ETV Bharat / state

ಪಾತಾಳಕ್ಕೆ ಕುಸಿದ ಬೆಲೆ.. 10 ಎಕರೆಯುಲ್ಲಿನ ಟೊಮೆಟೊ ಬೆಳೆಗೆ ಬೆಂಕಿ ಹಚ್ಚಿದ ರೈತ - 10 ಎಕರೆಯುಲ್ಲಿನ ಟೊಮೆಟೊ ಬೆಳೆಗೆ ಬೆಂಕಿ ಹಚ್ಚಿದ ರೈತ,

ಒಂದೆಡೆ ಕೋವಿಡ್​ ಹಾವಳಿ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಳಗಳಿಗೆ ಇಲ್ಲದೆ ಬೆಲೆ.. ಹೀಗಾಗಿ ರೈತರು ಬೇಸತ್ತಿದ್ದಾರೆ. ಟೊಮೆಟೊ ಬೆಳೆಗೆ ಬೆಲೆ ಇಲ್ಲದಿರುವುದರಿಂದ ಮನನೊಂದ ನೆಲಮಂಗಲದ ರೈತನೋರ್ವ ತಾನು ಬೆಳೆದಿದ್ದ 10 ಎಕರೆಯಲ್ಲಿನ ಟೊಮೆಟೊಗೆ ಬೆಂಕಿ ಹಚ್ಚಿದ್ದಾನೆ.

ಸೂಕ್ತ ಬೆಲೆಯಿಲ್ಲದೆ ಟೊಮ್ಯಾಟೊ ಬೆಳೆಗೆ ಬೆಂಕಿ ಹಚ್ಚಿದ ರೈತ  Farmer set fire to tomato crop  fire to tomato crop  ಟೊಮ್ಯಾಟೊ ಬೆಳೆಗೆ ಬೆಂಕಿ ಹಚ್ಚಿದ ರೈತ  ನೆಲಮಂಗಲ ಸಮೀಪದ ಖಾಜಿಪಾಳ್ಯ  ಪಾತಾಳಕ್ಕೆ ಕುಸಿದ ಬೆಲೆ,  10 ಎಕರೆಯುಲ್ಲಿನ ಟೊಮೆಟೊ ಬೆಳೆಗೆ ಬೆಂಕಿ ಹಚ್ಚಿದ ರೈತ,
ಸೂಕ್ತ ಬೆಲೆಯಿಲ್ಲದೆ ಟೊಮ್ಯಾಟೊ ಬೆಳೆಗೆ ಬೆಂಕಿ ಹಚ್ಚಿದ ರೈತ
author img

By

Published : May 22, 2021, 8:27 AM IST

Updated : May 22, 2021, 8:59 AM IST

ನೆಲಮಂಗಲ: ಕೊರೊನಾ ಲಾಕ್‍ಡೌನ್ ಎಫೆಕ್ಟ್​​ನಿಂದಾಗಿ ಟೊಮ್ಯಾಟೊ ಬೆಳೆದ ರೈತರು ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಈ ಬಾರಿ ಬೆಳೆ ಚೆನ್ನಾಗಿ ಇದ್ದರೂ ಕೂಡ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಮನನೊಂದು ರೈತನೋರ್ವ ಬೆಳೆಗೆ ಬೆಂಕಿ ಹಚ್ಚಿರುವ ಘಟನೆ ನೆಲಮಂಗಲ ತಾಲೂಕಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಖಾಜಿಪಾಳ್ಯ ಹಾಗೂ ಕುತ್ತಿನಗೆರೆ ರೈತರು ಈ ಬಾರಿ ಹೆಚ್ಚು ಟೊಮೆಟೊ ಬೆಳೆದಿದ್ದಾರೆ. ಇದೀಗ ಟೊಮೆಟೊ ಕೆಜಿಗೆ 5 ರೂಪಾಯಿಯಂತೆ ರೈತರಿಂದ ಖರೀದಿಯಾದರೆ, 10 ರೂಪಾಯಿಗೆ ದಲ್ಲಾಳಿ ಮಾರುವಂತಾಗಿದೆ. ಇದರಿಂದ ಮನನೊಂದ ರೈತ ತನ್ನ 10 ಎಕರೆಯಲ್ಲಿನ ಟೊಮಟೊ ಬೆಳೆಗೆ ಬೆಂಕಿ ಹಚ್ಚಿದ್ದಾನೆ.

ಸೂಕ್ತ ಬೆಲೆಯಿಲ್ಲದೆ ಟೊಮೆಟೊ ಬೆಳೆಗೆ ಬೆಂಕಿ ಹಚ್ಚಿದ ರೈತ

ಈ ಕುರಿತು ಮಾತನಾಡಿದ ರೈತ ಮರಿಗೌಡ, ಮೇ ತಿಂಗಳ ವೇಳೆಗೆ ವಿವಾಹ ಸಮಾರಂಭಗಳು ಇರುವುದರಿಂದ ಟೊಮೆಟೊ ಬೆಳೆಗೆ ಉತ್ತಮ ಬೆಲೆ ಸಿಗುವ ಭರವಸೆಯಲ್ಲಿ 10 ಎಕರೆ ಜಮೀನು ಭೋಗ್ಯಕ್ಕೆ ಪಡೆದು ಟೊಮೆಟೊ ಬೆಳೆದಿದ್ದೆ. ಆದರೀಗ ಕೊರೊನಾ ಲಾಕ್​ಡೌನ್​ನಿಂದಾಗಿ ಬೆಲೆಯಿಲ್ಲದಂತಾಗಿದೆ. ಹೀಗಾಗಿ ಬೆಳೆಗೆ ಬೆಂಕಿ ಹಚ್ಚಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ ರೈತರು, ಕೋವಿಡ್ ಸಂದರ್ಭದಲ್ಲಿ ನೇರವಾಗಿ ನಮ್ಮಿಂದ ಟೊಮೆಟೊ ಖರೀದಿಸಿ ಎಂದು ಮನವಿ ಮಾಡಿದ್ದಾರೆ.

ಓದಿ: ''ಕೊಡುವ ಮೂರು ಸಾವಿರ ರೂಪಾಯಿಯಲ್ಲಿ ಬಾಡಿಗೆ ಕಟ್ಬೇಕಾ? ಬಡ್ಡಿ ಕಟ್ಬೇಕಾ? ಫೈನಾನ್ಸ್​ ಕಟ್ಬೇಕಾ..?''

Last Updated : May 22, 2021, 8:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.