ನೆಲಮಂಗಲ: ಡಿಸಿಎಂ ಗೋವಿಂದ ಕಾರಜೋಳ ಅವರು ಬೆಂಗಳೂರು ಹೊರವಲಯದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಹಾಸ್ಟಲ್ಗೆ ಡಿಸಿಎಂ ದಿಢೀರ್ ಭೇಟಿ ನೀಡಿ, ಶಾಲಾ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇನ್ನು ವಿದ್ಯಾರ್ಥಿ ನಿಲಯದ ಸ್ವಚ್ಛತೆ, ಊಟ, ಯೋಗಕ್ಷೇಮದ ಬಗ್ಗೆ ವಿಚಾರಣೆ ನಡೆಸಿದರು. ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡದೇ ದಿಢೀರ್ ಭೇಟಿ ನಡೆಸಿ, ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದಾರೆ.
ಹಾಸ್ಟೆಲ್ ಮುಂದೆಯೇ ರಾಶಿ ರಾಶಿ ಕಸ ನೋಡಿ ಕಸ ನಿರ್ವಹಣೆಯಲ್ಲಿ ನೆಲಮಂಗಲ ಪುರಸಭೆ ವೈಫಲ್ಯವನ್ನು, ಪುರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಡಿಸಿಎಂ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು. ಡಿಕೆಶಿ ಬಂಧನ ಹಾಗೂ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.