ETV Bharat / state

ಕಲೆಗಾಗಿ ಜೀವ ಮುಡಿಪಿಟ್ಟ ಕೆ. ನಾಗರತ್ನಮ್ಮ: ಈಟಿವಿ ಭಾರತ ಜೊತೆ ವಿಶೇಷ ಸಂದರ್ಶನ - Drama artist D. nagarathnamma story

ಹಿಂದೆ ಹೆಣ್ಣು ಎಂದರೆ, ಮನೆಯಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಎತ್ತಿಕೊಂಡು ಮನೆಗೆ ಮಾತ್ರ ಸೀಮಿತವಾಗಿರಬೇಕು ಎಂಬ ಕಲ್ಪನೆಯಲ್ಲಿದ್ದವರೇ ಹೆಚ್ಚು. ಆದರೆ, ಅಂದಿನ ಕಾಲ ಘಟ್ಟದಲ್ಲಿ ಇದೆಲ್ಲವನ್ನು ಬದಿಗಿಟ್ಟು ರಂಗ ಭೂಮಿಯಲ್ಲಿ ಸೈ ಎನ್ನಿಸಿಕೊಂಡವರು ಡಾ. ಕೆ. ನಾಗರತ್ನಮ್ಮ. ಅವರೊಂದಿಗೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ವಿಶೇಷ ಸಂದರ್ಶನ ನಡೆಸಿದ್ದಾರೆ.

ಡಾ.ಕೆ.ನಾಗರತ್ನಮ್ಮ
author img

By

Published : Oct 13, 2019, 3:13 PM IST

Updated : Oct 13, 2019, 3:30 PM IST

ಹೊಸಪೇಟೆ: ಕಲೆಯನ್ನು ಕರಗತ ಮಾಡಿಕೊಂಡು ಕರ್ನಾಟಕ ಜನರ ಮನಸ್ಸನ್ನು ಗೆದ್ದಿರುವ ಬಡ ಕಲಾವಿದೆ ಡಾ. ಕೆ. ನಾಗರತ್ನಮ್ಮ ರಂಗ ಭೂಮಿಯಲ್ಲಿ ಅಪಾರವಾದ ಸಾಧನೆ ಮಾಡಿದ್ದಾರೆ.

ಡಾ. ಕೆ. ನಾಗರತ್ನಮ್ಮ 1952 ರಲ್ಲಿ ಜನಿಸಿದವರು. ತಂದೆ ಮಾರೆಪ್ಪ, ತಾಯಿ ಸಿದ್ದಮ್ಮ. ಇವರದ್ದು ಅವಿಭಕ್ತ ಕುಟುಂಬವಾಗಿದ್ದು, ಬಡತನದಲ್ಲೇ ಸಂಸಾರ ನಡೆಸುವುದು ತುಂಬಾ ಕಷ್ಟ ಎಂಬುದನ್ನು ಅರಿತಿದ್ದ ನಾಗರತ್ನಮ್ಮ ಅವರು ತಂದೆಗೆ ಸಹಾಯ ಮಾಡಬೇಕೆಂದು 1967ರಲ್ಲಿ ರಂಗ ಭೂಮಿ ಪ್ರವೇಶಿಸಿದ್ದರು. ಬಳಿಕ ಅವರು ಸುಮಾರು 10 ಸಾವಿರಕ್ಕೂ ‌ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಪ್ರಮುಖ ನಾಟಕಗಳು:
ರಕ್ತ ರಾತ್ರಿ, ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ಸತ್ಯ ಹರಿಶ್ಚಂದ್ರ, ಅಣ್ಣ ತಂಗಿ, ಆದರ್ಶ ಪ್ರೇಮ, ಗಂಡನ ಆಜ್ಞೆ, ಮಲಮಗಳು, ಸ್ತ್ರೀ ರತ್ನ, ದೇವ ಮಾನವ, ರತ್ನ ಮಾಂಗಲ್ಯ, ಬಸ್ಸ ಹಮಾಲ ,ಬೆಳ್ಳಕ್ಕಿ ಹಿಂಡು ಬೆದರಾವು, ಜೋಕುಮಾರ ಸ್ವಾಮಿ ಇನ್ನೂ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ರಂಗ ಭೂಮಿಗೆ ಕಾಲಿಟ್ಟರು ಡಾ. ಕೆ.ನಾಗರತ್ನಮ್ಮ

ಕಲಾ ಸೇವೆ:
1966 ರಲ್ಲಿ ಲಲಿತಕಲಾ ರಂಗದ ಸದಸ್ಯೆಯಾಗಿದ್ದರು.1998 ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವೆ ಹಾಗೂ ಕಲೆಯನ್ನು ಗುರುತಿಸಿ ವರನಟ ಡಾ.ರಾಜಕುಮಾರ್ ಹಾಗೂ ಮಾಜಿ‌ ಮುಖ್ಯಮಂತ್ರಿ ಜೆ. ಹೆಚ್​.​​ ಪಟೇಲ್ ಅವರು ಸನ್ಮಾನಿಸಿದ್ದರು.

ರಾಜಕೀಯ ಪ್ರವೇಶ:
ನಾಟಕದ ಜೊತೆ ಜೊತೆಗೆ ರಾಜಕೀಯ ಬಾಗಿಲನ್ನು1976 ರಲ್ಲಿ ಪ್ರವೇಶಿಸಿದ್ದರು. ಆಗ ಮರೆಯಮ್ಮನಹಳ್ಳಿಯ ಗ್ರಾಮ ಪಂಚಾಯತ್​ ಸದಸ್ಯರಾಗಿ ಆಯ್ಕೆಯಾಗಿ, 1995 ರಿಂದ 2000ದ ವರೆಗೂ ಹೊಸಪೇಟೆ ತಾಲೂಕು ಪಂಚಾಯತ್​ ಸದಸ್ಯರು ಹಾಗೂ ತಾಲೂಕು ಪಂಚಾಯತ್​ ಉಪಾಧ್ಯಕ್ಷರಾಗಿ ರಾಜಕೀಯದಲ್ಲಿ ಜನರ ಮೆಚ್ಚುಗೆಯನ್ನು ಪಡೆದಿದ್ದರು. ಆದರೆ, ರಂಗ ಭೂಮಿಯನ್ನು ಮಾತ್ರ ಅವರು ಮರೆತಿಲ್ಲ.

ಪ್ರಶಸ್ತಿಗಳು:
1994 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1999ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, 2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಒಲಿದು ಬಂದಿದೆ. 2013 ರಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2016 ರಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಸಹ ಲಭಿಸಿರುವುದು ಇವರ ಕಲಾ ಸೇವೆಗೆ ಹಿಡಿದ ಕೈಗನ್ನಡಿಯಂತಿದೆ.

Intro: ಬಡತನದಲ್ಲಿ ಅರಳಿದ ಪ್ರತಿಭೆ : ಡಾ.ಕೆ.ನಾಗರತ್ನಮ್ಮ
ಹೊಸಪೇಟೆ : ಹೆಣ್ಣು ಎಂದರೆ, ಮನೆಯಲ್ಲಿ ಕೆಲಸ ಮಾಡಿಕೊಂಡು ಮಕ್ಕಳನ್ನು ಎತ್ತಿಕೊಂಡು ಇರುವವರು ಎಂದು ತಿಳಿದುಕೊಂಡಿರುತ್ತಾರೆ. ಬಾಲ್ಯದಲ್ಲಿಯೇ ಕಲೆಯನ್ನು ಕರಗತ ಮಾಡಿಕೊಂಡು ಕರ್ನಾಟಕ ಜನರ ಮನಸ್ಸನ್ನು ಗೆದ್ದ ರಂಗ ಬಡ ಕಲಾವಿದೆ ಅಪಾರವಾದ ಸಾಧನೆಯನ್ನು ಮಾಡಿದ್ದಾರೆ.ಡಾ. ಕೆ.ನಾಗರತ್ನಮ್ಮ

Body:ಡಾ.ಕೆ.ನಾಗರತ್ನಮ್ಮ ಅವರು 1952 ರಲ್ಲಿ ಜನಿಸುತ್ತಾರೆ. ತಂದೆ ಮಾರೆಪ್ಪ ತಾಯಿ ಸಿದ್ದಮ್ಮ ಇವರದ್ದು ಅವಿಭಕ್ತ ಕುಟುಂಬವಾಗಿತ್ತು. ಬಡತನದಲ್ಲಿ ಸಂಸಾರ ನಡೆಸುವುದು ತುಂಬಾ ಕಷ್ಟ ಎಂಬುವುದನ್ನು ನಾಗರತ್ನಮ್ಮ ಅವರು ತಂದೆಗೆ ಸಹಾಯ ಮಾಡಬೇಕು ಎಂಬ ಮನೋಭಾವದಿಂದ 1967 ರಲ್ಲಿ ರಂಗ ಭೂಮಿಗೆ ಪ್ರವೇಶವನ್ನು ಪಡೆಯುತ್ತಾರೆ.ಇವರು ಸುಮಾರು10 ಹತ್ತು ಸಾವಿರಕ್ಕೂ ‌ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಪ್ರಮುಖ ನಾಟಕಗಳು:
ರಕ್ತ ರಾತ್ರಿ, ಹೇಮರೆಡ್ಡಿ ಮಲ್ಲಮ್ಮ, ಕುರುಕ್ಷೇತ್ರ, ಭಕ್ತ ಸುಧನ್ವ, ಸತ್ಯ ಹರಿಶ್ಚಂದ್ರ, ಅಣ್ಣ ತಂಗಿ, ಆದರ್ಶ ಪ್ರೇಮ, ಗಂಡನ ಆಜ್ಞೆ, ಮಲಮಗಳು, ಸ್ತ್ರೀ ರತ್ನ, ದೇವ ಮಾನವ, ರತ್ನ ಮಾಂಗಲ್ಯ, ಬಸ್ಸ ಹಮಾಲ ,ಬೆಳ್ಳಕ್ಕಿ ಹಿಂಡು ಬೆದರಾವು,ಜೋಕುಮಾರ ಸ್ವಾಮಿ ಇನ್ನೂ ಮುಂತಾದ ನಾಟಕಗಳನ್ನು ಅಭಿನಯಿಸಿದ್ದಾರೆ.
ಕಲಾ ಸೇವೆ:
ಡಾ.ಕೆ. ನಾಗರತ್ನಮ್ಮ 1966 ರಲ್ಲಿ ಲಲಿತಕಲಾ ರಂಗದ ಸದಸ್ಯೆಯಾಗಿದ್ದರು.1998 ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದರು.ಮಹಿಳಾ ವೃತ್ತಿ ರಂಗದ ಕಲಾವಿದರ ಸಂಘದ ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದರು. ಇವರ ಸೇವೆಗೆ ಹಾಗೂ ಕಲೆಗೆ ವರನಟ ಡಾ.ರಾಜಕುಮಾರ್ ಹಾಗೂ ಮಾಜಿ‌ಮುಖ್ಯ ಮಂತ್ರಿ ಜೆ.ಹೆಜೆ.ಪಟೇಲ್ ಅವರ ಸನ್ಮಾನಿಸಿದರ. ಇವರ ಜೀವನ ಮತ್ತು ಬದುಕಿನ ನಾಟಕ,ರಾಜಕೀಯ ಸಾಧನೆಯನ್ನು ಕಲಬುರ್ಗಿ ವಿಶ್ವ ವಿದ್ಯಾಲಯ ಎಮ್.ಎ. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪಠ್ಯವನ್ನು ತಯಾರಿಸಿದ್ದಾರೆ ಎನ್ನುತ್ತಾರೆ ಕಲಾವಿದೆ.

ರಾಜಕೀಯ ಪ್ರವೇಶ
ನಾಟಕದ ಜೊತೆ ಜೊತೆಗೆ ರಾಜಕೀಯ ಬಾಗಿಲನ್ನು1976 ರಲ್ಲಿ ತೆರಯುತ್ತಾರೆ. ಮರೆಯಮ್ಮನ ಹಳ್ಳಿಯ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. 1995 ರಿಂದ 2000 ದ ವರೆಗೂ ಹೊಸಪೇಟೆ ತಾಲ್ಲೂಕ ಪಂಚಾಯತಿ ಸದಸ್ಯರು ಹಾಗೂ ತಾಲೂಕ ಪಂಚಾಯತ ಉಪಾಧ್ಯಕ್ಷರಾಗಿ ರಾಜಕೀಯದಲ್ಲಿ ಜನಮನ ಮೆಚ್ಚುಗೆಯನ್ನು ಪಡೆಯುತ್ತಾರೆ. ಆದರೆ ರಂಗ ಭೂಮಿಯನ್ನು ಮಾತ್ರ ಅವರು ಮರೆತ್ತಿಲ್ಲ.
ಪ್ರಶಸ್ತಿಗಳು:
ರಂಗಭೂಮಿ, ರಾಜಕೀಯ, ಹಾಗೂ‌ ಸಾಮಾಜಿಕಳಿಯಿಂದ ಇವರಿ ಪ್ರಶಸ್ತಿಗಳ ಮಹಾಪೂರವೇ ಹರದು ಬಂದಿದೆ.
1994 ರಲ್ಲಿ ಕರ್ನಾಟಕ ನಾಟಕ ಅಕ್ಯಾಡಮಿ ಪ್ರಶಸ್ತಿ ಲಭಿಸಿದೆ.1999ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ ಪಡೆದುಕೊಂಡಿದ್ದರೆ.2001ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರ ಮುಡಿಗೆ ಒಲಿದು ಬಂದಿದೆ. 2013 ರಲ್ಲಿ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಇವರಿಗೆ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.2016 ರಲ್ಲಿ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿದೆ ಇನ್ನೂ ಹಲವಾರು ಪ್ರಶಸ್ತಿಗಳು ಇವರನ್ನು ಹುಡಿಕಿಕೊಂಡು ಬಂದಿವೆ. ಇವರು ತಮ್ಮ ಇಳಿ ವಯಸ್ಸಿನಲ್ಲಿ ನಾಟಕದಲ್ಲಿ ಅಭಿನಯವನ್ನ ಮಾಡುತ್ತಿದ್ದಾರೆ. ಇವರ ಬಗ್ಗೆ ಸಾಕಷ್ಟು ಸಾಕ್ಷ್ಯ ಚಿತ್ರಗಳು, ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ ಎಂದು ಈ.ಟಿ.ವಿ ಭಾರತದೊಂದಿಗೆ ತಮ್ಮ ಜೀವನದ ಪಯಣವನ್ನು ಹಂಚಿಕೊಂಡಿದ್ದಾರೆ.

Conclusion:KN_HPT_10_DRAMA ARTIST NAGARTAMMA VISUALS_KA10028
bite: ಡಾ. ನಾಗರತ್ನಮ್ಮ ಕಲಾವಿದೆ.
ಚಿಕ್ಕ ವಯಸ್ಸಿನಲ್ಲಿ ರಂಗಭೂಮಿಯ ಕಡೆಗೆ ಜೀವನದ ಪಯಣವಾಗಿದೆ. ಬಡತನದಲ್ಲಿ ನೊಂದಿದ್ದೇವೆ. ಹೊಟ್ಟೆ ಜೀವನಕ್ಕಾಗಿ ನಾನು ರಂಗಭೂಮಿಯ ಕಲಾವಿದೆಯಾಗಿದ್ದೇನೆ. ಹತ್ತು ಸಾವಿರಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ಹಲವಾರು ರೀತಿಯಲ್ಲಿ ಪ್ರಶಸ್ತಿ ಹಾಗೂ ಗೌರವ ಸಲ್ಲಿಸಿದ್ದಾರೆ. ಪುಸ್ತಕಗಳು, ಸಾಕ್ಷ್ಯ ಚಿತ್ರಗಳನ್ನು ಸಹ ಮಾಡಿದ್ದಾರೆ. ದಿನ ಪತ್ರಿಕೆಯಲ್ಲಿ ಹಲವಾರು ಲೇಖನೆಗಳು ಪ್ರಕಟವಾಗಿವೆ ಎಂದು ಮಾತನಾಡಿದರು.
Last Updated : Oct 13, 2019, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.