ETV Bharat / state

ಬೆಂ.ಗ್ರಾಮಾಂತರದಲ್ಲೂ ಕೊರೊನಾ ಕೇಕೆ: ನಿನ್ನೆ ಮತ್ತೆ ನಾಲ್ವರಿಗೆ ವಕ್ಕರಿಸಿದ ಸೋಂಕು

author img

By

Published : Jun 21, 2020, 1:22 AM IST

ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಕೊರೊನಾ ಅಟ್ಟಹಾಸ ಮುಂದುವರಿದಿದೆ. ನಿನ್ನೆ ಮತ್ತೆ ನಾಲ್ವರಲ್ಲಿ ಸೋಂಕು ದೃಢವಾಗುವ ಮೂಲಕ ಜನರಲ್ಲಿ ಆತಂಕ ಮೂಡಿಸಿದೆ.

four more corona positive cases reported in Bangalore rural today
ಬೆಂ.ಗ್ರಾಮಾಂತರದಲ್ಲೂ ಕೊರೊನಾ ಕೇಕೆ: ಇಂದು ಮತ್ತೆ ನಾಲ್ವರಿಗೆ ವಕ್ಕರಿಸಿದ ಸೋಂಕು

ದೇವನಹಳ್ಳಿ (ಬೆಂ,ಗ್ರಾ): ಜಿಲ್ಲೆಯಲ್ಲಿ ನಿನ್ನೆ ಸಹ ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸೋಂಕಿತ ವ್ಯಕ್ತಿಯ ಪ್ರಥಮ ಸಂಪರ್ಕ, ಒಬ್ಬರು ದ್ವಿತೀಯ ಸಂಪರ್ಕ ಹೊಂದಿದ್ದವರಾಗಿದ್ದಾರೆ.

ಅಲ್ಲದೆ ಇನ್ನೊಬ್ಬ ವ್ಯಕ್ತಿ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹೊಸಕೋಟೆ ನಗರದ ನಿವಾಸಿಗಳಾದ 35 ವರ್ಷದ ಮಹಿಳೆ (ಪಿ-8544) ಪಿ-7578 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಹಾಗೂ 30 ವರ್ಷದ ಮಹಿಳೆ (ಪಿ-8545) ಪಿ-7578 ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದ ಹಿನ್ನೆಲೆ ಕೊರೊನಾ ಹರಡಿದೆ.

ನೆಲಮಂಗಲ ತಾಲೂಕಿನ ವಾಜರಹಳ್ಳಿಯ ನಿವಾಸಿ 37 ವರ್ಷದ ಪುರುಷ (ಪಿ-8546)ನ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ನೆಲಮಂಗಲ ನಗರದ ನಿವಾಸಿ 47 ವರ್ಷದ ಮಹಿಳೆ (ಪಿ-8547) ಪಿ-7578 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಹಿನ್ನೆಲೆ ಆರೋಗ್ಯ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿರುತ್ತದೆ.

ಸೋಂಕಿತ ವ್ಯಕ್ತಿಗಳು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.