ಹೊಸಕೋಟೆ (ಬೆಂಗಳೂರು): ಲಾಕ್ಡೌನ್ ಹಿನ್ನೆಲೆ ಆಹಾರವಿಲ್ಲದೇ ಪರದಾಡುತ್ತಿದ್ದ ಕೋತಿಗಳಿಗೆ ಹಣ್ಣು-ಹಂಪಲು ನೀಡಲಾಯಿತು.
ನಂದಗುಡಿಯ ಅರಣ್ಯ ವ್ಯಾಪ್ತಿಯಲ್ಲಿರುವ ಮುಂಗಗಳಿಗೆ ಜನಜಾಗೃತಿ ಸೇವಾ ಟ್ರಸ್ಟ್ ಹಾಗೂ ಸಂಗೋಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡಲಾಯಿತು. ಬಾಳೆಹಣ್ಣು, ಸೌತೆಕಾಯಿ, ಕ್ಯಾರೇಟ್, ನವಿಲುಕೋಸು, ಕಡಲೆಕಾಯಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ನೀಡಿದರು.