ETV Bharat / state

ಗೆಳತಿಯರೊಂದಿಗೆ ಮೋಜು ಮಸ್ತಿ ಮಾಡಲು ದೇವಸ್ಥಾನದ ಹುಂಡಿಗೆ ಕನ್ನ: ಓರ್ವನ ಬಂಧನ - ಈಟಿವಿ ಭಾರತ ಕನ್ನಡ

ಮೋಜು ಮಸ್ತಿಗಾಗಿ ದೇವಾಲಯದ ಹುಂಡಿಗಳ ಕಳ್ಳತನ - ಓರ್ವ ಕಳ್ಳನನ್ನು ಬಂಧಿಸಿದ ದೊಡ್ಡಬಳ್ಳಾಪುರ ಪೊಲೀಸರು - ಹಲವು ಕಳ್ಳತನ ಪ್ರಕರಣ ಬೆಳಕಿಗೆ

doddaballapur-temple-hundi-theft-case-one-arrested
ಗೆಳತಿಯರೊಂದಿಗೆ ಮೋಜು ಮಸ್ತಿ ಮಾಡಲು ದೇವಸ್ಥಾನದ ಹುಂಡಿಗೆ ಕನ್ನ: ಓರ್ವನ ಬಂಧನ
author img

By

Published : Mar 11, 2023, 6:07 PM IST

ದೊಡ್ಡಬಳ್ಳಾಪುರ : ಗರ್ಲ್‌ ಫ್ರೆಂಡ್ಸ್‌ಗಳಿಗಾಗಿ ದೇವಾಲಯಗಳ ಕಾಣಿಕೆ ಹುಂಡಿಗಳಿಗೆ ಕನ್ನ ಹಾಕಿ, ಆ ಹಣದಿಂದ ಗೆಳತಿಯರೊಂದಿಗೆ ಮೋಜು - ಮಸ್ತಿ ಮಾಡುತ್ತಿದ್ದ ಕಳ್ಳನೊಬ್ಬನನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಿಪ್ಪೇಶ್​ ಎಂದು ಗುರುತಿಸಲಾಗಿದೆ. ಬಂಧಿತನಿಂದ ಕೃತ್ಯಕ್ಕೆ ಬಳಸಿದ ಬೈಕ್​ ಮತ್ತು ಮೊಬೈಲ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದ್ದ ದೇವಾಲಯಗಳಲ್ಲಿನ ಕಾಣಿಕೆ ಹುಂಡಿ ಸರಣಿ ಕಳ್ಳತನ ಪ್ರಕರಣಗಳಲ್ಲಿ ಬಂಧಿತ ತಿಪ್ಪೇಶ್​ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಿಪ್ಪೇಶ್​ನನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಹೆಜ್ಜಾಜಿಯಲ್ಲಿ ಇತ್ತೀಚೆಗೆ ನಡೆದಿದ್ದ ಹುಂಡಿ ಕಳವು ಪ್ರಕರಣದಲ್ಲಿ ತಿಪ್ಪೇಶ್ ಹಾಗೂ ಸಹಚರರು ಭಾಗಿಯಾಗಿದ್ದರು. ಪೊಲೀಸರಿಗೆ ಕೆಲವರ ಮೇಲೆ ಅನುಮಾನ ಇತ್ತು. ಇದೇ ವೇಳೆ ಶಿರಾ ಮೂಲದ ತಂಡವೊಂದು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ನಗರಠಾಣೆ ಪೊಲೀಸರು ರೈಲ್ವೆ ಸ್ಟೇಷನ್‌ ಬಳಿ ತಿಪ್ಪೇಶ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಯು ದೊಡ್ಡಬಳ್ಳಾಪುರ ನಗರದ ವೆಂಕರಮಣಸ್ವಾಮಿ ರಥೋತ್ಸವದ ವೇಳೆ ಬೈಕ್‌ ಕಳವು ಪ್ರಕರಣ ಹಾಗೂ ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ದೇವಾಲಯದಲ್ಲಿ ಹುಂಡಿ ಕಾಣಿಕೆ ಕಳವು ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಇದೇ ವೇಳೆ, ಪತ್ತೆಯಾಗಿದೆ. ತಿಪ್ಪೇಶ್ ಹಾಗೂ ಇನ್ನಿಬ್ಬರು ಸಹಚರರು ಜಾತ್ರೆ ಉತ್ಸವಗಳಲ್ಲಿ ದ್ವಿಚಕ್ರವಾಹನಗಳನ್ನು ಕದ್ದು ಕೃತ್ಯಕ್ಕೆ ಬಳಸುತ್ತಿದ್ದರು. ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿರುವ ದೇವಸ್ಧಾನವನ್ನು ಗುರಿಯಾಗಿಸಿಕೊಂಡು ಆರೋಪಿಗಳು ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 45 ಸಾವಿರ ಕದ್ದು ಪರಾರಿಯಾದ ಖದೀಮರು: ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿಯಲ್ಲಿ ಇರಿಸಿದ್ದ 45 ಸಾವಿರ ರೂಪಾಯಿಯನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಮಾಗಡಿ ಪೊಲೀಸ್​ ಠಾಣೆ ವ್ಯಾಪ್ತಿಯ ಯೂನಿಯನ್​ ಬ್ಯಾಂಕ್​ ಎದುರು ನಡೆದಿದೆ. ಖದೀಮರು ಹಣ ಎಗರಿಸುವ ದೃಶ್ಯ ಇಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿಯನ್ನು ಬ್ಯಾಂಕ್ ಎದುರು ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ ಸ್ಕೂಟಿಯಲ್ಲಿ ಇಟ್ಟಿದ್ದ 45 ಸಾವಿರ ರೂಪಾಯಿ ಕದ್ದು ಖದೀಮರು ಪರಾರಿಯಾಗಿದ್ದಾರೆ.

ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸವೇಶ್ವರ ಯೂನಿಯನ್ ಬ್ಯಾಂಕ್​ಗೆ ವ್ಯಕ್ತಿಯೊಬ್ಬರು ಹಣದ ಸಮೇತ ತಮ್ಮ ಸ್ಕೂಟಿಯಲ್ಲಿ ಬಂದಿದ್ದರು. ಈ ವ್ಯಕ್ತಿಯು ಸ್ಕೂಟಿಯಲ್ಲಿರಿಸಿದ್ದ ಹಣವನ್ನು ಅಲ್ಲಯೇ ಬ್ಯಾಂಕಿನ ಒಳಗೆ ಹೋಗಿದ್ದರು. ಈ ವೇಳೆ, ಕಾರ್ಯಪ್ರವೃತ್ತರಾದ ಇಬ್ಬರು ಕಳ್ಳರು ಸ್ಕೂಟಿಯಲ್ಲಿದ್ದ ಹಣ ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ : ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.