ನೆಲಮಂಗಲ: ಪರವಾನಿಗೆ ಪಡೆಯದೆ ಕಾಂಗ್ರೆಸ್ ಪಕ್ಷ ಬೃಹತ್ ಬ್ಯಾನರ್ ಅಳವಡಿಕೆ ಮಾಡಿದ್ದು, ಇದರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಫ್ಲೆಕ್ಸ್ನ್ನು ತೆರವುಗೊಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬೃಹತ್ ಬ್ಯಾನರ್ ಹಾಕಲಾಗಿತ್ತು. ನೀತಿಸಂಹಿತೆ ಹಾಗೂ ಪರವಾನಿಗೆ ಪಡೆಯದ ಹಿನ್ನೆಲೆ ಚುನಾವಣಾ ಅಧಿಕಾರಿಗಳಿಗೆ ದೂರು ಬಂದಿದ್ದು, ಹೆದ್ದಾರಿ ಅಕ್ಕ ಪಕ್ಕದಲ್ಲಿದ್ದ ಫ್ಲೆಕ್ಸ್ಗಳನ್ನ ಚುನಾವಣಾ ಅಧಿಕಾರಿಗಳು ತೆರವು ಗೊಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರ ಅಕ್ಕ ಪಕ್ಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಬೃಹತ್ ಬ್ಯಾನರ್ಗಳಿಗೆ ಚುನಾವಣಾ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ. ಇನ್ನೂ ದೇಶ ಕಟ್ಟಿದ ಕಾಂಗ್ರೆಸ್ಗೆ ಮತ ನೀಡಿ ಮತ್ತು ಪ್ರಣಾಳಿಕೆಯ ಅಂಶಗಳು ಬ್ಯಾನರ್ಸ್ಗಳಲ್ಲಿ ರಾರಾಜಿಸುತ್ತಿತ್ತು. ಇದನ್ನು ತೆರವುಗೊಳಿಸಲಾಗಿದೆ.