ETV Bharat / state

ಪ್ರದೇಶದ ಮೇಲಿನ ಹಕ್ಕಿಗಾಗಿ ಎರಡು ಚಿರತೆಗಳ ನಡುವೆ ಕಾಳಗ, ಹೆಣ್ಣು ಚಿರತೆ ಸಾವು - ಉಜ್ಜಿನಿ ಮತ್ತು ಮಾಕಳಿದುರ್ಗ ಅರಣ್ಯ ಪ್ರದೇಶ

ಅರಣ್ಯ ಪ್ರದೇಶದ ಮೇಲಿನ ಹಕ್ಕಿಗಾಗಿ ಎರಡು ಚಿರತೆಗಳ ನಡುವೆ ಕಾಳಗ ನಡೆದು, ಕಾಳಗದಲ್ಲಿ ಹೆಣ್ಣು ಚಿರತೆ ಗಾಯಗೊಂಡು ಆಹಾರ ಸಿಗದೆ ನಿತ್ರಾಣಗೊಂಡು ವಾರದ ಹಿಂದೆ ಸಾವನ್ನಪ್ಪಿರುವ ಸಾಧ್ಯತೆ ಇದೆ..

death of a female leopard
ಹೆಣ್ಣು ಚಿರತೆ ಸಾವು
author img

By

Published : Mar 19, 2021, 6:03 PM IST

ದೊಡ್ಡಬಳ್ಳಾಪುರ : ಅರಣ್ಯ ಪ್ರದೇಶದಲ್ಲಿನ ಹಕ್ಕಿಗಾಗಿ ಎರಡು ಚಿರತೆಗಳ ನಡುವೆ ಕಾಳಗ ನಡೆದು ಮೂರು ವರ್ಷದ ಹೆಣ್ಣು ಚಿರತೆ ಸಾವನ್ನಪ್ಪಿದ್ದು, ಅದರ ಕಳೆಬರಹ ಅರಣ್ಯದಲ್ಲಿ ಪತ್ತೆಯಾಗಿದೆ.

ಹೆಣ್ಣು ಚಿರತೆ ಸಾವು

ಓದಿ: 'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್​ ಸೆಟ್ ನಾಯಕರನ್ನು ದೂರವಿಡಿ'

ದೊಡ್ಡಬಳ್ಳಾಪುರ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಬಳಿಯ ಅರಣ್ಯದಲ್ಲಿ ಹೆಣ್ಣು ಚಿರತೆ ಕಳೆಬರ ಪತ್ತೆಯಾಗಿದೆ. ಗ್ರಾಮದ ಯುವಕರು ಅರಣ್ಯ ಪ್ರದೇಶಕ್ಕೆ ಹೋದಾಗ ಕೊಳೆತ ಸ್ಥಿತಿಯಲ್ಲಿದ್ದ ಚಿರತೆ ಕಳೆಬರ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಚಿರತೆಯ ಕಳೆಬರ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾಗ ಮೈಮೇಲೆ ಗಾಯದ ಗುರುತುಗಳಿವೆ. ಅರಣ್ಯ ಪ್ರದೇಶದ ಮೇಲಿನ ಹಕ್ಕಿಗಾಗಿ ಎರಡು ಚಿರತೆಗಳ ನಡುವೆ ಕಾಳಗ ನಡೆದು, ಕಾಳಗದಲ್ಲಿ ಹೆಣ್ಣು ಚಿರತೆ ಗಾಯಗೊಂಡು ಆಹಾರ ಸಿಗದೆ ನಿತ್ರಾಣಗೊಂಡು ವಾರದ ಹಿಂದೆ ಸಾವನ್ನಪ್ಪಿರುವ ಸಾಧ್ಯತೆ ಇದೆ.

ಉಜ್ಜಿನಿ ಮತ್ತು ಮಾಕಳಿದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯದ ಅಂಚಿನಲ್ಲಿರುವ ಗ್ರಾಮಗಳ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಚಿರತೆಗಳನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ಬೋನ್‌ಗಳನ್ನಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.