ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ ಮೂಲಕ ಸುಮಾರು 20 ಕೋಟಿ ರೂಪಾಯಿ ಮೌಲ್ಯದ 2 ಕೆ.ಜಿ ಕೋಕೆನ್ ಕ್ಯಾಪ್ಸುಲ್ ಸಾಗಿಸುತ್ತಿದ್ದ ನೈಜಿರಿಯಾ ಮೂಲದ ಪ್ರಯಾಣಿಕನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬೆಂಗಳೂರು ಘಟಕದ (Directorate of Revenue Intelligence) ಅಧಿಕಾರಿಗಳು ಬಂಧಿಸಿದ್ದಾರೆ.
ಫ್ಲೈ ಇಥಿಯೋಪಿಯಾ ವಿಮಾನದಲ್ಲಿ ಕೋಕೆನ್ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಗುಪ್ತಚರ ಅಧಿಕಾರಿಗಳು ನೈಜಿರಿಯಾ ಪ್ರಜೆಯನ್ನು ತಪಾಸಣೆ ನಡೆಸಿದ್ದಾರೆ. ಸುಮಾರು 40 ವರ್ಷ ವಯಸ್ಸಿನ ಆರೋಪಿಯು ತನ್ನ ಹೊಟ್ಟೆಯೊಳಗೆ 2 ಕೆ.ಜಿ ತೂಕದ 99 ಕೊಕೇನ್ ಕ್ಯಾಪ್ಸುಲ್ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದ. ಈತ ನೈಜೀರಿಯನ್ ಪಾಸ್‌ಪೋರ್ಟ್ ಹೊಂದಿದ್ದು, ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 775 ಗ್ರಾಂ ಚಿನ್ನ ವಶಕ್ಕೆ