ETV Bharat / state

ಜಮೀನಿನ ಮೇಲೆ ಪವರ್‌ಲೈನ್ ಅಳವಡಿಕೆ: ರೈತರ ಪ್ರತಿಭಟನೆ, ಪರಿಹಾರಕ್ಕೆ ಆಗ್ರಹ

ಜಮೀನಿನ ಮೇಲೆ ಪವರ್‌ಲೈನ್​ ಅಳವಡಿಕೆಗೆ ಬಂದ ಕಾರ್ಮಿಕರನ್ನು ರೈತರು ತಡೆದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

author img

By ETV Bharat Karnataka Team

Published : Dec 17, 2023, 4:44 PM IST

farmers-denies-power-line-work-at-doddaballapur
ಜಮೀನಿನ ಮೇಲೆ ಪವರ್ ಲೈನ್ ಅಳವಡಿಕೆ : ರೈತರಿಂದ ಪ್ರತಿಭಟನೆ, ಪರಿಹಾರಕ್ಕೆ ಆಗ್ರಹ
ಜಮೀನಿನ ಮೇಲೆ ಪವರ್‌ಲೈನ್ ಅಳವಡಿಕೆ

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಯಾವುದೇ ಮಾಹಿತಿ ನೀಡದೆ ಜಮೀನುಗಳ ಮೇಲೆ 220 ಕೆ.ವಿ ಪವರ್‌ಲೈನ್ ಎಳೆಯಲು ಬಂದ ಕಾರ್ಮಿಕರನ್ನು ರೈತರು ತಡೆದು ಪ್ರತಿಭಟನೆ ನಡೆಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಕೆಪಿಟಿಸಿಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದೆ. ಮೊದಲು ಪರಿಹಾರ ಕೊಡಿ, ನಂತರ ಕಾಮಗಾರಿ ನಡೆಸಿ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಪವರ್‌ಲೈನ್ ಎಳೆಯಲು ಬಂದಿದ್ದ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದಾರೆ.

ಖಾನೇಹೊಸಹಳ್ಳಿ ಗ್ರಾಮದ ಬಳಿ ಕೆಪಿಟಿಸಿಎಲ್ ವತಿಯಿಂದ 220 ಕೆ.ವಿ ಪವರ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕಳೆದ ಇಪ್ಪತ್ತು ವರ್ಷಗಳ ಹಿಂದೆ ನೆಲಮಂಗಲ-ದೊಡ್ಡಬಳ್ಳಾಪುರ ಮಾರ್ಗದಲ್ಲಿ ಪವರ್‌ಲೈನ್ ಹಾದು ಹೋಗಿದ್ದು, ಇದೇ ಪವರ್‌ಲೈನ್​ನಲ್ಲಿ ಹೆಚ್ಚುವರಿ ವಿದ್ಯುತ್ ಲೈನ್‌ಗಳನ್ನು ಹಾಕಲಾಗುತ್ತಿದೆ. ಇದರ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದ್ದು, ಖಾನೇಹೊಸಹಳ್ಳಿ ಗ್ರಾಮದ ಬಳಿ ಲೈನ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಕೆಪಿಟಿಸಿಎಲ್​ ಅವರು ಏಕಾಏಕಿ ಜಮೀನಿನ ಮೇಲೆ ಪವರ್‌ಲೈನ್​ ಎಳೆಯುತ್ತಿರುವುದಕ್ಕೆ ಮತ್ತು ಕಾಮಗಾರಿ ಬಗ್ಗೆ ಮಾಹಿತಿ ನೀಡದೇ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಟಿಸಿಎಲ್ ವಿರುದ್ಧ ರೈತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಮುಖಂಡ ರಂಗರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಪವರ್‌ಲೈನ್ ಅಳವಡಿಸಿದ್ದಾಗಲೂ ಯಾವುದೇ ಪರಿಹಾರ ಕೊಟ್ಟಿಲ್ಲ. ಈಗ ಹೆಚ್ಚುವರಿ ಪವರ್‌ಲೈನ್ ಅಳವಡಿಸುವಾಗಲೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು ಗಮನಹರಿಸಿ ಸರ್ಕಾರದಿಂದ ಪರಿಹಾರ ಒದಗಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾಮಗಾರಿ ವೇಳೆ ಬೈರಸಂದ್ರಪಾಳ್ಯದ ರಾಮಕೃಷ್ಣಪ್ಪ ಎಂಬವರ ತೋಟದಲ್ಲಿದ್ದ ಅಡಿಕೆ, ನೀಲಗಿರಿ ಮರಗಳನ್ನು ಏಕಾಏಕಿ ಕಡಿದು ಹಾಕಿದ್ದಾರೆ. ರಾಗಿ ಕೊಯ್ಲು ನಡೆಯುತ್ತಿದ್ದು, ರೈತರ ಹೊಲಗಳಲ್ಲಿ ಕಾಮಗಾರಿ ಟ್ರ್ಯಾಕ್ಟರ್​​ಗಳ ಓಡಾಟದಿಂದ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ. ರೈತರಿಗೆ ಪರಿಹಾರ ಕೊಡುವತನಕ ನಾವು ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದರು.

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಮಾತನಾಡಿ, ಪವರ್‌ಲೈನ್ ಹಾದು ಹೋಗಿರುವ ತೋಟ ಮತ್ತು ಹೊಲಗಳಲ್ಲಿ ಕೃಷಿ ಮಾಡುವುದು ಅಪಾಯಕಾರಿ. ಯಾವುದೇ ಸಮಯದಲ್ಲಿ ರೈತರು ವಿದ್ಯುತ್ ಅವಘಡಗಳಿಗೆ ತುತ್ತಾಗಬಹುದು. ಈ ಜಾಗವನ್ನು ಸರ್ಕಾರ ವಶಕ್ಕೆ ಪಡೆದು ರೈತರಿಗೆ ಪರಿಹಾರ ನೀಡಬೇಕು. ಫೆನ್ಸಿಂಗ್ ಹಾಕುವ ಮೂಲಕ ವಿದ್ಯುತ್ ಅವಘಡಗಳಿಗೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಉದ್ಘಾಟನೆಗೆ ಕಾಯುತ್ತಿರುವ ಹಾವೇರಿ ಮೆಡಿಕಲ್ ಕಾಲೇಜು; ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತೆ ಜನರ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.