟ್ಟೆ ತರಕಾರಿ ಮಾರಾಟಗಾರ ರೈತ ಕರ್ಣಾ ಹಾಗೂ ಐವರಕಂಡಪುರದ ತರಕಾರಿ ಮಾರಾಟಗಾರ ವಿಜಯ್ ಕುಮಾರ್ಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು.