ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 39 ವರ್ಷದ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ವ್ಯಕ್ತಿ ತಾಲೂಕಿನ ಕೋಡಿಪಾಳ್ಯದ ನಿವಾಸಿಯಾಗಿದ್ದು ಈತ ಫೆ.14ರಿಂದ ಮಾರ್ಚ್ 18ರವರೆಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಜೊತೆಗೆ ದೆಹಲಿಯ ನಿಜಾಮುದ್ದೀನ್, ಹೈದರಾಬಾದ್‌ನ ಕಾಚಿಗುಡಗೂ ಭೇಟಿ ನೀಡಿದ್ದ. ಈ ವೇಳೆ ಆತನಿಗೆ ಸೋಂಕು ತಗುಲಿರುವ ಶಂಕೆಯಿದೆ.
ಆರಂಭದಲ್ಲಿ ಈತನನ್ನು ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇಡಲಾಗಿತ್ತು. ಇದೀಗ ಸೋಂಕು ದೃಢಪಟ್ಟಿರುವುದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.